ಮೈಸೂರು: ವಿದ್ಯುತ್ ತಂತಿ ತಗುಲಿ ಕ್ಯಾಂಟರ್ ಭಸ್ಮವಾದ ಘಟನೆ ಹೆಚ್‍ಡಿ ಕೋಟೆಯ (HD Kote) ಬೆಟ್ಟದಬೀಡು ಗ್ರಾಮದಲ್ಲಿ ನಡೆದಿದೆ.
ಕಬ್ಬಿನ ಸೋಗು ತುಂಬಿಕೊಂಡು ಬರುತ್ತಿದ್ದಾಗ ಗ್ರಾಮದ ಬಳಿ ಕ್ಯಾಂಟರ್‌ಗೆ ವಿದ್ಯುತ್ ತಂತಿ ತಗುಲಿದೆ. ಪರಿಣಾಮ ಕ್ಯಾಂಟರ್ ಹೊತ್ತಿ ಉರಿದಿದೆ. ನೋಡ ನೋಡುತ್ತಿದ್ದಂತೆಯೇ ಬೆಂಕಿಯ ಕೆನ್ನಾಲಿಗೆಗೆ ಕ್ಯಾಂಟರ್ ಸಂಪೂರ್ಣ ಭಸ್ಮವಾಗಿದೆ.
ಅದೃಷ್ಟವಶಾತ್ ಕ್ಯಾಂಟರ್ ಚಾಲಕ ಪ್ರಾಣಪಾಯದಿಂದ ಪಾರಾಗಿದ್ದಾನೆ ಎಂದು ತಿಳಿದು ಬಂದಿದೆ.