ಅಮರಾವತಿ: ಅಪಘಾತ ಮಾಡಿ ಪೊಲೀಸರಿಂದ ತಪ್ಪಿಸಿಕೊಳ್ಳಲು ನಾಲೆಗೆ ಹಾರಿದ ಟ್ರಕ್ ಚಾಲಕನೊಬ್ಬ 3 ಕಿ.ಮೀ. ವರೆಗೂ ಸ್ವಿಮ್ಮಿಂಗ್ ಮಾಡಿರುವ ಘಟನೆ ಆಂಧ್ರಪ್ರದೇಶದಲ್ಲಿ (Andhra Pradesh) ನಡೆದಿದೆ.
ಟ್ರಕ್ ಡ್ರೈವರ್ ಚಲ್ಲ ಕೃಷ್ಣ ಈ ಸಾಹಸ ಮಾಡಿದ ಭೂತ. ಈತ ವಿಂಜಮೂರಿಗೆ ತೆರಳುತ್ತಿದ್ದ. ವೇಗವಾಗಿ ಟ್ರಕ್ ಚಾಲನೆ ಮಾಡುತ್ತಿದ್ದರಿಂದ ನಿಯಂತ್ರಣಕ್ಕೆ ಸಿಗದೆ ಪೊದಲಕೂರು ಮಂಡಲದ ತಾಟಿಪರ್ತಿ ಬಳಿ ಆಟೋ ರಿಕ್ಷಾಗೆ ಡಿಕ್ಕಿ ಹೊಡೆದಿದ್ದಾನೆ. ಪೊಲೀಸರಿಂದ ತಪ್ಪಿಸಿಕೊಳ್ಳುವ ಸಲುವಾಗಿ ಕೃಷ್ಣ ವಾಹನವನ್ನು ನಿಲ್ಲಿಸದೆ ಇನ್ನಷ್ಟು ವೇಗವಾಗಿ ಓಡಿಸಿದ್ದಾನೆ. ಇದನ್ನೂ ಓದಿ: ಮದುವೆಯಾಗುವುದಾಗಿ ನಂಬಿಸಿ ವಿಧವೆಗೆ 12 ಲಕ್ಷ ವಂಚಿಸಿದ 56ರ ವ್ಯಕ್ತಿ!
Advertisement
Advertisement
ಗಾಬರಿಯಲ್ಲಿ ವಾಹನ ಚಲಾಯಿಸುತ್ತಿದ್ದ ಕೃಷ್ಣ, ಸಂಗಮ್ ಪ್ರದೇಶದಲ್ಲಿ ಮತ್ತೆ ಎಮ್ಮೆಯೊಂದಕ್ಕೆ ಡಿಕ್ಕಿ ಹೊಡೆದಿದ್ದಾನೆ. ಈತನನ್ನು ಹಿಡಿಯಲೇಬೇಕು ಎಂದು ಪೊಲೀಸರು ಟ್ರಕ್ ಬೆನ್ನತ್ತಿದ್ದಾರೆ. ಡ್ರೈವರ್ ಬೆನ್ನತ್ತಿದ್ದ ಪೊಲೀಸರಿಗೆ ಕನಿಗಿರಿ ಜಲಾಶಯದ ನಾಲೆಯ ಒಡ್ಡು ಮೇಲೆ ಟ್ರಕ್ ನಿಂತಿರುವುದು ಕಂಡುಬಂದಿದೆ.
Advertisement
ಈ ವೇಳೆ ನಾಲೆ ಕಡೆ ದೃಷ್ಟಿ ಹಾಯಿಸಿ ನೋಡಿದ ಪೊಲೀಸರಿಗೆ ಟ್ರಕ್ ಡ್ರೈವರ್ ನೀರಿನಲ್ಲಿ ಈಜುತ್ತಿರುವುದು ಕಂಡುಬಂದಿದೆ. ಆತನನ್ನು ಹಿಡಿಯಲು ಮುಂದಾದಾಗ, ಸಿಗಬಾರದು ಎಂಬ ಕಾರಣಕ್ಕೆ ನಾಲೆಯಿಂದ ದಡದ ಮೇಲಕ್ಕೆ ಬರದೇ ಸುಮಾರು 3 ಕಿ.ಮೀ ವರೆಗೂ ಈಜಿದ್ದಾನೆ. ಇದನ್ನೂ ಓದಿ: ಚಾಕಲೇಟ್ ಆಮಿಷವೊಡ್ಡಿ 4ರ ಬಾಲಕಿ ಮೇಲೆ ಅತ್ಯಾಚಾರ
Advertisement
ನಾಲೆಯಲ್ಲಿ ಅಪಾಯದ ನೀರಿನ ಮಟ್ಟ ಇದ್ದಿದ್ದರಿಂದ ಪೊಲೀಸರು ಯಾರೂ ಸಹ ನೀರಿಗಿಳಿಯಲು ಮುಂದಾಗಲಿಲ್ಲ. ಕೊನೆಗೆ ಈಜುಪಟುವೊಬ್ಬನನ್ನು ಸ್ಥಳಕ್ಕೆ ಕರೆಸಿದರು. ಆತ ನಾಲೆಗೆ ದುಮುಕಿ ಕೃಷ್ಣನನ್ನು ಹಿಡಿದು ಸುರಕ್ಷಿತವಾಗಿ ದಡಕ್ಕೆ ಕರೆತಂದ. ನಂತರ ಕೃಷ್ಣನನ್ನು ಪೊಲೀಸರು ವಶಕ್ಕೆ ಪಡೆದರು.