ಬೆಂಗಳೂರು: ಬಂಡೀಪುರ ಅರಣ್ಯ ಪ್ರದೇಶಕ್ಕೆ ಕಿಡಿಗೇಡಿಗಳೇ ಬೆಂಕಿ ಹಾಕಿದ್ರಾ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ. ಕೆಲ ಸಂಘಟನೆಗಳು ಅರಣ್ಯ ಪ್ರದೇಶಕ್ಕೆ ಬೆಂಕಿ ಹಾಕಿ ವಿದೇಶಗಳಿಂದ ಹಣ ಪಡೆಯಲು (ಫಾರಿನ್ ಫಂಡ್) ಮುಂದಾಗಿದ್ರು ಎಂಬ ಶಂಕೆ ವ್ಯಕ್ತವಾಗಿದೆ.
ಬಿದ್ದ ಜಾಗದ ಸ್ಯಾಟಲೈಟ್ ಪಿಕ್ಚರ್ ನಲ್ಲೂ ಕೂಡ ಇದು ಮಾನವನಿರ್ಮಿತ ಅಂತಾ ಬಯಲಾಗಿದೆ. ಗುಂಪು ಗುಂಪುಗಳಾಗಿ ಅಲ್ಲಲ್ಲಿ ಬೆಂಕಿ ಬಿದ್ದಿರೋದು ನೋಡಿದ್ರೆ ಇದು ಮಾನವ ನಿರ್ಮಿತ, ಉದ್ದೇಶಪೂರ್ವಕವಾಗಿ ಬೆಂಕಿ ಹಚ್ಚಿರೋದು ಎಂದು ಅರಣ್ಯ ಇಲಾಖೆಯಿಂದ ಶಂಕೆ ವ್ಯಕ್ತಪಡಿಸಿದೆ. ಈ ಹಿನ್ನೆಲೆಯಲ್ಲಿ ಬಂಡೀಪುರ ಬೆಂಕಿ ಪ್ರಕರಣವನ್ನು ಉನ್ನತ ತನಿಖೆಗಾಗಿ ಆದೇಶಿಸುವ ಸಾಧ್ಯತೆಗಳಿವೆ.
2014ರಲ್ಲಿ ಕೆಲ ಸಂಘಟನೆಗಳು ನಾಗರಹೊಳೆಗೆ ಬೆಂಕಿ ಹಾಕಿ ಫಾರಿನ್ ಫಂಡ್‍ಗೆ ಸ್ಕೆಚ್ ಹಾಕಿದ್ದವು. ರಾಜ್ಯದಲ್ಲಿ ಸರ್ಕಾರ ವಿಫಲವಾಗಿದ್ದು, ನಮ್ಮ ಸಂಘಟನೆಯೇ ಕೆಲಸ ಮಾಡುತ್ತಿದೆ ಎಂದು ತೋರಿಸಿ ಫಾರಿನ್ ಫಂಡ್ ಸಂಗ್ರಹಣೆಗೆ ಮುಂದಾಗಿದ್ದವು. ನಾಗರಹೊಳೆ ಪ್ರಕರಣವನ್ನು ಸಿಬಿಐಗೆ ವರ್ಗಾಯಿಸಿ ಎಂದು ಅರಣ್ಯಾಧಿಕಾರಿಗಳು ಸುದೀರ್ಘ ಪತ್ರ ಬರೆದಿದ್ದರು. ಪತ್ರ ಬರೆದ ಕೂಡಲೇ ಪದೇ ಪದೇ ನಾಗರಹೊಳೆಯಲ್ಲಿ ಬೆಂಕಿ ಬೀಳುತ್ತಿದ್ದು ಕಡಿಮೆಯಾಗಿತ್ತು.
2,500 ಎಕರೆ ಅರಣ್ಯ ಪ್ರದೇಶ ಮಾತ್ರ ಕಾಡ್ಗಿಚ್ಚಿನಿಂದ ಭಸ್ಮವಾಗಿದೆ ಎಂಬ ಸುಳ್ಳು ಮಾಹಿತಿಯನ್ನು ಅರಣ್ಯ ಇಲಾಖೆ ನೀಡಿದೆ. ಅರಣ್ಯ ನಾಶದ ಬಗ್ಗೆ ಸಮೀಕ್ಷೆ ನಡೆಸಿರುವ ಇಸ್ರೋ ಬೆಂಕಿಗೆ ಭಸ್ಮವಾದ ಒಟ್ಟು ಪ್ರದೇಶ 10,920 ಎಕರೆ (4,420 ಹೆಕ್ಟೇರ್) ಎಂದು ತಿಳಿಸಿದೆ. ಬೆಂಕಿ ನಂದಿಸಲು ವಿಫಲವಾದ ಅರಣ್ಯಾಧಿಕಾರಿಗಳು ಸುಳ್ಳು ಮಾಹಿತಿ ನೀಡಿದ್ದಾರೆ ಎನ್ನಲಾಗುತ್ತಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv