ನವದೆಹಲಿ: ಡೊನಾಲ್ಡ್ ಟ್ರಂಪ್ (Donald Trump) ಸುಂಕವು ಮೋದಿ ವಿದೇಶಾಂಗ ನೀತಿಯ ದುರಂತ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಆರೋಪ ಮಾಡಿದ್ದಾರೆ.
ಭಾರತದ ರಾಜತಾಂತ್ರಿಕತೆ ವಿನಾಶಕಾರಿಯಾಗಿ ಹದಗೆಡುತ್ತಿರುವ ಸಮಯದಲ್ಲಿ ಟ್ರಂಪ್ ಶೇ.50 ರಷ್ಟು ಸುಂಕ ವಿಧಿಸಿದ್ದಾರೆಂದು ಖರ್ಗೆ ಹೇಳಿದ್ದಾರೆ. ಇದನ್ನೂ ಓದಿ: ಟ್ರಂಪ್ ಸುಂಕ ಶಾಕ್ ಬೆನ್ನಲ್ಲೇ ಈ ವರ್ಷ ಭಾರತಕ್ಕೆ ಪುಟಿನ್ ಭೇಟಿ
ಈ ದುರಂತವನ್ನು ನೀವು 70 ವರ್ಷದ ಕಾಂಗ್ರೆಸ್ ಮೇಲೆ ಹಾಕಲು ಸಾಧ್ಯವಿಲ್ಲ. ಅಮೆರಿಕದೊಂದಿಗೆ ವ್ಯಾಪಾರ ಒಪ್ಪಂದವನ್ನು ಮಾತುಕತೆ ನಡೆಸುವಲ್ಲಿ ಪ್ರಧಾನಿ ವಿಫಲರಾಗಿದ್ದಾರೆ ಟೀಕಿಸಿದ್ದಾರೆ.
ಈಗ ಟ್ರಂಪ್ ನಮ್ಮನ್ನು ಬೆದರಿಸುತ್ತಿದ್ದಾರೆ. ಆದರೆ, ನೀವು ಸುಮ್ಮನಿದ್ದೀರಿ. ಭಾರತದಿಂದ ಅಮೆರಿಕಕ್ಕೆ ರಫ್ತು ಸುಮಾರು 7.51 ಲಕ್ಷ ಕೋಟಿ ರೂ. (2024). ಶೇ.50 ರಷ್ಟು ಸುಂಕ ವಿಧಿಸುವುದರಿಂದ 3.75 ಲಕ್ಷ ಕೋಟಿ ರೂ. ಆರ್ಥಿಕ ಹೊರೆ ಬೀಳುತ್ತದೆ. ಎಂಎಸ್‌ಎಂಇಗಳು, ಕೃಷಿ, ಡೈರಿ ಎಂಜಿನಿಯರಿಂಗ್ ಸರಕುಗಳು, ಎಲೆಕ್ಟ್ರಾನಿಕ್ ಸರಕುಗಳು, ರತ್ನಗಳು ಮತ್ತು ಆಭರಣಗಳು, ಔಷಧ ಸೂತ್ರೀಕರಣಗಳು ಮತ್ತು ಜೈವಿಕ ವಸ್ತುಗಳು, ಪೆಟ್ರೋಲಿಯಂ ಉತ್ಪನ್ನಗಳು ಮತ್ತು ಹತ್ತಿ ತಯಾರಿಸಿದ ಬಟ್ಟೆಗಳಂತಹ ನಮ್ಮ ವಲಯಗಳಿಗೆ ಹೊಡೆತ ಬೀಳುತ್ತದೆ. ಅದನ್ನು ಹೇಗೆ ಎದುರಿಸಬೇಕೆಂದು ನಿಮ್ಮ ಸರ್ಕಾರಕ್ಕೆ ತಿಳಿದಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
- Advertisement 3-
ಟ್ರಂಪ್ ತಿಂಗಳುಗಳಿಂದ ಯೋಜಿಸುತ್ತಿದ್ದ ಪ್ರತಿಸುಂಕದ ಪರಿಣಾಮಗಳಿಂದ ಪಾರಾಗಲು ಕೃಷಿ ಮತ್ತು ಎಂಎಸ್‌ಎಂಇಗಳು ಸೇರಿದಂತೆ ಪ್ರಮುಖ ವಲಯಗಳಿಗೆ ಕೇಂದ್ರ ಬಜೆಟ್‌ನಲ್ಲಿ ಪ್ರಧಾನಿ ಏನನ್ನೂ ಘೋಷಿಸಲಿಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿ: ಭಾರತಕ್ಕೆ ಮತ್ತೊಂದು ಶಾಕ್ – ಆಮದುಗಳ ಮೇಲೆ 50% ಸುಂಕ ವಿಧಿಸಿದ ಟ್ರಂಪ್