ಹೈದರಾಬಾದ್: ತೆಲಂಗಾಣ ರಾಷ್ಟ್ರ ಸಮಿತಿ (TRS) ಮುಖ್ಯಸ್ಥ ಕೆ ಚಂದ್ರಶೇಖರ್ ರಾವ್ (KCR) ಅವರು ದಸರಾದ ಶುಭ ಗಳಿಗೆಯಲ್ಲಿ ರಾಷ್ಟ್ರೀಯ ಪಕ್ಷವನ್ನು ಪ್ರಾರಂಭಿಸಲಿದ್ದಾರೆ. ಇದರ ಸಂಭ್ರಮಾಚರಣೆಗಾಗಿ ಪಕ್ಷದ ನಾಯಕರೊಬ್ಬರು ಸಾರ್ವಜನಿಕರಿಗೆ ಮದ್ಯದ ಬಾಟಲಿ (Liquor Bottles) ಹಾಗೂ ಕೋಳಿಯನ್ನು (Chicken) ಹಂಚಿದ್ದಾರೆ. ಇದರ ವೀಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು, ಟೀಕೆಗೂ ಗ್ರಾಸವಾಗಿದೆ.
Advertisement
ಟಿಆರ್‌ಎಸ್ ನಾಯಕ ರಾಜನಾಳ ಶ್ರೀಹರಿ (Rajanala Srihari) ಅವರು ರಾಷ್ಟ್ರೀಯ ಪಕ್ಷ ಆರಂಭದ ಹಿನ್ನೆಲೆ ಸಾರ್ವಜನಿಕರಿಗೆ ಮದ್ಯದ ಬಾಟಲಿ ಹಾಗೂ ಕೋಳಿಯನ್ನು ವಿತರಿಸಿದ್ದಾರೆ. ತೆಲಂಗಾಣದ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಹಾಗೂ ಪಕ್ಷದ ನಾಯಕ ಕೆ.ಟಿ ರಾಮರಾವ್ (KTR) ಅವರ ಕಟೌಟ್‌ಗಳ ನಡುವೆ ಶ್ರೀಹರಿ ಅವರು ಮದ್ಯದ ಬಾಟಲಿ ಹಾಗೂ ಚಿಕನ್ ಹಂಚುತ್ತಿರುವುದು ವೀಡಿಯೋದಲ್ಲಿ ಸೆರೆಯಾಗಿದೆ. ಇದನ್ನೂ ಓದಿ: 873 ಪೊಲೀಸ್ ಅಧಿಕಾರಿಗಳಿಗೆ PFI ಜೊತೆ ನಂಟು: NIA
Advertisement
ಟಿಆರ್‌ಎಸ್ ನಾಯಕ ಸುಮಾರು 200 ಬಾಟಲಿ ಮದ್ಯ ಹಾಗೂ 200 ಕೋಳಿಗಳನ್ನು ವಿತರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆದರೆ ರಾಜನಾಳ ಶ್ರೀಹರಿ ಅವರ ಕಾರ್ಯವೈಖರಿಯನ್ನು ಪ್ರಶ್ನಿಸಿ ಪ್ರತಿಪಕ್ಷಗಳು ಟೀಕೆ ವ್ಯಕ್ತಪಡಿಸಿವೆ.
Advertisement
#WATCH | TRS leader Rajanala Srihari distributes liquor bottles and chicken to locals ahead of Telangana CM KC Rao launching a national party tomorrow, in Warangal pic.twitter.com/4tfUsPgfNU
— ANI (@ANI) October 4, 2022
Advertisement
ಬುಧವಾರ ದಸರಾ ಸಂದರ್ಭದಲ್ಲಿ ಕೆಸಿಆರ್ ಅವರು ತಮ್ಮ ರಾಷ್ಟ್ರೀಯ ಪಕ್ಷದ ವಿವರಗಳನ್ನು ಪ್ರಕಟಿಸುವ ಸಾಧ್ಯತೆಯಿದೆ. ತೆಲಂಗಾಣ ಭವನದಲ್ಲಿ ನಡೆಯಲಿರುವ ಟಿಆರ್‌ಎಸ್ ನಾಯಕರ ಸಭೆಯಲ್ಲಿ ಈ ಕುರಿತು ಘೋಷಣೆಯಾಗುವ ಸಾಧ್ಯತೆ ಇದೆ. ರಾಷ್ಟ್ರೀಯ ಪಕ್ಷವನ್ನು ಆರಂಭಿಸುವುದರೊಂದಿಗೆ ಕೆಸಿಆರ್ ರಾಷ್ಟ್ರ ರಾಜಕಾರಣಕ್ಕೆ ಎಂಟ್ರಿ ಕೊಡುವ ಚಿಂತನೆಯಲ್ಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶ್‌ಮುಖ್‌ಗೆ ಜಾಮೀನು