ಮುಂಬೈ: ʻಆಪರೇಷನ್ ಸಿಂಧೂರʼಕ್ಕೆ ಕದನ ವಿರಾಮ ಘೋಷಣೆಯಾದಾಗ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ನಾನೇ ಯುದ್ಧ ನಿಲ್ಲಿಸಿದ್ದು, ನಿಲ್ಲಿಸಿದ್ದು ಅಂತ ಬಾಯಿ ಬಡಿದುಕೊಳ್ತಿದ್ದಾರೆ. ಈಗಲೂ ಸಿಕ್ಕ ಸಿಕ್ಕ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಬೊಗಳೆ ಬಿಡುವುದು ಕಡಿಮೆಯಾಗಿಲ್ಲ. ಈ ಮಧ್ಯೆ ಕ್ರಿಕೆಟ್‌ನಲ್ಲೂ ಭಾರತ – ಪಾಕಿಸ್ತಾನದ (India vs Pakistan) ನಡುವೆ ಅಮೆರಿಕ ಎಂಟ್ರಿ ಕೊಟ್ಟಿದ್ದು, ಟ್ರಂಪ್ ಮಧ್ಯಸ್ಥಿಕೆ ವಹಿಸ್ತಾರಾ ಅಂತ ನೆಟ್ಟಿಗರು ಕಾಲೆಳೆದಿದ್ದಾರೆ.
Trump 🇺🇸 mediating between India 🇮🇳 and Pakistan 🇵🇰 pic.twitter.com/2YLdLnQZE9
— Yo Yo Funny Singh (@moronhumor) February 15, 2026
ನೆಟ್ಟಿಗರು ಈ ರೀತಿ ಟ್ರೋಲ್ ಮಾಡೋದಕ್ಕೆ ಕಾರಣವೂ ಇದೆ. ಪ್ರಸ್ತುತ ಟಿ20 ವಿಶ್ವಕಪ್ ಅಂಕಪಟ್ಟಿಯಲ್ಲಿ ಭಾರತ ಮತ್ತು ಪಾಕ್ ನಡುವೆ ಅಮೆರಿಕ ಸ್ಥಾನ ಪಡೆದಿರುವುದೇ ಇದಕ್ಕೆ ಕಾರಣವಾಗಿದೆ. ಇದನ್ನೂ ಓದಿ: T20 World Cup | ಫಿಲಿಪ್ಸ್ ಆಲ್‌ರೌಂಡ್ ಆಟಕ್ಕೆ ಒಲಿದ ಜಯ – ಸೂಪರ್-8 ಗೆ ಜಿಗಿದ ಕಿವೀಸ್
A Pakistani youtuber smashed cake on the face of his own sister after pakistan lost brutally to India 😂#INDvsPAK pic.twitter.com/70xyakcRA5
— Makya (@ccdx_2) February 15, 2026
ಟಿ20 ವಿಶ್ವಕಪ್ (T20 World Cup) ಟೂರ್ನಿಯಲ್ಲಿ ಎ ಗುಂಪಿನಲ್ಲಿರುವ ಭಾರತ ಪಾಕಿಸ್ತಾನ, ನೆದರ್ಲೆಂಡ್, ಅಮೆರಿಕ ಮತ್ತು ನಮೀಬಿಯಾ ತಂಡಗಳು ಇವೆ. 3 ಪಂದ್ಯಗಳನ್ನೂ ಗೆದ್ದಿರುವ ಭಾರತ ಅಗ್ರಸ್ಥಾನದಲ್ಲಿದ್ದು, ಸೂಪರ್-8 ತಲುಪಿದೆ. 2ನೇ ಸ್ಥಾನಕ್ಕಾಗಿ ಪಾಕ್ ಮತ್ತು ಅಮೆರಿಕ ನಡುವೆ ಪೈಪೋಟಿ ನಡೆದಿದೆ. ಅಮೆರಿಕ ತಂಡ 4 ಪಂದ್ಯಗಳಲ್ಲಿ 2 ಪಂದ್ಯ ಗೆದ್ದಿದ್ದರೂ ಪಾಕ್‌ಗಿಂತ ಉತ್ತಮ ರನ್‌ರೇಟ್ ಹೊಂದಿರುವುದರಿಂದ 4 ಅಂಕ ಪಡೆದು 2ನೇ ಸ್ಥಾನದಲ್ಲಿದೆ. ಪಾಕಿಸ್ತಾನಕ್ಕೆ ಇನ್ನೂ 1 ಪಂದ್ಯ ಅವಕಾಶ ಇರೋದ್ರಿಂದ ಸೂಪರ್-8 ತಲುಪುವ ಅವಕಾಶವಿದೆ.

ನಾಳೆ (ಫೆ.17) ನಮೀಬಿಯಾ ವಿರುದ್ಧ ನಡೆಯಲಿರುವ ಪಂದ್ಯದಲ್ಲಿ ಪಾಕಿಸ್ತಾನ ಗೆದ್ದರೆ, ಸೂಪರ್-8 ಹಂತ ಪ್ರವೇಶಿಸಲಿದೆ. ಇಲ್ಲದಿದ್ದರೆ 2ನೇ ಸ್ಥಾನದಲ್ಲಿರುವ ಅಮೆರಿಕ ತಂಡ ಸೂಪರ್-8ಕ್ಕೆ ಅರ್ಹತೆ ಪಡೆಯಲಿದೆ. ಹೀಗಾಗಿ ಅಮೆರಿಕ ಸೂಪರ್ 8ಕ್ಕೆ ಅರ್ಹತೆ ಪಡೆಯಲು ಟ್ರಂಪ್ ಪಾಕಿಸ್ತಾನದ ಜೊತೆಗೆ ಮಾತುಕತೆ ನಡೆಸುತ್ತಾರಾ ಅಂತ ನೆಟ್ಟಿಗರು ಟ್ರೋಲಿಗೆಳೆದಿದ್ದಾರೆ. ಇದನ್ನೂ ಓದಿ: T20 World Cup | ಬಲಿಷ್ಠ ಕಿವೀಸ್ ವಿರುದ್ಧ ಭರ್ಜರಿ ಶತಕ – ಇತಿಹಾಸ ನಿರ್ಮಿಸಿದ ಕೆನಡಾ ʻಸಾಮ್ರಾʼಟ್

