ವಾಷಿಂಗ್ಟನ್: ಚೀನಾ ಮೇಲೆ ವಿಧಿಸಿದ್ದ ಟ್ಯಾರಿಫ್ ಅನ್ನು ದಿಢೀರ್ ಎಂದು 104% ಹೆಚ್ಚಿಸುವ ಮೂಲಕ ಅಮೆರಿಕ ಆಘಾತ ನೀಡಿದೆ. ಚೀನಾದ ಮೇಲಿನ ಅಮೆರಿಕದ ಹೊಸ ಪ್ರತಿಸುಂಕವು ನಾಳೆಯಿಂದಲೇ ಜಾರಿಯಾಗಲಿದೆ ಎಂದು ಶ್ವೇತ ಭವನ ತಿಳಿಸಿದೆ.
ಬುಧವಾರದಿಂದ ಚೀನಾದ ಮೇಲೆ 50% ರಷ್ಟು ಹೆಚ್ಚುವರಿ ಸುಂಕ ವಿಧಿಸುವುದಾಗಿ ಡೊನಾಲ್ಡ್ ಟ್ರಂಪ್ ಹೇಳಿದ್ದರು. ಚೀನಾದ ಮೇಲಿನ ಅಮೆರಿಕದ ಪ್ರತಿಸುಂಕವನ್ನು 104 ಪ್ರತಿಶತಕ್ಕೆ ಹೆಚ್ಚಿಸಲಾಗಿದೆ ಎಂದು ಶ್ವೇತಭವನ ಘೋಷಿಸಿದೆ.
ಕಳೆದ ತಿಂಗಳವರೆಗೆ ಅಮೆರಿಕ ಚೀನಾದ ಮೇಲೆ ಶೇಕಡಾ 10 ರಷ್ಟು ಸುಂಕ ವಿಧಿಸುತ್ತಿತ್ತು. ಪ್ರತಿಸುಂಕ ನಿರ್ಧಾರ ಘೋಷಿಸಿದ ಮೇಲೆ ಚೀನಾ ಮೇಲೆ 50%ಗೆ ಹೆಚ್ಚಿಸುವುದಾಗಿ ಟ್ರಂಪ್ ಹೇಳಿದ್ದರು. ಆದರೆ, ಟ್ಯಾರಿಫ್ ಅನ್ನು 104%ಗೆ ಹೆಚ್ಚಿಸಿ ಆದೇಶಿಸಲಾಗಿದೆ.