ಕೊಲಂಬೊ: ಡೀಸೆಲ್‌ಗಾಗಿ ಬಂಕ್‌ನಲ್ಲಿ ಸತತ 5 ದಿನಗಳ ಕಾಲ ಕ್ಯೂನಲ್ಲಿ ನಿಂತಿದ್ದ ಟ್ರಕ್ ಚಾಲಕ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಶ್ರೀಲಂಕಾದಲ್ಲಿ ನಡೆದಿದೆ.
ದೇಶದ ಪಶ್ಚಿಮ ಪ್ರಾಂತ್ಯದ ಫಿಲ್ಲಿಂಗ್ ಸ್ಟೇಷನ್‌ನಲ್ಲಿ ಐದು ದಿನಗಳ ಕಾಲ ಸರದಿಯಲ್ಲಿ ನಿಂತಿದ್ದ 63 ವಯಸ್ಸಿನ ಟ್ರಕ್ ಚಾಲಕ ಶ್ರೀಲಂಕಾದಲ್ಲಿ ಸಾವನ್ನಪ್ಪಿದ್ದಾರೆ. ಸಾಲದ ಸುಳಿಯಲ್ಲಿ ಸಿಲುಕಿರುವ ದ್ವೀಪ ರಾಷ್ಟ್ರದಲ್ಲಿ ಇಂಧನ ಸಂಗ್ರಹಕ್ಕಾಗಿ ಸರತಿ ಸಾಲಿನಲ್ಲಿ ನಿಂತು ದೀರ್ಘಕಾಲ ಕಾದು ಮೃತಪಟ್ಟವರ ಸಂಖ್ಯೆ 10ಕ್ಕೇರಿದೆ. ಇದನ್ನೂ ಓದಿ: ರಫ್ತು ನಿಲ್ಲಿಸಿದ ಭಾರತ – ಗೋಧಿಗಾಗಿ ರಷ್ಯಾ ಕಡೆ ಮುಖ ಮಾಡಿದ ಬಾಂಗ್ಲಾದೇಶ
Advertisement
Advertisement
ಅಂಗುರುವಾತೋಟದ ಫಿಲ್ಲಿಂಗ್ ಸ್ಟೇಷನ್‌ನಲ್ಲಿ ಈ ಘಟನೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸರತಿ ಸಾಲಿನಲ್ಲಿ ನಿಂತು ಮೃತಪಟ್ಟವರು 43 ರಿಂದ 84 ವರ್ಷ ವಯಸ್ಸಿನ ಪುರುಷರೇ ಆಗಿದ್ದಾರೆ. ಈ ಪೈಕಿ ಹೆಚ್ಚಿನ ಸಾವುಗಳು ಹೃದಯಾಘಾತದಿಂದ ಸಂಭವಿಸಿದ್ದಾಗಿವೆ ಎಂದು ವರದಿಯಾಗಿದೆ.
Advertisement
ವಾರದ ಹಿಂದೆ, 53 ವರ್ಷದ ವ್ಯಕ್ತಿಯೊಬ್ಬರು ಕೊಲಂಬೊದ ಪಾನದುರಾದ ಪೆಟ್ರೋಲ್ ಬಂಕ್‌ನಲ್ಲಿ ದೀರ್ಘಕಾಲ ಸರತಿ ಸಾಲಿನಲ್ಲಿ ಕಾಯುತ್ತಿದ್ದಾಗ ಸಾವನ್ನಪ್ಪಿದರು. ಇದನ್ನೂ ಓದಿ: 6 ವರ್ಷದ ಹಿಂದೆ ಮದುವೆ- 4ನೇ ಪತ್ನಿಗೆ ಡಿವೋರ್ಸ್ ಕೊಟ್ಟ 91ರ ರೂಪರ್ಟ್ ಮುರ್ಡೋಕ್
Advertisement
ಶ್ರೀಲಂಕಾದಲ್ಲಿ 2.2 ಕೋಟಿ ಜನಸಂಖ್ಯೆ ಇದೆ. 70 ವರ್ಷಗಳ ನಂತರ ಈ ದೇಶ ಅತ್ಯಂತ ಕೆಟ್ಟ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ. ಇಂಧನ ಕೊರತೆ, ಆಹಾರದ ಬೆಲೆಗಳಲ್ಲಿ ಏರಿಕೆ ಮತ್ತು ಔಷಧಗಳ ಕೊರತೆ ದೇಶವನ್ನು ಹೆಚ್ಚು ಭಾದಿಸುತ್ತಿದೆ.