LatestInternationalMain PostTech

ತನ್ನದೇ ಹೊಸ ಸಾಮಾಜಿಕ ಮಾಧ್ಯಮ ‘TRUTH Social’ ಆರಂಭಿಸಿದ ಟ್ರಂಪ್

ವಾಷಿಂಗ್ಟನ್: ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸಾಮಾಜಿಕ ಜಾಲತಾಣಗಳಾದ ಫೇಸ್‍ಬುಕ್ ಮತ್ತು ಟ್ವಿಟ್ಟರ್ ಖಾತೆಗಳನ್ನು ಬ್ಯಾನ್ ಮಾಡಿದ ಬಳಿಕ ಇದೀಗ ಇದಕ್ಕೆ ಸೆಡ್ಡು ಹೊಡೆಯಲು ತನ್ನದೇ ಹೊಸ ಸಾಮಾಜಿಕ ಮಾಧ್ಯಮ ‘TRUTH Social’ ಪ್ಲಾಟ್ ಫಾರ್ಮ್ ಆರಂಭಿಸಿದ್ದಾರೆ.

TRUTH SOCIAL TRUM

ಅಮೆರಿಕ ಸಂಸತ್ ಭವನದ ಮೇಲೆ ನಡೆದ ದಂಗೆಗೆ ಸಂಬಂಧಿಸಿದಂತೆ ಟ್ರಂಪ್ ಮಾಡಿದ್ದ ಫೇಸ್‍ಬುಕ್ ಫೋಸ್ಟ್‍ಗಳು ಪ್ರಚೋದನಕಾಯಾಗಿದ್ದವು ಎಂಬ ಕಾರಣಕ್ಕೆ ಫೇಸ್‍ಬುಕ್ ಟ್ರಂಪ್ ಖಾತೆಯನ್ನು 2 ವರ್ಷಗಳ ಕಾಲ ಮತ್ತು ಟ್ವಿಟ್ಟರ್ ಖಾತೆಯನ್ನು ಶಾಶ್ವತವಾಗಿ ಬ್ಯಾನ್ ಮಾಡಲಾಗಿತ್ತು. ಇದಕ್ಕೆ ಪ್ರತಿಕಾರ ಎಂಬಂತೆ ಟ್ರಂಪ್ ತನ್ನದೆ ಸಾಮಾಜಿಕ ಮಾಧ್ಯಮ ವೇದಿಕೆ ಆರಂಭಿಸಿ ಬಳಕೆಗೆ ಸಿದ್ಧತೆ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಡೊನಾಲ್ಡ್ ಟ್ರಂಪ್ ಫೇಸ್‍ಬುಕ್ ಖಾತೆ 2 ವರ್ಷ ಬ್ಯಾನ್ 

capitol attack

ಟ್ರಂಪ್ ಮೀಡಿಯಾ ಆ್ಯಂಡ್ ಟೆಕ್ನಾಲಜಿ ಗ್ರೂಪ್(ಟಿಎಂಟಿಜಿ) ಸಂಸ್ಥೆ ಟ್ರೂಥ್ ಸೋಶಿಯಲ್ ಎಂಬ ಸಾಮಾಜಿಕ ಮಾಧ್ಯಮವನ್ನು ಅಭಿವೃದ್ಧಿ ಪಡಿಸಿದ್ದು, ಇದರಲ್ಲಿ ಮನರಂಜನೆ ಕಾರ್ಯಕ್ರಮಗಳೊಂದಿಗೆ ವೀಡಿಯೋ ಸುದ್ದಿ ಹಾಗೂ ಪಾಡ್‍ಕಾಸ್ಟ್ ಸೇವೆಯನ್ನು ಆರಂಭಿಸಿ ಬಳಕೆಗೆ ಸಿದ್ಧತೆ ಮಾಡಿಕೊಂಡಿದೆ. ಮುಂದಿನ ತಿಂಗಳು ಆಯ್ದ ಅತಿಥಿ ಬೀಟಾ ಆವೃತ್ತಿ ಸಿಗಲಿದೆ. ಇದನ್ನೂ ಓದಿ: ಮತ್ತೊಂದು ಕುಖ್ಯಾತಿಗೆ ಪಾತ್ರವಾದ ಡೊನಾಲ್ಡ್‌ ಟ್ರಂಪ್‌

ಈ ಬಗ್ಗೆ ಮಾತನಾಡಿರುವ ಟ್ರಂಪ್, ಬೃಹತ್ ಟೆಕ್ ಕಂಪನಿಗಳ ದಬ್ಬಾಳಿಕೆಗೆ ಸೆಡ್ಡು ಹೊಡೆಯಲು ನಾನು ಟ್ರೂಥ್ ಸೋಶಿಯಲ್ ಎಂಬ ಸಾಮಾಜಿಕ ಮಾಧ್ಯಮವನ್ನು ಆರಂಭಿಸಿದ್ದೇನೆ, ಟ್ವಿಟ್ಟರ್‍ ನಲ್ಲಿ ಬಹಳಷ್ಟು ತಾಲಿಬಾನ್ ಇರುವಿಕೆ ಇದೆ. ಆದರೂ ನಿಮ್ಮ ನೆಚ್ಚಿನ ಅಮೆರಿಕದ ಅಧ್ಯಕ್ಷರು ಮೌನವಾಗಿದ್ದರೆ. ಇದನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಹಾಗಾಗಿ ಈ ನಿರ್ಧಾರದೊಂದಿಗೆ ಮುಂದುವರಿಯುತ್ತಿದ್ದೇನೆ ಎಂದಿದ್ದಾರೆ. ಇದನ್ನೂ ಓದಿ: ಟ್ವಿಟ್ಟರ್ ಸಂಸ್ಥೆಯಿಂದ ಟ್ರಂಪ್ ಖಾತೆ ಶಾಶ್ವತ ರದ್ದು

donald trump joe biden us election medium

ಅಮೆರಿಕ ಅಧ್ಯಕ್ಷ ಚುನಾವಣೆ ಬಳಿಕ ಟ್ರಂಪ್ ಸಾಮಾಜಿಕ ಮಾಧ್ಯಮಗಳ ಖಾತೆಗಳನ್ನು ಬ್ಯಾನ್ ಮಾಡಲಾಗಿತ್ತು. ಈ ವೇಳೆ ಟ್ರಂಪ್ ತಮ್ಮದೇ ಸ್ವಂತ ಸಾಮಾಜಿಕ ಜಾಲತಾಣ ಆರಂಭಿಸುವುದಾಗಿ ಹೇಳಿದ್ದರು. ಇದೀಗ ತಮ್ಮದೆ ಸ್ವಂತ ಸಾಮಾಜಿಕ ಮಾಧ್ಯಮ ಬಳಕೆಗೆ ಸಿದ್ಧವಾಗಿದ್ದು ಮುಂದಿನ ತಿಂಗಳು ಬೀಟಾ (ಪರೀಕ್ಷಾರ್ಥ ಸೇವೆ) ಬಳಿಕ ಈ ಹೊಸ ಮಾಧ್ಯಮ ಬಳಕೆಗೆ ಸಿಗಬಹುದು.

Related Articles

Leave a Reply

Your email address will not be published. Required fields are marked *