ವಾಷಿಂಗ್ಟನ್: ಅಮೆರಿಕ (America), ಇಸ್ರೇಲ್ (Israel) ಹಾಗೂ ಇರಾನ್ ನಡುವೆ ಕದನ ವಿರಾಮ ಘೋಷಣೆಯಾದ ಬೆನ್ನಲ್ಲೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಇರಾನ್‌ಗೆ ಖಡಕ್ ಎಚ್ಚರಿಕೆಯ ಸಂದೇಶವೊಂದನ್ನು ರವಾನಿದ್ದಾರೆ. ಕದನ ವಿರಾಮ ಮುರಿಯುವ ತನಕ ಮಾತ್ರ ಇರಾನ್‍ನ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳು ಸುರಕ್ಷಿತವಾಗಿ ಇರಲಿವೆ. ಒಂದು ವೇಳೆ ಒಪ್ಪಂದ ಮುರಿದಿದ್ದೇ ಆದರೆ, ಭಾರೀ ದಾಳಿ ಸಂಭವಿಸಲಿದೆ. ಆ ದಾಳಿ ಹಿಂದೆಂದಿಗಿಂತಲೂ ಭೀಕರವಾಗಿರಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಇನ್ನು ಮುಂದೆ ಹಾರ್ಮುಜ್ ಜಲಸಂಧಿ ಸುರಕ್ಷಿತವಾಗಿ ಮತ್ತು ಮುಕ್ತವಾಗಿ ಇರಲಿದೆ. ಇರಾನ್ ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದುವುದಿಲ್ಲ ಎಂದು ಟ್ರಂಪ್ ದೃಢಪಡಿಸಿದರು. ಅಲ್ಲದೇ ಒಪ್ಪಂದವನ್ನು ಅಂತಿಮಗೊಳಿಸುವವರೆಗೆ ಇರಾನ್ ಮತ್ತು ಸುತ್ತಮುತ್ತ ಅಮೆರಿಕದ ಪಡೆಗಳನ್ನು ನಿಯೋಜಿಸಲಾಗುವುದು. ನಮ್ಮ ಸೇನೆ ಲೋಡ್ ಆಗುತ್ತಿದೆ ಮತ್ತು ವಿಶ್ರಾಂತಿ ಪಡೆಯುತ್ತಿದೆ. ವಾಸ್ತವವಾಗಿ, ಅದು ಮುಂದಿನ ವಿಜಯಕ್ಕಾಗಿ ಎದುರು ನೋಡುತ್ತಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: US-Iran Ceasefire| ಹಾರ್ಮುಜ್‌ನಲ್ಲಿ ಸಂಚಾರಕ್ಕೆ 2 ಹೊಸ ಪರ್ಯಾಯ ಮಾರ್ಗ ಪ್ರಕಟಿಸಿದ IRGC
ಏ.7 ರಂದು ಅಮೆರಿಕ (USA) ಮತ್ತು ಇರಾನ್ (Iran) ನಡುವಿನ ಯುದ್ಧಕ್ಕೆ 14 ದಿನಗಳ ಕದನ ವಿರಾಮ (Ceasefire) ಘೋಷಣೆಯಾಗಿತ್ತು. ಕದನ ವಿರಾಮ ಘೋಷಣೆಗೂ ಮುನ್ನ ಇರಾನ್ 10 ಷರತ್ತುಗಳನ್ನು ವಿಧಿಸಿದೆ. ಈ ಷರತ್ತುಗಳನ್ನು ಅಮೆರಿಕ(USA) ಯಾವ ರೀತಿ ಸ್ವೀಕರಿಸುತ್ತದೆ ಎನ್ನುವುದರ ಮೇಲೆ ಕದನ ವಿರಾಮ ಭವಿಷ್ಯ ನಿರ್ಧಾರವಾಗಲಿದೆ.
ಇರಾನ್ ಕಡೆಯಿಂದ 10 ಅಂಶಗಳ ಪ್ರಸ್ತಾವನೆಯನ್ನು ಸ್ವೀಕರಿಸಲಾಗಿದ್ದು, ಇದು ಶಾಶ್ವತ ಶಾಂತಿ ಮಾತುಕತೆಗೆ ಉತ್ತಮ ಆಧಾರವಾಗಿದೆ. ಈ ಎರಡು ವಾರಗಳ ಸಮಯವು ಇರಾನ್ ಮತ್ತು ಅಮೆರಿಕದ ನಡುವೆ ದೀರ್ಘಕಾಲದ ಶಾಂತಿ ಒಪ್ಪಂದವನ್ನು ಅಂತಿಮಗೊಳಿಸಲು ಮತ್ತು ಪೂರ್ಣಗೊಳಿಸಲು ಸಹಕಾರಿಯಾಗಲಿದೆ. ಇದನ್ನೂ ಓದಿ: ಕದನ ವಿರಾಮ ಘೋಷಣೆ ಬೆನ್ನಲ್ಲೇ 10 ನಿಮಿಷದಲ್ಲಿ ಲೆಬನಾನ್ ಮೇಲೆ ಇಸ್ರೇಲ್‌ನಿಂದ 100 ಕ್ಷಿಪಣಿ ದಾಳಿ

