ವಾಷಿಂಗ್ಟನ್: ಅಮೆರಿಕದ ಅಂತಾರಾಷ್ಟ್ರೀಯ ಅಭಿವೃದ್ಧಿ ಏಜೆನ್ಸಿ (USAID) ಮೂಲಕ ಭಾರತದ ಚುನಾವಣೆ (Indian Election) ಮೇಲೆ ಪ್ರಭಾವ ಬೀರಲು ಹಣ ಪಡೆಯಲಾಗಿದೆ ಎಂಬ ವಿವಾದ ಕೋಲಾಹಲ ಎಬ್ಬಿಸಿದ ಹೊತ್ತಿನಲ್ಲೇ ಟ್ರಂಪ್ (Donald Trump) ಸರ್ಕಾರ ಮಹತ್ವದ ಹೆಜ್ಜೆಯನ್ನಿರಿಸಿದೆ. ಯುಎಸ್‌ಏಡ್‌ನ 1,600ಕ್ಕೂ ಹೆಚ್ಚು ಉದ್ಯೋಗಿಗಳನ್ನು ವಜಾಗೊಳಿಸುತ್ತಿರುವುದಾಗಿ ಘೋಷಣೆ ಮಾಡಿದೆ.
Advertisement
ಅಗತ್ಯ ಕೆಲಸಗಾರರನ್ನು ಹೊರತುಪಡಿಸಿ ಅಮೆರಿಕದಿಂದ ಹೊರಗೆ ಕೆಲಸ ಮಾಡುವ ಯುಎಸ್‌ಏಡ್‌ನ ಇತರ ಸಿಬ್ಬಂದಿಯನ್ನ ವೇತನ ಸಹಿತ ರಜೆಯಲ್ಲಿರಿಸಲಾಗಿದೆ ಎಂದು ತನ್ನ ವೆಬ್‌ಸೈಟ್ಸ್‌ನಲ್ಲಿ ಪ್ರಕಟಿಸಿದೆ. ಇದನ್ನೂ ಓದಿ: ಭಾರತದಲ್ಲಿ ಮತದಾನಕ್ಕೆ ಅಮೆರಿಕ ದೇಣಿಗೆ ನೀಡಿಲ್ಲ, 7 ಯೋಜನೆಗಳಿಗಷ್ಟೇ ಧನಸಹಾಯ – ಹಣಕಾಸು ಸಚಿವಾಲಯ
Advertisement
ಈ ಸಂಬಂಧ ಕೆಲವರಿಗೆ ಇ-ಮೇಲ್‌ಗಳನ್ನು ಕಳುಹಿಸಲಾಗಿದೆ. ಈ ಸೂಚನೆ ಪಡೆದುಕೊಂಡ ಎಲ್ಲರನ್ನು ಏಪ್ರಿಲ್ 24ರಿಂದ ಫೆಡರಲ್ ಸೇವೆಯಿಂದ ಕೈಬಿಡಲಾಗುವುದು ಎಂದು ಉಲ್ಲೇಖಿಸಲಾಗಿದೆ ಎಂದು ವರದಿಗಳು ತಿಳಿಸಿವೆ.
Advertisement
Advertisement
ಇದು ಅನಗತ್ಯ ವೆಚ್ಚಗಳನ್ನು ಕಡಿತಗೊಳಿಸುವ ಸಲುವಾಗಿ ಎಲಾನ್ ಮಸ್ಕ್ ನೇತೃತ್ವದ ದಕ್ಷತೆಯ ಇಲಾಖೆಯು, ಯುಎಸ್‌ಏಡ್ ತೆಗೆದುಹಾಕುವ ಪ್ರಯತ್ನದ ಭಾಗವಾಗಿದೆ ಎನ್ನಲಾಗಿದೆ. ಆದ್ರೆ ಈ ಬಗ್ಗೆ ಶ್ವೇತಭವದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ವರದಿಯಾಗಿದೆ. ಇದನ್ನೂ ಓದಿ: ನಾನು, ಟ್ರಂಪ್, ಮೋದಿ ಒಂದಾದ್ರೆ ಪ್ರಜಾಸತ್ತೆಗೆ ಬೆದರಿಕೆ ಹೇಗಾಗುತ್ತೆ?: ಮೆಲೋನಿ ಪ್ರಶ್ನೆ