ನವದೆಹಲಿ: ಮುಂಬೈ ದಾಳಿಯ (Mumbai Attack) ಪ್ರಮುಖ ಸಂಚುಕೋರರಲ್ಲಿ ಒಬ್ಬನಾದ ತಹವ್ವೂರ್ ಹುಸೇನ್ ರಾಣಾ (Tahawwur Rana) 2008 ರ ಕೃತ್ಯದಲ್ಲಿ ತನ್ನ ಪಾತ್ರವನ್ನು ಒಪ್ಪಿಕೊಂಡಿದ್ದಾನೆ ಮತ್ತು ತಾನು ಪಾಕಿಸ್ತಾನಿ ಸೇನೆಯ (Pakistan Army) ವಿಶ್ವಾಸಾರ್ಹ ಏಜೆಂಟ್ ಎಂದು ಹೇಳಿಕೊಂಡಿದ್ದಾನೆ ಎಂದು ಮೂಲಗಳು ತಿಳಿಸಿವೆ.
ದೆಹಲಿಯ ತಿಹಾರ್ ಜೈಲಿನಲ್ಲಿ (Tihar Jail) ರಾಷ್ಟ್ರೀಯ ತನಿಖಾ ದಳದ (NIA) ವಶದಲ್ಲಿರುವ ರಾಣಾನನ್ನು ಮುಂಬೈ ಕ್ರೈಂ ಬ್ರ್ಯಾಂಚ್ ವಿಚಾರಣೆಯ ಸಂದರ್ಭದಲ್ಲಿ ತಾನು ಮತ್ತು ತನ್ನ ಸ್ನೇಹಿತ ಮತ್ತು ಸಹಾಯಕ ಡೇವಿಡ್ ಕೋಲ್ಮನ್ ಹೆಡ್ಲಿ ಪಾಕಿಸ್ತಾನ ಮೂಲದ ಲಷ್ಕರ್-ಎ-ತೊಯ್ಬಾ( Lashkar-e-Taiba) ಜೊತೆ ಹಲವಾರು ತರಬೇತಿ ಕಾರ್ಯ ನಡೆಸಿದ್ದೇವೆ ಎಂದು ತಿಳಿಸಿದ್ದಾನೆ. ಇದನ್ನೂ ಓದಿ: Mumbai Attack| ರಾಣಾ ವಿರುದ್ಧ ಸಾಕ್ಷಿ ನುಡಿಯಲಿದ್ದಾರೆ ನಿಗೂಢ ವ್ಯಕ್ತಿಗಳು!
ವಿಚಾರಣೆ ವೇಳೆ ಮುಂಬೈನಲ್ಲಿ ತನ್ನ ಸಂಸ್ಥೆಯ ವಲಸೆ ಕೇಂದ್ರವನ್ನು ತೆರೆಯುವ ಆಲೋಚನೆ ಇತ್ತು. ಮುಂಬೈ ದಾಳಿಯ ಸಮಯದಲ್ಲಿ ತಾನು ಮುಂಬೈನಲ್ಲಿದ್ದೆ ಮತ್ತು ಅದು ಭಯೋತ್ಪಾದಕರ ಯೋಜನೆಯ ಭಾಗವಾಗಿತ್ತು ಎಂದು ಹೇಳಿದ್ದಾನೆ. ಇದನ್ನೂ ಓದಿ: ರಾಣಾ ಕರೆತಂದ ವಿಮಾನಕ್ಕೆ ನೀಡಲಾಗಿತ್ತು ಡಮ್ಮಿ ಕೋಡ್, ಮಧ್ಯೆ 11 ಗಂಟೆ ಪಿಟ್ ಸ್ಟಾಪ್!
ದಾಳಿಗೂ ಮೊದಲು ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್‌ನಂತಹ ಸ್ಥಳಗಳನ್ನು ಪರಿಶೀಲಿಸಿದ್ದೆ. ಮುಂಬೈ ದಾಳಿಯನ್ನು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ (ಐಎಸ್‌ಐ) ಸಹಯೋಗದೊಂದಿಗೆ ನಡೆಸಲಾಗಿದೆ ಎಂದು ರಾಣಾ ಒಪ್ಪಿಕೊಂಡಿದ್ದಾನೆ.
ಗಲ್ಫ್ ಯುದ್ಧದ ಸಮಯದಲ್ಲಿ ಪಾಕಿಸ್ತಾನಿ ಸೇನೆಯು ತನ್ನನ್ನು ಸೌದಿ ಅರೇಬಿಯಾಕ್ಕೆ ಕಳುಹಿಸಿತ್ತು ಎಂದು 64 ವರ್ಷದ ರಾಣಾ ಹೇಳಿರುವುದಾಗಿ ಮೂಲಗಳು ತಿಳಿಸಿವೆ.