Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಬಿಗ್‌ ಡೀಲ್‌ ಸಕ್ಸಸ್‌ – ಭಾರತದ ಮೇಲಿನ 25% ಹೆಚ್ಚುವರಿ ಸುಂಕ ಕಡಿತ ಆದೇಶಕ್ಕೆ ಟ್ರಂಪ್‌ ಸಹಿ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Latest | ಬಿಗ್‌ ಡೀಲ್‌ ಸಕ್ಸಸ್‌ – ಭಾರತದ ಮೇಲಿನ 25% ಹೆಚ್ಚುವರಿ ಸುಂಕ ಕಡಿತ ಆದೇಶಕ್ಕೆ ಟ್ರಂಪ್‌ ಸಹಿ

Latest

ಬಿಗ್‌ ಡೀಲ್‌ ಸಕ್ಸಸ್‌ – ಭಾರತದ ಮೇಲಿನ 25% ಹೆಚ್ಚುವರಿ ಸುಂಕ ಕಡಿತ ಆದೇಶಕ್ಕೆ ಟ್ರಂಪ್‌ ಸಹಿ

Public TV
Last updated: February 7, 2026 8:50 am
Public TV
Share
3 Min Read
narendra modi trump
SHARE

– ಭಾರತದ ಮೇಲೆ ಹೆಚ್ಚುವರಿ ಸುಂಕ ವಿಧಿಸಿದ್ದು ಏಕೆ?

ವಾಷಿಂಗ್ಟನ್‌: ಭಾರತ ಮತ್ತು ಅಮೆರಿಕ (India And America) ನಡುವಿನ ವ್ಯಾಪಾರ ಒಪ್ಪಂದ ಕೊನೆಗೂ ಸಕ್ಸಸ್‌ ಕಂಡಿದೆ. ರಷ್ಯಾ ತೈಲ ಖರೀದಿ ಹಿನ್ನೆಲೆ ಭಾರತದ ಆಮದು ಸರಕುಗಳ ಮೇಲೆ ವಿಧಿಸಲಾಗಿದ್ದ ಹೆಚ್ಚುವರಿ 25% ಸುಂಕ ಕಡಿತಗೊಳಿಸುವ ಆದೇಶಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಸಹಿ ಹಾಕಿದ್ದಾರೆ.

ಹೌದು. ಅಮೆರಿಕ ಮತ್ತು ಭಾರತದ ನಡುವೆ 500 ಶತಕೋಟಿ ಡಾಲರ್‌ ಒಪ್ಪಂದವಾಗಿದ್ದು, ಈ ಹಿನ್ನೆಲೆ ಭಾರತದ ಮೇಲಿನ ಮೂಲ ಸುಂಕವನ್ನ 25% ನಿಂದ 15%ಗೆ ಇಳಿಕೆ ಮಾಡಲಾಗಿತ್ತು. ಇದೀಗ ರಷ್ಯಾ ತೈಲ (Russian Oil) ಖರೀದಿ ವಿರೋಧಿಸಿ ಹೇರಿದ್ದ 25% ಹೆಚ್ಚುವರಿ ಆಮದು ಸುಂಕವನ್ನೂ ತೆಗೆದುಹಾಕಿದ್ದಾರೆ. ಈ ಮೂಲಕ ಭಾರತದ ಜೊತೆಗಿನ ದ್ವಿಪಕ್ಷೀಯ ವ್ಯಾಪಾರ ಒಪ್ಪಂದವನ್ನ ಮತ್ತಷ್ಟು ಗಟ್ಟಿಗೊಳಿಸಿದ್ದಾರೆ.

Trump Modi Putin 1

ರಷ್ಯಾದಿಂದ ತೈಲ ಖರೀದಿ ನಿಲ್ಲಿಸ್ತಾ ಭಾರತ?
ರಷ್ಯಾದಿಂದ (Russia) ನೇರವಾಗಿ ಅಥವಾ ಪರೋಕ್ಷವಾಗಿ ತೈಲ ಖರೀದಿ ಮಾಡುವುದನ್ನ ನಿಲ್ಲಿಸಲು ಭಾರತ ಬದ್ಧವಾಗಿದೆ. ಈ ಹಿನ್ನೆಲೆಯಲ್ಲಿ ಹೆಚ್ಚುವರಿ ಶೇ. 25ರಷ್ಟು ದಂಡದ ರೂಪದ ಸುಂಕವನ್ನ ತೆಗೆದುಹಾಕಲಾಗಿದೆ ಎಂದು ಡೊನಾಲ್ಡ್‌ ಟ್ರಂಪ್‌ ಅವರು ಸಹಿ ಮಾಡಿದ ಕಾರ್ಯನಿರ್ವಾಹಕ ಆದೇಶ ಪ್ರತಿಯಲ್ಲಿ ಉಲ್ಲೇಖಿಸಲಾಗಿದೆ.

ಭಾರತವು ಅಮೆರಿಕದ ಇಂಧನ ಉತ್ಪನ್ನಗಳನ್ನ ಖರೀದಿಸುವುದಾಗಿಯೂ ಹೇಳಿದೆ. ಅಲ್ಲದೇ ಮುಂದಿನ 10 ವರ್ಷಗಳಲ್ಲಿ ರಕ್ಷಣಾ ಸಹಕಾರವನ್ನ ವಿಸ್ತರಿಸಲು ಇತ್ತೀಚೆಗೆ ಅಮೆರಿಕದೊಂದಿಗೆ ಒಂದು ಚೌಕಟ್ಟಿಗೆ ಬದ್ಧವಾಗಿದೆ ಎಂದು ಇದೇ ಆದೇಶದಲ್ಲಿ ತಿಳಿಸಲಾಗಿದೆ.

ಇದಕ್ಕೆ ಪ್ರತಿಯಾಗಿ ಭಾರತವು ಅಮೆರಿಕದ ಎಲ್ಲಾ ಕೈಗಾರಿಕಾ ಸರಕುಗಳ ಮೇಲಿನ ಹಾಗೂ ಅನೇಕ ಆಹಾರ ಧಾನ್ಯ, ಪದಾರ್ಥಗಳ ಮೇಲಿನ ಸುಂಕವನ್ನ ಕಡಿಮೆ ಮಾಡುತ್ತದೆ ಎಂದು ಹೇಳಲಾಗಿದೆ.

Venezuela Oil Reserve

ಹೆಚ್ಚುವರಿ 25% ಸುಂಕ ವಿಧಿಸಿದ್ದು ಏಕೆ?
ಭಾರತವು ರಷ್ಯಾದಿಂದ ಕಚ್ಚಾತೈಲ ಖರೀದಿ ಮಾಡುವ ಮೂಲಕ ಉಕ್ರೇನ್‌ ವಿರುದ್ಧದ ಯುದ್ಧಕ್ಕೆ ಫಂಡಿಂಗ್‌ ಮಾಡುತ್ತಿದೆ ಅನ್ನೋದು ಟ್ರಂಪ್‌ ಅವರ ಬಲವಾದ ಆರೋಪ ಆಗಿತ್ತು. ಅದಕ್ಕಾಗಿಯೇ ಮೊದಲು 25% ಸುಂಕ ವಿಧಿಸಿ, ನಂತರ 50% ಗೆ ಏರಿಸಿದ್ದರು ಟ್ರಂಪ್‌. ಇದೀಗ ಮೂಲ ಸುಂಕವನ್ನ 18%ಗೆ ಇಳಿಸಿದ್ದು, ಹೆಚ್ಚುವರಿ 25% ಸುಂಕವನ್ನ ತೆಗೆದುಹಾಕಿದ್ದಾರೆ.

500 ಶತಕೋಟಿ ಡಾಲರ್‌ ಒಪ್ಪಂದ
ಇತ್ತೀಚೆಗಷ್ಟೇ ಭಾರತದ ಆಮದಿನ ಮೇಲಿನ ಮೂಲ ಸುಂಕವನ್ನ 18%ಗೆ ಇಳಿಸಿರುವುದಾಗಿ ಟ್ರುತ್‌ ಸೋಷಿಯಲ್‌ ವೇದಿಕೆಯಲ್ಲಿ ತಿಳಿಸಿದ್ದ ಟ್ರಂಪ್‌ ಬೃಹತ್‌ ವ್ಯಾಪಾರ ಒಪ್ಪಂದವನ್ನೂ ಘೋಷಿಸಿದ್ದರು.

Narendra Modi great friend of mine Donald Trump Announces 26 percentage Discounted Reciprocal Tariff On India

ಭಾರತ ರಷ್ಯಾದಿಂದ ತೈಲ ಖರೀದಿ ಮಾಡುವುದನ್ನು ನಿಲ್ಲಿಸಿದೆ. ಪ್ರಧಾನಿ ಮೋದಿ ಕೂಡ ಒಪ್ಪಿಕೊಂಡಿದ್ದಾರೆ. ಭಾರತ ಇನ್ಮುಂದೆ ಅಮೆರಿಕ ಮತ್ತು ವೆನೆಜುವೆಲಾದಿಂದ ಹೆಚ್ಚಿನ ತೈಲ ಖರೀದಿ ಮಾಡಲಿದೆ. ಇದು ಉಕ್ರೇನ್‌ ವಿರುದ್ಧದ ಯುದ್ಧ ಕೊನೆಗೊಳಿಸಲು ಸಹಾಯ ಮಾಡುತ್ತದೆ. ಹೀಗಾಗಿ ಭಾರತದ ಮೇಲಿನ ಸುಂಕವನ್ನ 25% ನಿಂದ 18% ಗೆ ಇಳಿಕೆ ಮಾಡಿದೆ. ಜೊತೆಗೆ ಕೃಷಿ ಇಂಧನ, ಕಲ್ಲಿದ್ದಲು, ತಂತ್ರಜ್ಞಾನ ಸೇರಿದಂತೆ 500 ಶತಕೋಟಿ ಡಾಲರ್‌ ವ್ಯಾಪರಕ್ಕೆ ಒಪ್ಪಂದವಾಗಿದೆ. ಪ್ರತಿಯಾಗಿ ಭಾರತವು ಅಮೆರಿಕದ ಉತ್ಪನ್ನಗಳ ಮೇಲಿನ ತನ್ನ ಸುಂಕವನ್ನ ಶೂನ್ಯಕ್ಕೆ ಇಳಿಸುವ ನಿರೀಕ್ಷೆಯಿದೆ. ಜೊತೆಗೆ ಇತರ ಅಡೆತಡೆಗಳನ್ನೂ ನಿವಾರಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು.

ಟ್ರಂಪ್ ಹಾಕಿದ್ದ ಸುಂಕಗಳು ಯಾವುದು?
10% ಮೂಲ ಸುಂಕ:
ಏಪ್ರಿಲ್ 2025 ರಿಂದ ಬಹುತೇಕ ಎಲ್ಲಾ ಅಮೆರಿಕದ ಆಮದುಗಳಿಗೆ ಅನ್ವಯಿಸಲಾದ ಸಾಮಾನ್ಯ ಸುಂಕ.

15% ಪ್ರತಿ ಸುಂಕ:
ಅಮೆರಿಕ ಉತ್ಪನ್ನಗಳ ಮೇಲೆ ಭಾರತವು ತನ್ನದೇ ಆದ ಹೆಚ್ಚಿನ ಸುಂಕ ಹಾಕಿದ್ದಕ್ಕೆ ವಿಧಿಸಿದ ಸುಂಕ.

25% ದಂಡ ಸುಂಕ:
ಆಗಸ್ಟ್ 27, 2025 ರಂದು ಹೆಚ್ಚುವರಿ ಸುಂಕವನ್ನು ಹಾಕಲಾಗುತ್ತಿದೆ. ನಿರ್ದಿಷ್ಟವಾಗಿ ರಷ್ಯಾದ ತೈಲ ಆಮದುಗಳನ್ನು ನಿಲ್ಲಿಸಲು ಭಾರತ ನಿರಾಕರಿಸಿದ್ದಕ್ಕೆ ದಂಡದ ರೂಪದಲ್ಲಿ ಹಾಕಲಾಗುತ್ತಿದೆ. ಹೀಗಾಗಿ ಒಟ್ಟು 50% ಸುಂಕವನ್ನು ಅಮೆರಿಕ ಭಾರತದ ಕೆಲ ವಸ್ತುಗಳಿಗೆ ವಿಧಿಸಿತ್ತು.

TAGGED:American Ambassadordonald trumpindialowers tariffsnarendra modiSergio GorTrade dealUS Presidentಅಮೆರಿಕಡೊನಾಲ್ಡ್ ಟ್ರಂಪ್ನರೇಂದ್ರ ಮೋದಿಶ್ವೇತಭವನ
Share This Article
Facebook Whatsapp Whatsapp Telegram

Cinema news

Asha Bhosle Funeral
ಸರ್ಕಾರಿ ಗೌರವಗಳೊಂದಿಗೆ ನೆರವೇರಿದ ಗಾಯಕಿ ಆಶಾ ಭೋಸ್ಲೆ ಅಂತ್ಯಕ್ರಿಯೆ
Cinema Latest National Top Stories
Jogi Prem
ಕನ್ನಡ ಸಿನಿಮಾ ಅಂತಲೇ ರಾಜಕಾರಣ – ಸೆನ್ಸಾರ್ ಬೋರ್ಡ್ ವಿರುದ್ಧ ಪ್ರೇಮ್ ಕಿಡಿ
Cinema Latest Sandalwood Top Stories
Dhruva Sarja
LPG ಗ್ಯಾಸ್‌ ಬಿಕ್ಕಟ್ಟಿನಿಂದ ಕಂಗಾಲಾದ ಆಟೋ ಚಾಲಕರಿಗೆ ಆಸರೆ – 25 ಲಕ್ಷ ನೆರವು ನೀಡಿದ ಧ್ರುವ ಸರ್ಜಾ!
Bengaluru City Cinema Latest Sandalwood Top Stories
Asha Bhosle 3
`ಅಭೀ ನಾ ಜಾವೋ ಛೋಡ್ ಕರ್’ ಗಾಯಕಿ ಸಂಗೀತದಲ್ಲಿ ಲೀನ – ಇಂದು ಆಶಾ ಭೋಸ್ಲೆ ಅಂತ್ಯಕ್ರಿಯೆ
Cinema Latest Main Post Top Stories

You Might Also Like

SRH 1
Cricket

ಹಿಂಗೆ ಬೆಂಕಿ ಬೌಲಿಂಗ್‌ಗೆ ರಾಯಲ್ಸ್‌ ಬರ್ನ್‌ – ಹೈದ್ರಾಬಾದ್‌ನಲ್ಲಿ ಸನ್‌ ಶೈನಿಂಗ್‌

Public TV
By Public TV
1 hour ago
Praful Hinge 1 1
Cricket

1 ಪಂದ್ಯ, 3 ವಿಕೆಟ್‌, 3 ದಾಖಲೆ – ʻರಾಜʼರನ್ನು ಉರುಳಿಸಿ ಇತಿಹಾಸ ಬರೆದ ಪ್ರಫುಲ್‌ ಹಿಂಗೆ ಯಾರು?

Public TV
By Public TV
2 hours ago
MLAs Meet Mallikarjun Kharge in Delhi
Bengaluru City

ದೆಹಲಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಭೇಟಿಯಾದ ಶಾಸಕರು – ಮೇ 15ರೊಳಗೆ ಕ್ಯಾಬಿನೆಟ್ ಪುನಾರಚನೆಗೆ ಒತ್ತಾಯ

Public TV
By Public TV
3 hours ago
Strait of Hormuz 1
Latest

1 ದಿನಕ್ಕೆ 4 ಸಾವಿರ ಕೋಟಿ ರೂ. – ನೌಕಾ ದಿಗ್ಬಂಧನದಿಂದ ಇರಾನ್‌ ಆರ್ಥಿಕತೆಗೆ ಭಾರೀ ನಷ್ಟ!

Public TV
By Public TV
3 hours ago
Rohini Sindhuri Supreme Court
Court

ರೋಹಿಣಿ ಸಿಂಧೂರಿ ವಿರುದ್ಧ ತನಿಖೆ – ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ

Public TV
By Public TV
4 hours ago
Irans Ambassador to India Mohammad Fathali
Latest

ಭಾರತೀಯ ಟ್ಯಾಂಕರ್‌ಗಳಿಗೆ ಯಾವುದೇ ಶುಲ್ಕ ವಿಧಿಸಿಲ್ಲ: ಇರಾನ್‌ ಸ್ಪಷ್ಟನೆ

Public TV
By Public TV
4 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?