ಈ ರೀತಿ ಮಾಡಿ ನೋಡಿ ಬದನೆ ಫ್ರೈ

Public TV
1 Min Read
brinjal fry

ದನೆಯನ್ನು ಮಕ್ಕಳು ಸೇರಿದಂತೆ ಹೆಚ್ಚಿನವರು ಇಷ್ಟ ಪಡಲ್ಲ. ಆದರೆ ಅದರ ನಿಜವಾದ ರುಚಿ ವಿವಿಧ ರೀತಿಯಲ್ಲಿ ಅಡುಗೆ ಮಾಡಿ ಸವಿದವರಿಗಷ್ಟೇ ಗೊತ್ತು. ನಾವಿಂದು ರುಚಿಕರ ಹಾಗೂ ಸುಲಭದ ಬದನೆ ಫ್ರೈ ರೆಸಿಪಿಯನ್ನು ಹೇಳಿಕೊಡುತ್ತೇವೆ. ಇದನ್ನು ಬದನೆ ಇಷ್ಟ ಪಡದವರು ಕೂಡಾ ಖಂಡಿತಾ ಇಷ್ಟಪಟ್ಟು ಸವಿಯುತ್ತಾರೆ. ಊಟದೊಂದಿಗೆ ಸೈಡ್ ಡಿಶ್ ಆಗಿಯೂ ಇದನ್ನು ಸವಿಯಬಹುದು. ಟೇಸ್ಟಿ ಬದನೆ ಫ್ರೈ ರೆಸಿಪಿ ಇಲ್ಲಿದೆ.

brinjal fry 2

ಬೇಕಾಗುವ ಪದಾರ್ಥಗಳು:
ಬದನೆ – 2
ಮೆಣಸಿನ ಪುಡಿ – ಒಂದೂವರೆ ಟೀಸ್ಪೂನ್
ಅರಿಶಿನ ಪುಡಿ – 1 ಟೀಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು
ಎಣ್ಣೆ – 4 ಟೀಸ್ಪೂನ್ ಇದನ್ನೂ ಓದಿ: ಕ್ರಿಸ್ಪಿ ಟೋಫು ಬೈಟ್ಸ್ – ಟೀ ಟೈಮ್‌ಗೆ ಪರ್ಫೆಕ್ಟ್

brinjal fry 1

ಮಾಡುವ ವಿಧಾನ:
* ಮೊದಲಿಗೆ ಬದನೆಯನ್ನು ತೆಳುವಾದ ಹೋಳುಗಳಾಗಿ ಕತ್ತರಿಸಿಕೊಳ್ಳಿ.
* ಒಂದು ಬೌಲ್‌ನಲ್ಲಿ ಮೆಣಸಿನ ಪುಡಿ, ಅರಿಶಿನ ಪುಡಿ ಮತ್ತು ಉಪ್ಪನ್ನು ಹಾಕಿ ಮಿಶ್ರಣ ಮಾಡಿ.
* ಬಳಿಕ ಬದನೆ ಹೋಳುಗಳಿಗೆ ಮೆಣಸಿನ ಪುಡಿ ಮಿಶ್ರಣವನ್ನು ಚೆನ್ನಾಗಿ ಕೋಟ್ ಆಗುವಂತೆ ಲೇಪಿಸಿಕೊಳ್ಳಿ.
* ಈಗ ಪ್ಯಾನ್‌ನಲ್ಲಿ ಎಣ್ಣೆ ಸುರಿದು, ಬಿಸಿಯಾದ ಬಳಿಕ ಬದನೆ ಹೋಳುಗಳನ್ನು ಅದರಲ್ಲಿ ಇಟ್ಟು ಕಡಿಮೆ ಉರಿಯಲ್ಲಿ ಫ್ರೈ ಮಾಡಿಕೊಳ್ಳಿ.
* ಬದನೆ ಹೋಳುಗಳ ಎರಡೂ ಬದಿ ಚೆನ್ನಾಗಿ ಬೇಯುವವರೆ ಫ್ರೈ ಮಾಡಿಕೊಳ್ಳಿ. ಬಳಿಕ ಅದನ್ನು ಪ್ಯಾನ್‌ನಿಂದ ತೆಗೆದು ಟಿಶ್ಯೂ ಪೇಪರ್ ಮೇಲೆ ಹರಡಿ.
* ಇದೀಗ ರುಚಿಕರ ಬದನೆ ಫ್ರೈ ತಯಾರಾಗಿದ್ದು, ಊಟದೊಂದಿಗೆ ಅಥವಾ ಹಾಗೆಯೇ ಸವಿಯಿರಿ. ಇದನ್ನೂ ಓದಿ: ನೀವೊಮ್ಮೆ ಟ್ರೈ ಮಾಡ್ಲೇ ಬೇಕು ಪೋಡಿ ಇಡ್ಲಿ

Share This Article