ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donalad Trump) ಬಹುನಿರೀಕ್ಷಿತ ಗೋಲ್ಡ್ ಕಾರ್ಡ್ ವೀಸಾವನ್ನು (Gold Card Visa) ಬಿಡುಗಡೆ ಮಾಡಿದರು. ಈ ಗೋಲ್ಡ್ ಕಾರ್ಡ್ ಪಡೆಯಬೇಕಾದರೆ ವ್ಯಕ್ತಿಗಳಿಗೆ 1 ಮಿಲಿಯನ್ ಡಾಲರ್(ಅಂದಾಜು 90 ಲಕ್ಷ ರೂ.), ವಿದೇಶಿ ವ್ಯಕ್ತಿಗಳಿಗೆ ಉದ್ಯೋಗ ನೀಡುವ ಕಂಪನಿಗಳು 2 ಮಿಲಿಯನ್ ಡಾಲರ್(ಅಂದಾಜು 1.80 ಕೋಟಿ ರೂ.) ದರ ನಿಗದಿ ಮಾಡಲಾಗಿದೆ.
ಈ ಹೊಸ ವ್ಯವಸ್ಥೆಯ ಬಗ್ಗೆ ಮಾತನಾಡಿದ ಟ್ರಂಪ್, ಜಾಗತಿಕ ಪ್ರತಿಭೆಗಳನ್ನು ಆಕರ್ಷಿಸುವ ಸಾಧನ ಇದಾಗಿದ್ದು ಕಾರ್ಯಕ್ರಮದ ಭಾಗವಾಗಿ ಪಡೆದುಕೊಳ್ಳುವ ಎಲ್ಲಾ ನಿಧಿಗಳು ಅಮೆರಿಕ ಸರ್ಕಾರದ ಖಜಾನೆಗೆ ಹೋಗುತ್ತವೆ. ಖಜಾನೆಗೆ ಅಗಾಧ ಪ್ರಮಾಣದ ಹಣ ಬರಲಿದೆ ಎಂದು ಹೇಳಿದರು.
ಈ ಸೆಪ್ಟೆಂಬರ್‌ನಲ್ಲಿ ಟ್ರಂಪ್ ಅಮೆರಿಕದ ವೀಸಾ ಪಡೆಯಲು ಗೋಲ್ಡ್ ಕಾರ್ಡ್ ಪರಿಚಯಿಸುವುದಾಗಿ ಘೋಷಿಸಿದ್ದರು. ಗೋಲ್ಡ್ ಕಾರ್ಡ್ ಅಲ್ಲದೇ 5 ಮಿಲಿಯನ್ ಡಾಲರ್‌ನ ಪ್ಲಾಟಿನಂ ಕಾರ್ಡ್ ಅನ್ನು ಪರಿಚಯಿಸಲಾಗಿದೆ. ಈ ಕಾರ್ಡ್ ಹೊಂದಿದವರು 270 ದಿನ ಅಮೆರಿಕದಲ್ಲಿ ಕಳೆಯಲು ಅನುವು ಮಾಡಿಕೊಡುತ್ತದೆ. ಇದನ್ನೂ ಓದಿ: ಅಮೆರಿಕ ಆಯ್ತು ಈಗ ಮೆಕ್ಸಿಕೋ – ಭಾರತದ ವಸ್ತುಗಳಿಗೆ 50% ಸುಂಕ
.@POTUS signs an Executive Order to create the Gold Card visa program, facilitating expedited immigration for aliens who make significant financial gifts to the United States. pic.twitter.com/l0kMUdQh3f
— Rapid Response 47 (@RapidResponse47) September 19, 2025
ಯಾವೆಲ್ಲ ದಾಖಲೆ ಅಗತ್ಯವಿದೆ?
ಬಳಸಿದ ಎಲ್ಲಾ ಹೆಸರುಗಳು, ಪೌರತ್ವ, ಪಾಸ್‌ಪೋರ್ಟ್ ವಿವರಗಳು ಮತ್ತು US ಪ್ರವೇಶ ಇತಿಹಾಸ
20 ವರ್ಷಗಳ ಉದ್ಯೋಗ ಇತಿಹಾಸ
ಮಿಲಿಟರಿ ಅಥವಾ ಸರ್ಕಾರಿ ಸೇವೆ
ಪೂರ್ಣ ಶೈಕ್ಷಣಿಕ ಇತಿಹಾಸ
ಸಂಪೂರ್ಣ ವೈವಾಹಿಕ ಇತಿಹಾಸ
ಸಂಗಾತಿಗಳು ಮತ್ತು ಮಕ್ಕಳು ಹೊಂದಾಣಿಕೆಯ ಮಾಹಿತಿಯೊಂದಿಗೆ ತಮ್ಮದೇ ಆದ ಪೂರಕಗಳನ್ನು ಸಲ್ಲಿಸಬೇಕು.
ಹಣಕಾಸು ದಾಖಲೆ
ಸ್ವತಃ ಅರ್ಜಿದಾರರು ನಿವ್ವಳ ಮೌಲ್ಯ ಮತ್ತು ಅವರ ನಿಧಿಯ ಮೂಲದ ವಿವರವಾದ ಪುರಾವೆಗಳನ್ನು ಒದಗಿಸಬೇಕು.
ಐದು ವರ್ಷಗಳ ಬ್ಯಾಂಕ್ ವ್ಯವಹಾರ
ಏಳು ವರ್ಷಗಳ ತೆರಿಗೆ ರಿಟರ್ನ್ಸ್
ಆದಾಯ ಪ್ರಮಾಣಪತ್ರಗಳು
ಆಸ್ತಿ ಮಾರಾಟ ದಾಖಲೆಗಳು ಮತ್ತು ಮೌಲ್ಯಮಾಪನಗಳು
ವ್ಯವಹಾರ ದಾಖಲೆಗಳು ಮತ್ತು ತೆರಿಗೆ ಸಲ್ಲಿಕೆಗಳು
ಉಡುಗೊರೆ, ಆನುವಂಶಿಕತೆ ಅಥವಾ ವಿಮಾ ಪತ್ರಗಳು

