ವಾಷಿಂಗ್ಟನ್/ಒಟ್ಟಾವ: ಕೆನಾಡದ ಆಮದುಗಳ ಮೇಲೆ 10% ಹೆಚ್ಚುವರಿ ಸುಂಕ ವಿಧಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಘೋಷಣೆ ಮಾಡಿದ್ದಾರೆ.
MLB ವಿಶ್ವ ಸರಣಿಯ ಮೊದಲ ಪಂದ್ಯದಲ್ಲಿ ಒಂಟಾರಿಯೋ (Ontario) ಸರ್ಕಾರ 75 ದಶಲಕ್ಷ ಡಾಲರ್ (USD) ವ್ಯಯಿಸಿ ಟಿವಿ ಜಾಹೀರಾತು ಪ್ರಕಟಿಸಿತ್ತು. ಟ್ರಂಪ್ ಅವರು ಒಮ್ಮೆ ದೃಢನಿಶ್ಚಯ ಮಾಡಿದ್ರೆ ಅದನ್ನು ಮಾಡೇ ಮಾಡುತ್ತಾರೆ, ತನ್ನ ಮಾತನ್ನ ತಾನೇ ಕೇಳಲ್ಲ ಅಂತ ಜಾಹೀರಾತು ಪ್ರಸಾರ ಮಾಡಿತ್ತು. ಇದರಿಂದ ಸಿಟ್ಟಿಗೆದ್ದ ಟ್ರಂಪ್ ಕೆನಡಾ ಮೇಲೆ ಹೆಚ್ಚುವರಿ ಸುಂಕ ವಿಧಿಸುವ ನಿರ್ಧಾರ ತೆಗೆದುಕೊಂಡಿದ್ದಾರೆ.
ಕೆನಾಡದ ಮೇಲಿನ ಒಟ್ಟು ಸುಂಕ 45% ಗೆ ಏರಿಕೆಯಾಗಿದೆ. ಕೆನಡಾ (Canada) ಮೇಲಿನ ಸುಂಕ ಏರಿಕೆಯು ವ್ಯಾಪಾರ ಉದ್ವಿಗ್ನತೆಗೆ ಕಾರಣವಾಗಲಿದೆ. ಏಕೆಂದರೆ ಕೆನಡಾ ಅಮೆರಿಕದ ಎರಡನೇ ಅತಿದೊಡ್ಡ ವ್ಯಾಪಾರ ಪಾಲುದಾರನಾಗಿದೆ.
ಕೆನಡಾ ಸರ್ಕಾರ ನೀಡಿದ ಜಾಹೀರಾತಿನಲ್ಲಿ ಮಾಜಿ ಅಧ್ಯಕ್ಷ ಮತ್ತು ರಿಪಬ್ಲಿಕನ್ ಐಕಾನ್ ರೊನಾಲ್ಡ್ ರೇಗನ್ ಅವರ ವೀಡಿಯೊ ಕ್ಲಿಪ್ ಇತ್ತು. ಅದರಲ್ಲಿ ಸುಂಕದ ಕ್ರಮವು ವ್ಯಾಪಾರ ಯುದ್ಧ ಮತ್ತು ಆರ್ಥಿಕ ಬಿಕ್ಕಟ್ಟುಗಳಿಗೆ ಕಾರಣವಾಗುತ್ತವೆ ಎಂದು ಹೇಳಿದ್ದರು. ಈ ಜಾಹೀರಾತನ್ನು ಟ್ರಂಪ್ ಟೀಕಿಸಿದ್ದರು. ಇದು ಸುಳ್ಳು ಮತ್ತು ದಾರಿತಪ್ಪಿಸುವ ಜಾಹೀರಾತು ಎಂದು ಅಸಮಾಧಾನ ಹೊರಹಾಕಿದ್ದರು. ಈ ಬೆನ್ನಲ್ಲೇ ಸುಂಕ ಹೆಚ್ಚಿಸುವ ಕ್ರಮ ಕೈಗೊಂಡಿದ್ದಾರೆ ಈ ಕುರಿತು ತಮ್ಮ ಸೋಷಿಯಲ್ ಮೀಡಿಯಾ ವೇದಿಕೆ ಟ್ರುತ್ ಔಟ್‌ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.
ಇನ್ನೂ ಕೆನಡಾದ ಪ್ರಧಾನಿ ಮಾರ್ಕ್ ಕಾರ್ನಿ ಶುಕ್ರವಾರ ಅಮೆರಿಕದೊಂದಿಗೆ ವ್ಯಾಪಾರ ಮಾತುಕತೆಗಳನ್ನು ಪುನರಾರಂಭಿಸಲು ಸಿದ್ಧ ಎಂದು ಹೇಳಿದ್ದರು. ಆದ್ರೆ ಶ್ವೇತಭವನ, ಯುಎಸ್ ವಾಣಿಜ್ಯ ಇಲಾಖೆ ಅಥವಾ ಕಾರ್ನಿ ಕಚೇರಿಯಿಂದ ತಕ್ಷಣದ ಪ್ರತಿಕ್ರಿಯೆ ಬಂದಿಲ್ಲ.
ಕೆನಡಾಕ್ಕೆ ಸುಂಕದ ಬರೆ
ಕೆನಡಾ ಸರಕುಗಳ ಮೇಲೆ ಅಮೆರಿಕ ಕಳೆದ ಮಾರ್ಚ್‌ನಲ್ಲಿ 25% ಇದ್ದ ಸುಂಕದ ಪ್ರಮಾಣವನ್ನ 30%ಗೆ ಏರಿಕೆ ಮಾಡಿತ್ತು. ಇದೀಗ 10% ಹೆಚ್ಚಿಗೆ ಮಾಡಿದ್ದು, 45%ಗೆ ತಲುಪಿದೆ.


