ನವದೆಹಲಿ: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರಿಗೆ ತಾನು ನಾಳೆ ಏನು ಮಾಡುತ್ತೇನೆ ಎನ್ನುವುದು ಅವರಿಗೆ ತಿಳಿದಿಲ್ಲ ಎಂದು ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ (General Upendra Dwivedi) ಹೇಳಿದ್ದಾರೆ.
ತಮ್ಮ ತವರು ಮಧ್ಯಪ್ರದೇಶದ ರೇವಾದಲ್ಲಿರುವ ಟಿಆರ್‌ಎಸ್ ಕಾಲೇಜಿನಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಮುಂಬರುವ ದಿನಗಳಲ್ಲಿ ಸವಾಲುಗಳು “ಅಸ್ಥಿರತೆ, ಅನಿಶ್ಚಿತತೆ, ಸಂಕೀರ್ಣತೆ ಮತ್ತು ಅಸ್ಪಷ್ಟತೆ” ಆಗಿರುತ್ತವೆ ಎಂದು ಹೇಳಿದರು.
ಇಂದಿನ ಆಧುನಿಕ ಕಾಲದ ಅನಿಶ್ಚಿತತೆಯ ಬಗ್ಗೆ ಮಾತನಾಡಿದ , ಭದ್ರತೆ ಅಥವಾ ಸೈಬರ್ ಯುದ್ಧದ ವಿಷಯದಲ್ಲಿ ಸವಾಲುಗಳು ಯಾವಾಗ ಬೇಕಾದರೂ ಬರಬಹುದು ಎಂದರು.
Indian Army Chief General Upendra Dwivedi, “You and I are completely clueless about what the future holds… What is Trump doing today? I think even Trump doesn’t know what he is going to do tomorrow. Challenges are coming so quickly that by the time you try to grasp an old… pic.twitter.com/sKRNPcNsZg
— Aditya Raj Kaul (@AdityaRajKaul) November 1, 2025
ಸವಾಲುಗಳು ಎಷ್ಟು ಬೇಗನೆ ಬರುತ್ತಿವೆ ಎಂದರೆ ನೀವು ಹಳೆಯ ಸವಾಲನ್ನು ಗ್ರಹಿಸಲು ಪ್ರಯತ್ನಿಸುವ ಹೊತ್ತಿಗೆ ಹೊಸದು ಬರುತ್ತದೆ. ಅದೇ ಭದ್ರತೆಯು ನಮ್ಮ ಮಿಲಿಟರಿ ಎದುರಿಸುತ್ತಿರುವ ಸವಾಲುಗಳನ್ನು ಎದುರಿಸುತ್ತದೆ. ಅದು ಗಡಿಯಲ್ಲಾಗಲಿ, ಭಯೋತ್ಪಾದನೆಯಾಗಲಿ, ನೈಸರ್ಗಿಕ ವಿಕೋಪಗಳಾಗಲಿ ಅಥವಾ ಸೈಬರ್ ಯುದ್ಧವಾಗಲಿ ಎಂದು ಹೇಳಿದರು. ಇದನ್ನೂ ಓದಿ: ನೀವು ಹೀಗೆ ಮುಂದುವರಿದರೆ ತಕ್ಕ ಬೆಲೆ ತೆರಬೇಕಾಗುತ್ತೆ: ಪಾಕ್‌ಗೆ ಅಫ್ಘಾನಿಸ್ತಾನ ಖಡಕ್ ವಾರ್ನಿಂಗ್
ನೀವು ಆಪರೇಷನ್ ಸಿಂಧೂರದಲ್ಲಿ ಕೇಳಿದಂತೆ, ಕರಾಚಿಯ ಮೇಲೆ ದಾಳಿ ಮಾಡಲಾಗಿದೆ. ಅಂತಹ ಹಲವಾರು ಸುದ್ದಿಗಳು ಬಂದವು. ಅದು ನಮಗೂ ಸುದ್ದಿಯಂತೆ ಕಾಣುತ್ತಿತ್ತು. ಅದು ಎಲ್ಲಿಂದ ಬಂತು, ಯಾರು ಮಾಡಿದರು? ಈ ಎಲ್ಲಾ ಸವಾಲುಗಳ ವ್ಯಾಪ್ತಿಯಲ್ಲಿ ಆಕಾಶ, ನೀರು ಮತ್ತು ಮೂರರ ಮೇಲೂ ಕೆಲಸ ಮಾಡಬೇಕು ಎಂದು ತಿಳಿಸಿದರು.

