ಹೈದರಾಬಾದ್: ಕೇಂದ್ರ ಸಚಿವ ಅಮಿತ್ ಶಾ(Amit Shah) ಹೈದರಾಬಾದ್(Hyderabad) ಪ್ರವಾಸ ವೇಳೆ ಭದ್ರತಾ ಲೋಪ ಉಂಟಾಗಿದೆ. ಗೃಹ ಸಚಿವರು ತೆರಳುವಾಗ ಬೆಂಗಾವಲು ಪಡೆಗೆ ಟಿಆರ್‌ಎಸ್ ನಾಯಕನ ಕಾರು ಅಡ್ಡ ಬಂದಿದೆ.
ಹೈದರಾಬಾದ್ ವಿಮೋಚನಾ ದಿನಾಚರಣೆಯಲ್ಲಿ ಪಾಲ್ಗೊಳ್ಳಲು ನಗರಕ್ಕೆ ಬಂದಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಅಶ್ವದಳದ ಮುಂದೆ ತೆಲಂಗಾಣ ರಾಷ್ಟ್ರೀಯ ಸಮಿತಿ (ಟಿಆರ್‌ಎಸ್) ಮುಖಂಡ ಗೋಸುಲ ಶ್ರೀನಿವಾಸ್ ಕಾರನ್ನು ನಿಲ್ಲಿಸಿದರು. ಹಾರನ್ ಹೊಡೆದ್ರೂ ಆತ ಕಾರನ್ನು ಪಕ್ಕಕ್ಕೆ ತೆಗೆಯದ ಹಿನ್ನೆಲೆಯಲ್ಲಿ, ಅಮಿತ್ ಷಾ ಭದ್ರತಾ ಸಿಬ್ಬಂದಿ ಹೋಗಿ ಕಾರಿನ ಗಾಜುಗಳನ್ನು ಒಡೆದಿದ್ದಾರೆ. ಟಿಆರ್‌ಎಸ್ ನಾಯಕನ ವರ್ತನೆಗೆ ಬಿಜೆಪಿ ನಾಯಕರಿಂದ ಭಾರೀ ಆಕ್ರೋಶ ವ್ಯಕ್ತವಾಗಿದೆ. ಈ ಬಗ್ಗೆ ಉನ್ನತಮಟ್ಟದ ತನಿಖೆಗೆ ಒತ್ತಾಯಿಸಿದೆ.
Advertisement
The car stopped just like that. I was in tension. I will speak to them (Police officers). They vandalised the car. I will go, it’s unnecessary tension: TRS leader Gosula Srinivas, in Hyderabad. pic.twitter.com/cxjPbYbbwR
— ANI (@ANI) September 17, 2022
Advertisement
ಈ ಬಗ್ಗೆ ಟಿಆರ್‌ಎಸ್(TRS) ಮುಖಂಡ ಮಾತನಾಡಿ, ಕಾರು(Car) ಹಾಗೆಯೇ ನಿಂತಿತು. ನಾನು ಟೆನ್ಷನ್‍ನಲ್ಲಿದ್ದೆ. ನಾನು ಪೊಲೀಸ್ ಅಧಿಕಾರಿಗಳೊಂದಿಗೆ ಮಾತನಾಡುತ್ತಿದ್ದೆ. ಆದರೆ ಅವರು ನಾನು ಹೋಗುತ್ತೇನೆ ಎಂದರೂ ಕಾರನ್ನು ಧ್ವಂಸಗೊಳಿಸಿದರು ಎಂದು ಹೇಳಿದರು. ಇದನ್ನೂ ಓದಿ: 8 ಚೀತಾಗಳು ಬಂದವು , ಆದ್ರೆ 16 ಕೋಟಿ ಉದ್ಯೋಗ ಬರಲಿಲ್ಲ – ರಾಹುಲ್ ಗಾಂಧಿ ಟೀಕೆ
Advertisement
Advertisement
ತೆಲಂಗಾಣದಲ್ಲಿ ವಿಮೋಚನಾ ದಿನಾಚರಣೆ ರಾಜಕೀಯ ಜೋರಾಗಿದೆ. 2014ರಿಂದ ಇಲ್ಲಿಯವರೆಗೆ ಸುಮ್ಮನೆ ಇದ್ದ ಕೆಸಿಆರ್, ಇದೇ ಮೊದಲ ಬಾರಿಗೆ ವಿಮೋಚನಾ ದಿನವನ್ನು ಆಚರಿಸಿದ್ದಾರೆ. ಇದಕ್ಕೆ ಕಾರಣವೂ ಇಲ್ಲದಿಲ್ಲ. ಇದೇ ವಿಚಾರ ಇಟ್ಕೊಂಡು, ಬಿಜೆಪಿ ಜನರ ಮುಂದೆ ಹೋಗ್ತಿದೆ. ಇವತ್ತು ಅಮಿತ್ ಷಾ ಹೈದ್ರಾಬಾದ್‍ಗೆ ಬಂದು ಬೃಹತ್ ಸಭೆ ನಡೆಸಿದ್ದಾರೆ. ಹೀಗಾಗಿಯೇ ಬಿಜೆಪಿಗೆ ಕೌಂಟರ್ ಕೊಡಲು ಟಿಆರ್‍ಎಸ್ ಕೂಡ ಅನಿವಾರ್ಯವಾಗಿ ವಿಮೋಚನಾ ದಿನೋತ್ಸವ ಆಚರಿಸಿದೆ. ಕೋಮು ಶಕ್ತಿಗಳು ತೆಲಂಗಾಣದಲ್ಲಿ ಅಶಾಂತಿ ಸೃಷ್ಟಿಗೆ ಯತ್ನಿಸ್ತಿವೆ. ಈ ಬಗ್ಗೆ ಎಚ್ಚರ ವಹಿಸಬೇಕು ಎಂದು ಸಿಎಂ ಕೆಸಿಆರ್ ಹೇಳಿದ್ದಾರೆ. ಇದನ್ನೂ ಓದಿ: ಪತ್ನಿಯನ್ನು ಕೊಲೆ ಮಾಡಿದ್ದ ಪತಿ 10 ದಿನಗಳ ಬಳಿಕ ಶವವಾಗಿ ಪತ್ತೆ