ಏರ್‌ಫೋರ್ಸ್‌ ಒನ್‌ ಮೆಟ್ಟಿಲ ಮೇಲೆ ಎಡವಿ ಬಿದ್ದ ಟ್ರಂಪ್‌ – ಎಲ್ರೂ ಕಾಲೆಳಿತದೆ ಕಾಲ ಎಂದ ನೆಟ್ಟಿಗರು!

Public TV
2 Min Read
Trump

ವಾಷಿಂಗ್ಟನ್‌: ಈ ಹಿಂದೆ ಅನೇಕ ಬಾರಿ ಮಾಜಿ ಅಧ್ಯಕ್ಷ ಜೋ ಬೈಡನ್‌ (Joe Biden) ಅವರ ದೈಹಿಕ ಕ್ಷಮತೆಯ ಬಗ್ಗೆ ಕುಹಕವಾಡಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump) ಈಗ ತಾವೇ ಪೇಚಿಗೆ ಸಿಲುಕಿದ್ದಾರೆ.

ಹೌದು. ಅಮೆರಿಕದ ಅಧ್ಯಕ್ಷ (US President) ಡೊನಾಲ್ಡ್ ಟ್ರಂಪ್ ಭಾನುವಾರ (ಜೂ8) ನ್ಯೂಜೆರ್ಸಿಯ ಮಾರಿಸ್ಟೌನ್‌ನಲ್ಲಿರುವ ಮಾರಿಸ್ಟೌನ್ ಮುನ್ಸಿಪಲ್ ವಿಮಾನ ನಿಲ್ದಾಣದಿಂದ ಹೊರಡುವ ವೇಳೆ, ಏರ್‌ಫೋರ್ಸ್ ಒನ್ (Air Force One) ಮೆಟ್ಟಿಲುಗಳನ್ನು ಹತ್ತುವಾಗಿ ಎಡವಿದ್ದಾರೆ. ಎಡವಿ ಬಿದ್ದ ಟ್ರಂಪ್‌ ಪುನಃ ತಮ್ಮನ್ನು ಸಾವರಿಸಿಕೊಂಡು, ಮೇಲೆದ್ದು ವಿಮಾನ ಹತ್ತಿದ್ದಾರೆ. ಈ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಸದ್ದು ಮಾಡುತ್ತಿದ್ದು, ಟ್ರಂಪ್‌ ನೆಟ್ಟಿಗರ ಬಾಯಿಗೆ ಆಹಾರವಾಗಿದ್ದಾರೆ. ಇದನ್ನೂ ಓದಿ: ಭಾರತದ ಬಳಿಯಿರುವಂತೆ ಅತ್ಯಾಧುನಿಕ ವಾಯುರಕ್ಷಣಾ ವ್ಯವಸ್ಥೆ ನಮಗೂ ಕೊಡಿ – ಅಮೆರಿಕಕ್ಕೆ ಪಾಕ್‌ ಬೇಡಿಕೆ

ಮಾರಿಸ್ಟೌನ್‌ ಮುನ್ಸಿಪಲ್‌ ವಿಮಾನ ನಿಲ್ದಾಣದಿಂದ ಕ್ಯಾಂಪ್ ಡೇವಿಡ್‌ಗೆ ಪ್ರಯಾಣ ಬೆಳೆಸುತ್ತಿದ್ದ ಟ್ರಂಪ್‌, ಏರ್‌ಫೋರ್ಸ್‌ ಒನ್‌ ಮೆಟ್ಟಿಲುಗಳನ್ನು ಹತ್ತುತ್ತಿದ್ದಾಗ ಈ ಪ್ರಸಂಗ ನಡೆದಿದೆ. ಟ್ರಂಪ್‌ ವಿಡಿಯೋ ವೈರಲ್‌ ಆಗ್ತಿದ್ದಂತೆ ನೆಟ್ಟಿಗರು ಟೀಕಿಸಲು ಶುರು ಮಾಡಿದ್ದಾರೆ. ಇದನ್ನೂ ಓದಿ: ಐತಿಹಾಸಿಕ ಕ್ಷಣಕ್ಕೆ ಭಾರತ ಸಜ್ಜು – ಜೂ.10ರಂದು ಭಾರತದ ಶುಭಾಂಶು ಶುಕ್ಲಾ ಬಾಹ್ಯಾಕಾಶ ಯಾನ ಶುರು

joe biden 1

ಅಲ್ಲದೇ ಈ ಹಿಂದೆ ಸಾರ್ವಜನಿಕ ಸಮಾರಂಭಗಳಲ್ಲಿ ಜೋ ಬೈಡನ್‌ ಅವರ ಪರಿಸ್ಥಿತಿ ಬಗ್ಗೆ ಆಡಿಕೊಳ್ಳುತ್ತಿದ್ದುದ್ದನ್ನು ನೆನಪಿಸಿ ಟ್ರಂಪ್‌ ಕಾಲೆಳೆಯುವ ಕೆಲಸ ಮಾಡಿದ್ದಾರೆ. ಬೈಡನ್‌ ಅವರನ್ನು ಅಣುಕಿಸಿದ್ದು ಈಗ ನೆನಪಾಯ್ತಾ? ಅಂತ ಪ್ರಶ್ನೆ ಮಾಡಿರೋದಲ್ಲದೇ ಕಾಲವೇ ಎಲ್ಲದಕ್ಕೂ ಉತ್ತರಿಸುತ್ತದೆ. ಟ್ರಂಪ್‌ಗೆ ವಯಸ್ಸಾಗಿದೆ, ವ್ಹೀಲ್‌ ಚೇರ್‌ನಲ್ಲಿ ಕೂರಲು ಇದು ಸೂಕ್ತ ಸಮಯ ಅಂತ ಟಾಂಗ್‌ ಕೊಟ್ಟಿದ್ದಾರೆ. ಇದನ್ನೂ ಓದಿ: ಭಾರತದ ವಾಯುನೆಲೆಗಳನ್ನು ಹೊಡೆದಿದ್ದೇವೆ: ನಕಲಿ ಉಪಗ್ರಹ ಚಿತ್ರ, ದೃಶ್ಯ ಹಂಚಿಕೊಂಡು ಮತ್ತೆ ಬೆತ್ತಲಾದ ಪಾಕ್‌

ಟ್ರಂಪ್‌ – ಬೈಡನ್‌ರನ್ನ ಆಡಿಕೊಂಡಿದ್ದೇಕೆ?
ಈ ಹಿಂದೆ ಜೋ ಬೈಡನ್‌ ತಮ್ಮ ಅಧ್ಯಕ್ಷೀಯ ಅವಧಿಯಲ್ಲಿ ಏರ್‌ಫೋರ್ಸ್‌ 1 ಮೆಟ್ಟಿಲು ಹತ್ತುವ ವೇಳೆ ಜಾರಿ ಬಿದ್ದಿದ್ದರು. ಈ ಘಟನೆಯನ್ನು ಡೊನಾಲ್ಡ್‌ ಟ್ರಂಪ್‌ ಸೇರಿದಂತೆ ಬಹುತೇಕ ಜೋ ಬೈಡನ್‌ ವಿರೋಧಿಗಳು ತಮ್ಮ ಪ್ರಚಾರಕ್ಕಾಗಿ ಬಳಸಿಕೊಂಡಿದ್ದರು. ಟ್ರಂಪ್‌ ಅವರು ʻಇಂತಹ ವಯಸ್ಸಾದ ಮತ್ತು ದೈಹಿಕ ಅಸಮರ್ಥತೆ ಹೊಂದಿರುವ ನಾಯಕ ಅಮೆರಿಕಕ್ಕೆ ಅವಶ್ಯಕತೆ ಇಲ್ಲʼ ಎಂದು ಸಹ ಬೈಡನ್‌ ಅವರ ಕಾಲೆಳೆದಿದ್ದರು. ಇದನ್ನೂ ಓದಿ: ಹನಿಮೂನ್‌ ಮರ್ಡರ್‌ | ನನ್ನ ಮಗಳು 100% ಮುಗ್ಧೆ – CBI ತನಿಖೆಗಾಗಿ ಅಮಿತ್ ಶಾಗೆ ಮನವಿ ಮಾಡ್ತೇನೆ: ಸೋನಮ್‌ ತಂದೆ

Share This Article