ಮುಂಬೈ: ಟ್ರಕ್ (Truck) ಹಾಗೂ ಖಾಸಗಿ ಬಸ್ (Bus) ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ (Accident) ನಾಲ್ವರು ಸಾವನ್ನಪ್ಪಿದ್ದು, 22 ಜನರು ಗಾಯಗೊಂಡಿರುವ ಘಟನೆ ಮಹಾರಾಷ್ಟ್ರದ (Maharashtra) ಪುಣೆಯಲ್ಲಿ ನಡೆದಿದೆ.
ಅಂಬೇಗಾಂವ್ ಪ್ರದೇಶದ ನರ್ಹೆ ಗ್ರಾಮದಲ್ಲಿ ಪುಣೆ-ಬೆಂಗಳೂರು ಹೆದ್ದಾರಿಯ (Pune-Bengaluru National Highway) ಸ್ವಾಮಿ ನಾರಾಯಣ ದೇವಸ್ಥಾನದ ಪಕ್ಕದಲ್ಲಿರುವ ನವಲೆ ಸೇತುವೆ ಬಳಿ ಈ ಅಪಘಾತ ಸಂಭವಿಸಿದೆ.
Advertisement
Advertisement
ವರದಿಗಳ ಪ್ರಕಾರ ಸಕ್ಕರೆ ಚೀಲಗಳನ್ನು ಹೊತ್ತೊಯ್ಯುತ್ತಿದ್ದ ಟ್ರಕ್ ಖಾಸಗಿ ಬಸ್‌ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ವಾಹನಗಳು ಪಲ್ಟಿಯಾಗಿದ್ದು, ನಜ್ಜುಗುಜ್ಜಾಗಿವೆ. ತಕ್ಷಣವೇ ಅಗ್ನಿಶಾಮಕ ದಳ ಘಟನಾ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದೆ. ಪಿಎಂಆರ್‌ಡಿಎಯಿಂದ ಒಂದು ರಕ್ಷಣಾ ವ್ಯಾನ್ ಸೇರಿದಂತೆ ಒಟ್ಟು 7 ಅಗ್ನಿಶಾಮಕ ವಾಹನಗಳು ರಕ್ಷಣಾ ಕಾರ್ಯದಲ್ಲಿ ತೊಡಗಿವೆ. ಇದನ್ನೂ ಓದಿ: 2 ಲಾರಿಗಳ ಮುಖಾಮುಖಿ ಡಿಕ್ಕಿ – ಓರ್ವ ಸಾವು, ಮೂವರಿಗೆ ಗಂಭೀರ ಗಾಯ
Advertisement
Advertisement
ಗಾಯಾಳುಗಳನ್ನು ತಕ್ಷಣವೇ ಹತ್ತಿರದ ಆಸ್ಪತ್ರೆಗೆ ರವಾನಿಸಿ ಸೂಕ್ತ ಚಿಕಿತ್ಸೆಯನ್ನು ನೀಡಲಾಗುತ್ತಿದೆ. ಅಪಘಾತಕ್ಕೆ ಕಾರಣವೇನು ಎಂಬುದನ್ನು ತಿಳಿಯಲು ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಮತ್ತೆ 3 ದಿನಗಳ ಕಾಲ ಮಳೆ