ಹೈದರಾಬಾದ್: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವೀಸಾ ನೀತಿಯಿಂದಾಗಿ ಅಮೆರಿಕದಿಂದ ಭಾರತಕ್ಕೆ ಹಿಂದಿರುಗಿದ್ದ ಟೆಕ್ಕಿಯೊಬ್ಬರ ಪತ್ನಿಯೊಬ್ಬರು ನೇಣಿಗೆ ಶರಣಾಗಿದ್ದಾರೆ.
ಹೈದರಾಬಾದ್ ನ ಅಲ್ಕಾಪುರ ಕಾಲೋನಿಯ ಪಪ್ಪಲಗುಡದ ನಿವಾಸಿಯಾದ ಟೆಕ್ಕಿ ಸಂಜಯ್ ಶರ್ಮಾ ಅವರ ಪತ್ನಿ ರಶ್ಮಿ(39) ತಮ್ಮ ನಿವಾಸದಲ್ಲಿ ಗುರುವಾರ ನೇಣಿಗೆ ಶರಣಾಗಿದ್ದಾರೆ. ಸಂಜಯ್ ಮತ್ತು ಅವರ ಮಕ್ಕಳು ಲ್ಯಾಪ್ ಟಾಪ್ ರಿಪೇರಿ ಮಾಡಿಸಲು ಮನೆಯಿಂದ ಹೊರಗಡೆಗೆ ತೆರಳಿದ್ದಾಗ ರಶ್ಮಿ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
- Advertisement -
ಸಂಜಯ್ ಶರ್ಮಾ ಉತ್ತರ ಪ್ರದೇಶದ ಫರೀದಾಬಾದ್ ಮೂಲದವರಾಗಿದ್ದು, ಕಳೆದ 8 ವರ್ಷಗಳಿಂದ ಅವರು ಬ್ಯಾಂಕ್ ಆಫ್ ಅಮೆರಿಕದಲ್ಲಿ ಟೆಕ್ಕಿಯಾಗಿ ಕೆಲಸ ಮಾಡುತ್ತಿದ್ದರು. ಅಮೆರಿಕದ ನೂತನ ನೀತಿಯಿಂದಾಗಿ ಸಂಜಯ್ ಶರ್ಮಾ ಅವರ ಎಚ್-1ಬಿ ವೀಸಾ ಅವಧಿಯನ್ನು ಮುಂದುವರಿಸಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದರು. ಇದರಿಂದಾಗಿ ಸಂಜಯ್ ಶರ್ಮಾ ಉದ್ಯೋಗ ಕಳೆದುಕೊಂಡಿದ್ದರು.
- Advertisement -
ಅನಿವಾರ್ಯವಾಗಿ ಭಾರತಕ್ಕೆ ಮರಳಲೇಬೇಕಾಗಿದ್ದರಿಂದ ಸಂಜಯ್ ಶರ್ಮಾ ಮಾರುಕಟ್ಟೆಯ ಬೆಲೆಗಿಂತಲೂ ಕಡಿಮೆ ಬೆಲೆಗೆ ಆಸ್ತಿ ಮತ್ತು ಪಿಠೋಪಕರಣಗಳನ್ನು ಮಾರಾಟ ಮಾಡಿದ್ದರು. ಅಮೆರಿಕದಿಂದ ಬಂದ ಬಳಿಕ ಹೈದರಾಬಾದ್‍ನ ರಹೇಜಾ ಐಟಿ ಪಾರ್ಕ್ ನಲ್ಲಿರುವ ಕಂಪೆನಿಯೊಂದರಲ್ಲಿ ಸಂಜಯ್ ಶರ್ಮಾ ಉದ್ಯೋಗಕ್ಕೆ ಸೇರಿಕೊಂಡಿದ್ದರು.
- Advertisement -
ಪತಿ ಅಮೆರಿಕದಲ್ಲಿ ಉದ್ಯೋಗ ಕಳೆದುಕೊಂಡಿದ್ದರಿಂದ ರಶ್ಮಿ ಬೇಸರಗೊಂಡಿದ್ದರು. ಅಷ್ಟೇ ಅಲ್ಲದೇ ಭಾರತಕ್ಕೆ ವಾಪಸ್ ಆಗಲು ಇಷ್ಟವಿರಲಿಲ್ಲ. ಭಾರೀ ಮನನೊಂದಿದ್ದ ರಶ್ಮಿ ಈಗ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಹೇಳಲಾಗುತ್ತಿದೆ.
- Advertisement -
ಪೊಲೀಸರು ಅನುಮಾನಾಸ್ಪದ ಸಾವು ಎಂದು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ರಶ್ಮಿಗೆ ದೆಹಲಿ ಸೇರಿದಂತೆ ಭಾರತದ ಯಾವ ಭಾಗದಲ್ಲೂ ನೆಲೆಸಲು ಇಷ್ಟವಿರಲಿಲ್ಲ. ಭಾರತಕ್ಕೆ ಮರಳಿದ ಬಳಿಕ ಆಕೆ ಮಾನಸಿಕ ಖಿನ್ನತೆಗೆ ಒಳಗಾಗಿದ್ದಳು ಎಂದು ಸಂಬಂಧಿಕರ ಹೇಳಿಕೆಯನ್ನು ಆಧಾರಿಸಿ ಮಾಧ್ಯಮಗಳು ವರದಿ ಮಾಡಿವೆ.
ಇದನ್ನೂ ಓದಿ: ಭಾರತೀಯ ಮೂಲದ ಸಿಇಒ ಸುಂದರ್ ಪಿಚೈಗೆ ಗೂಗಲ್ 2016ರಲ್ಲಿ ನೀಡಿದ ಸಂಬಳ ಎಷ್ಟು ಗೊತ್ತೆ?
ಕನಿಷ್ಠ ಸಂಬಳ ಈಗ ಎಷ್ಟಿರಬೇಕು?
ಕನಿಷ್ಠ 1,30,000 ಡಾಲರ್(ಅಂದಾಜು 88.17 ಲಕ್ಷ ರೂ.) ಸಂಬಳ ಹೊಂದಿದ ಉದ್ಯೋಗಿಗಳಿಗೆ ಮಾತ್ರ ಎಚ್-1ಬಿ ವೀಸಾ ನೀಡಲು ಅಮೆರಿಕ ಸರ್ಕಾರ ಮುಂದಾಗಿದೆ. ಎಚ್-1ಬಿ ವೀಸಾದ ಕಾನೂನು ತಿದ್ದುಪಡಿಯಾಗಿದ್ದು, ಎಚ್-1ಬಿ ವೀಸಾ ಪಡೆಯಲು ಉದ್ಯೋಗಿಗಳಿಗೆ ಕನಿಷ್ಠ 1.30 ಲಕ್ಷ ಡಾಲರ್ ಸಂಬಳ ನೀಡಬೇಕೆಂಬ ಅಂಶವಿದೆ.
ಇಲ್ಲಿಯವರೆಗೆ ಎಚ್-1ಬಿ ವೀಸಾ ಹೊಂದಿದವರಿಗೆ ಕನಿಷ್ಠ ಸಂಬಳದ ಮಿತಿ 60 ಸಾವಿರ ಡಾಲರ್(40.69 ಲಕ್ಷ ರೂ.) ಇತ್ತು. 1989ರ ಜಾರಿಗೆ ಬಂದಿದ್ದ ಈ ವೀಸಾ ನಿಯಮದಲ್ಲಿ ಇದೂವರೆಗೆ ಯಾವುದೇ ಬದಲಾವಣೆ ಆಗಿರಲಿಲ್ಲ. ಹೀಗಾಗಿ ಭಾರತೀಯ ಸಾಫ್ಟ್ ವೇರ್ ಕಂಪೆನಿಗಳು ಟೆಕ್ಕಿಗಳನ್ನು ಎಚ್-1ಬಿ ವೀಸಾದ ಅಡಿಯಲ್ಲಿ ಅಮೆರಿಕ ದೇಶಕ್ಕೆ ಕಳುಹಿಸಿಕೊಡುತಿತ್ತು. ಆದರೆ ಈಗ ಈ ವೀಸಾದ ಅಡಿ ಅಮೆರಿಕಕ್ಕೆ ತೆರಳುವ ಉದ್ಯೋಗಿಗಳ ಸಂಬಳದ ಮಿತಿ ಡಬಲ್ ಆಗಿದೆ.
ಇದನ್ನೂ ಓದಿ: ಉದ್ಯೋಗ ನೀಡುವಂತೆ ಗೂಗಲ್‍ಗೆ 7ರ ಬಾಲಕಿಯಿಂದ ಪತ್ರ: ಸಿಇಒ ಪಿಚೈ ನೀಡಿದ ಉತ್ತರ ಇದು