ಬೆಂಗಳೂರು: ಪೀಕ್ ಅವಧಿಯಲ್ಲಿ (Peak Hour) ಬೆಂಗಳೂರು ನಗರದಲ್ಲಿ ಭಾರೀ ವಾಹನಗಳ ಓಡಾಟಕ್ಕೆ ಸಂಚಾರ ಪೊಲೀಸರು ನಿರ್ಬಂಧ ಹೇರಿದ್ದನ್ನು ಖಂಡಿಸಿ ಸರಕು ಸಾಗಣೆ ವಾಹನಗಳ (Freight Vehicle) ಮಾಲೀಕರು ಮಾರ್ಚ್ 17ರಂದು ಬಂದ್ ಕರೆ ಕೊಟ್ಟಿದ್ದಾರೆ.
ಪೀಕ್ ಅವರ್‌ನಲ್ಲಿ ಬೆಂಗಳೂರು (Bengaluru) ನಗರದೊಳಗೆ ಸರಕು ವಾಹನಕ್ಕೆ ಪ್ರವೇಶ ನಿರ್ಬಂಧಿಸಿದ ಹಿನ್ನಲೆ ಪ್ರತಿಭಟನೆ ನಡೆಸಲಾಗಿತ್ತು. ಈ ಕುರಿತು ಟ್ರಾಫಿಕ್ ಕಮೀಷನರ್ (Traffic Commissioner) ಸಲೀಂ ಜೊತೆ ವಾಹನ ಮಾಲೀಕರು ನಡೆಸಿದ ಸಭೆ ವಿಫಲಗೊಂಡ ಬಳಿಕ ಬಂದ್‌ಗೆ ಕರೆ ನೀಡಲಾಗಿದೆ. ಇದನ್ನೂ ಓದಿ: ಬಿಜೆಪಿಯಲ್ಲಿ ಟಿಕೆಟ್ ಕೊಟ್ಟರೆ ನಿಂತ್ಕೊತೀನಿ, ಇಲ್ಲ ಅಂದ್ರೆ ಇಲ್ಲ: ಸೋಮಣ್ಣ
Advertisement
Advertisement
ಸಭೆಯ ಬಳಿಕ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಷಣ್ಮುಗಪ್ಪ, ತರಕಾರಿ, ಔಷಧದ ಗಾಡಿ, ಕೋಳಿ ಸಾಗಾಣಿಕೆ, ದಿನಬಳಕೆ ವಸ್ತುಗಳ ಸಾಗಾಟ, ಆನ್‌ಲೈನ್ ವಸ್ತುಗಳ ಸಾಗಾಟದ ವಾಹನಗಳು ಸಂಪೂರ್ಣ ಬಂದಾಗಲಿವೆ ಎಂದು ತಿಳಿಸಿದರು. ಇದನ್ನೂ ಓದಿ: ಕಾಂಗ್ರೆಸ್, ಜೆಡಿಎಸ್‌ನಲ್ಲಿ ಲೀಡರ್‌ಶಿಪ್ ಡಿಎನ್‌ಎ ಮೂಲಕ ಬರುತ್ತದೆ: ಸಿ.ಟಿ ರವಿ
Advertisement
Advertisement
ಬೆಂಗಳೂರಿನಲ್ಲಿ ಲಾರಿಗಳು ಸೇರಿದಂತೆ ಭಾರೀ ವಾಹನಗಳು ಪ್ರಮುಖ ರಸ್ತೆಗಳಲ್ಲಿ ಸಂಚರಿಸುವುದರಿಂದ ವಾಹನ ದಟ್ಟಣೆಗೆ ಕಾರಣವಾಗುತ್ತಿದೆ. ಈ ಹಿನ್ನೆಲೆ ಬೆಳಗ್ಗೆ 8ರಿಂದ 11ಗಂಟೆ ಹಾಗೂ ಸಂಜೆ 4ರಿಂದ 10 ಗಂಟೆಯವರೆಗೆ ಸರಕು ಸಾಗಣೆ ವಾಹನಗಳಿಗೆ ನಗರಕ್ಕೆ ಪ್ರವೇಶಿಸದಂತೆ ನಿರ್ಬಂಧ ಹೇರಲಾಗಿದೆ. ಇದನ್ನೂ ಓದಿ: ರಾಜಕೀಯದಿಂದ ದೂರವಿರಲು ಕಾರಣರಾದ ಆ ವ್ಯಕ್ತಿ ಬಗ್ಗೆ ಬಹಿರಂಗಪಡಿಸಿದ ರಜನಿಕಾಂತ್