ವಾಷಿಂಗ್ಟನ್: ಭಾರತದಲ್ಲಿ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ (Vladimir Putin) ಅವರಿಗೆ ಸಿಕ್ಕಿದ ಭವ್ಯ ಸ್ವಾಗತಕ್ಕಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರಿಗೆ ನೊಬೆಲ್ ಪ್ರಶಸ್ತಿ (Nobel Prize) ನೀಡಬೇಕೆಂದು ಅಮೆರಿಕದ ರಕ್ಷಣಾ ಇಲಾಖೆ ಪೆಂಟಗನ್‌ನಿವೃತ್ತ ಅಧಿಕಾರಿ ವ್ಯಂಗ್ಯವಾಡಿದ್ದಾರೆ.
ಪೆಂಟಗನ್ ನಿವೃತ್ತ ಅಧಿಕಾರಿ ಮೈಕೆಲ್ ರೂಬಿನ್ (Michael Rubin) ಭಾರತದ ಸುದ್ದಿ ಸಂಸ್ಥೆಯ ಜೊತೆ ಮಾತನಾಡಿ, ಭಾರತ ಮತ್ತು ರಷ್ಯಾವನ್ನು ಹತ್ತಿರಕ್ಕೆ ತಂದಿದ್ದಕ್ಕಾಗಿ ಟ್ರಂಪ್‌ಗೆ ನಾವು ಗೌರವ ನೀಡಬೇಕು. ಬೇರೆ ಕಡೆ ಸಿಗದಷ್ಟು ಗೌರವ ಪುಟಿನ್‌ಗೆ ಭಾರತ ನೀಡಿದೆ. ಈ ಗೌರವ ಸಿಗಲು ಕಾರಣರಾದ ಟ್ರಂಪ್ ಅವರ ಪಾತ್ರವನ್ನು ನಾವು ಕಡೆಗಣಿಸಬಾರದು ಎಂದು ಟಾಂಗ್ ನೀಡಿದ್ದಾರೆ.
ಪುಟಿನ್ ಅವರ ಭೇಟಿಯ ಸಮಯದಲ್ಲಿ ಸಹಿ ಹಾಕಲಾಗಿರುವ ಒಪ್ಪಂದಗಳು ಎರಡೂ ದೇಶಗಳಿಗೆ ಸಹಕಾರಿಯಾಗಲಿದೆ. ಪ್ರಧಾನಿ ನರೇಂದ್ರ ಮೋದಿ ಅವರನ್ನು ಟ್ರಂಪ್ ನಡೆಸಿಕೊಂಡ ರೀತಿಗೆ ಭಾರತ ಯಾವ ರೀತಿ ಅತೃಪ್ತಿ ವ್ಯಕ್ತಪಡಿಸಿದೆ ಎನ್ನುವುದನ್ನು ಈ ಒಪ್ಪಂದಗಳಿಂದ ತಿಳಿಯುತ್ತದೆ ಎಂದರು. ಇದನ್ನೂ ಓದಿ: ಟ್ರಂಪ್ ಬೆದರಿಕೆಗೆ ಪುಟಿನ್ ಡೋಂಟ್ ಕೇರ್, ಭಾರತಕ್ಕೆ ತೈಲ ಪೂರೈಕೆ ಮುಂದುವರಿಕೆ – `ವಿಷನ್ 2030’ಗೆ ಅಂಕಿತ
#WATCH | Washington, DC, USA | On Russian President Vladimir Putin’s statement “We are ready to continue uninterrupted shipments of fuel for the growing Indian economy”, Former Pentagon official Michael Rubin says, “What Americans don’t understand is that Indians elected Prime… pic.twitter.com/f0wo2sRYvK
— ANI (@ANI) December 5, 2025
ಟ್ರಂಪ್ ಭಾರತಕ್ಕೆ ಉಪನ್ಯಾಸ ನೀಡುವುದನ್ನು ನಿಲ್ಲಿಸಬೇಕು. ಟ್ರಂಪ್ ಎಂದಿಗೂ ತಪ್ಪನ್ನು ಒಪ್ಪಿಕೊಳ್ಳುವುದಿಲ್ಲ. ಭಾರತೀಯರು ಭಾರತದ ಹಿತಾಸಕ್ತಿಗಳನ್ನು ಪ್ರತಿನಿಧಿಸಲು ಪ್ರಧಾನಿ ಮೋದಿಯವರನ್ನು ಆಯ್ಕೆ ಮಾಡಿದ್ದಾರೆ ಎಂಬುದು ಅಮೆರಿಕನ್ನರಿಗೆ ಅರ್ಥವಾಗುತ್ತಿಲ್ಲ ಎಂದು ಹೇಳಿದರು. ಇದನ್ನೂ ಓದಿ: ಭಾರತವನ್ನು ಬೆಂಬಲಿಸಿ ಟ್ರಂಪ್ ಬೂಟಾಟಿಕೆಯನ್ನು ಬಯಲು ಮಾಡಿದ ಪುಟಿನ್

