ದಶಕಗಳ ಹಿಂದೆ ಜನಪ್ರಿಯ ನಟಿಯಾಗಿ ಗುರುತಿಸಿಕೊಂಡಿದ್ದ ಮಹಾಲಕ್ಷ್ಮಿ TRP ರಾಮ (TRP Rama) ಸಿನಿಮಾ ಮೂಲಕ ಮತ್ತೆ ಕಮ್‌ಬ್ಯಾಕ್ ಆಗುತ್ತಿರುವುದು ಗೊತ್ತೇ ಇದೆ. ರವಿಪ್ರಸಾದ್ (Raviprasad) ನಟಿಸಿ ಮತ್ತು ನಿರ್ದೇಶನದ ಈ ಚಿತ್ರದ ಟ್ರೈಲರ್ (Trailer) ಅನಾವರಣಗೊಂಡಿದೆ. ಹೆಣ್ಣಿನ ಶೋಷಣೆ, ಮಾಧ್ಯಮಗಳ ಮೌಲ್ಯವೇನು ಅನ್ನೋದನ್ನು ಟ್ರೇಲರ್ ನಲ್ಲಿ ಕಟ್ಟಿಕೊಡಲಾಗಿದೆ. ಬೆಂಗಳೂರಿನ ಮಲ್ಲೇಶ್ವರಂನಲ್ಲಿ ಟ್ರೈಲರ್ ಬಿಡುಗಡೆ ಮಾಡಲಾಗಿದ್ದು, ಚಿತ್ರತಂಡ ಒಂದಷ್ಟು ಮಾಹಿತಿ ಹಂಚಿಕೊಂಡಿದೆ.
Advertisement
ಹಿರಿಯ ನಟಿ ಮಹಾಲಕ್ಷ್ಮಿ (Mahalakshmi)ಮಾತನಾಡಿ, ನಾನು ಎಲ್ಲಾ ಭಾಷೆಯಲ್ಲಿ ಎಲ್ಲಾ ಹೀರೋಗಳ ಜೊತೆ ಸಿನಿಮಾ ಮಾಡಿದ್ದೇನೆ. ಎಲ್ಲವೂ ಟೀಂ ವರ್ಕ್. ನಮ್ಮ ಮನೆಯಲ್ಲಿ ಲಾಫಿಂಗ್ ಬುದ್ಧ ಇಟ್ಕೊಂಡು ನಗುತ್ತಾ ಇರುವುದು ಸಾಕಾಗಲ್ಲ. ಮೂರು ಕೋತಿ ನೆನಪು ಇದೆಯಲ್ಲಾ? ಕೆಟ್ಟದನ್ನು ಕೇಳಬಾರದು. ಕೆಟ್ಟದನ್ನು ನೋಡಬಾರದು. ಕೆಟ್ಟದನ್ನು ಮಾಡಬಾರದು. ಅದನ್ನು ನಿಮ್ಮ ಮಕ್ಕಳಿಗೆ ನೆನಪಿಸಿ. ಅವರ ಜೀವನ ಚೆನ್ನಾಗಿರುತ್ತದೆ. ಅದನ್ನೂ ಹೇಳಿಕೊಡುವುದೇ TRP ರಾಮ. ಎಂಟರ್ ಟೈನ್ಮೆಂಟ್ ಇದೆ. ಕ್ವಾಲಿಟಿ ಇದೆ. ನೀತಿ ಇದೆ. ಆ ನೀತಿ ನಮ್ಮ ಜನರೇಷನ್ ಗೆ ಸಿಗಬೇಕು. ನಮ್ಮ ಸರ್ಕಾರ ಎಲ್ಲಾ ನಿರ್ಧಾರ ತೆಗೆದುಕೊಳ್ಳುತ್ತಿದೆ. ಆದ್ರೆ ಅದನ್ನು ಫಾಲೋ ಮಾಡಲು ಆಗ್ತಿಲ್ಲ. TRP ರಾಮ ಬರೀ ಸಿನಿಮಾವಲ್ಲ. ಅದೊಂದು ಜೀವನ ಎಂದು ತಿಳಿಸಿದರು. ಇದನ್ನೂ ಓದಿ:ಪರಿಣಿತಿ ಚೋಪ್ರಾ – ರಾಘವ್ ಚಡ್ಡಾ ಅದ್ದೂರಿ ಮದುವೆ ಫೋಟೋಸ್
Advertisement
Advertisement
ನಿರ್ದೇಶಕ ಕಂ ನಟ ರವಿ ಪ್ರಸಾದ್ ಮಾತನಾಡಿ, ಒಳ್ಳೆ ಬಜೆಟ್ ಗೆ ಸಿನಿಮಾ ಮಾಡಲು ತಯಾರಿ ನಡೆಸಿದಾಗ ಕಥೆ ಸಿಗುತ್ತಿರಲಿಲ್ಲ. ಅಂದರೆ ಬಜೆಟ್ ಗೆ ಹೊಂದಿಸಲು ಆಗುತ್ತಿರಲ್ಲ. ಆಗ ಹೊಳೆದಿದ್ದೇ TRP ರಾಮ ಕಥೆ. ರಾಮನ ನಾನೇ ಆ ಪಾತ್ರ ಮಾಡಬೇಕು ಎಂದು ಇರಲಿಲ್ಲ. ಈ ರೀತಿ ಕಂಟೆಂಟ್ ಇರುವ ಸಿನಿಮಾವನ್ನು ಯಾರ ಮೂಲಕ ಹೇಳಿಸಬೇಕು ಎಂದು ಹುಡುಕುತ್ತಿದ್ದೇವೆ. ಆಗ ತಲೆಗೆ ಬಂದಿದ್ದು ಮಹಾಲಕ್ಷ್ಮೀ ಮೇಡಂ. ಕಮರ್ಷಿಯಲ್ ಜೊತೆ ಒಂದೊಳ್ಳೆ ಸಂದೇಶ ಇಟ್ಟುಕೊಂಡು ಸಿನಿಮಾ ಮಾಡಿದ್ದೇವೆ. ಸೆನ್ಸಾರ್ ಆಗಬೇಕಿದೆ. ಅಕ್ಟೋಬರ್ ಮೊದಲ ವಾರ ತೆರೆಗೆ ತರುವ ಪ್ರಯತ್ನ ನಡೆಯುತ್ತದೆ ಎಂದು ತಿಳಿಸಿದರು.
Advertisement
ಹಿರಿಯ ಕಲಾವಿದರಾದ ಓಂ ಸಾಯಿ ಪ್ರಕಾಶ್ ಮಾತನಾಡಿ, ನೈಜ ಘಟನೆಗಳನ್ನು ನಾವು ತೆಗೆದುಕೊಂಡಾಗ ಅದು ಅದು ಹೃದಯಕ್ಕೆ ಹತ್ತಿರವಾಗುತ್ತದೆ. ಟ್ರೇಲರ್ ನೋಡುವಾಗ ತುಂಬಾ ನೋವು ಅನಿಸಿತು. ಸಮಾಜದಲ್ಲಿ ಹೆಣ್ಣನ್ನು ಬೇರೆ ರೀತಿ ನೋಡುವ ಸನ್ನಿವೇಶವಿದೆ. ಸರ್ಕಾರ ಎಷ್ಟು ಕಾನೂನು ಮಾಡುತ್ತಿದ್ದೆ. ಆದರೂ ರಾಕ್ಷಸ ಮನಸ್ಸು ತಡೆಯುತ್ತಿಲ್ಲ. ದಿನದಿಂದಕ್ಕೆ ಈ ರೀತಿ ಹೆಚ್ಚಾಗುತ್ತಿವೆ. ನಾಯಕನೋ ಖಳನಾಯಕನೋ ಗೊತ್ತಿಲ್ಲ. ಕಲಾವಿದರು ಯಾವ ಪಾತ್ರವಾದರೂ ನ್ಯಾಯ ಒದಗಿಸುತ್ತಾರೆ. ಮಹಾಲಕ್ಷ್ಮೀ ತಂದೆ-ತಾಯಿ ಇಬ್ಬರು ಮಹಾನ್ ನಟರು. ಅವರ ತಾಯಿ ಜೊತೆ ತೆಲುಗು ಸಿನಿಮಾ ರಂಗದಲ್ಲಿ ಕೆಲಸ ಮಾಡಿದ್ದೇನೆ. ಮಹಾಲಕ್ಷ್ಮೀ ನೋಡಿದ ತಕ್ಷಣ ನಿಮ್ಮ ತಾಯಿ ನೆನಪಾಗ್ತಿದ್ದಾರೆ ಎಂದೆ. ಎಮೋಷನ್ ಸೀನ್ಸ್ ಅದ್ಭುತವಾಗಿ ಮಾಡುತ್ತಾರೆ. ನಾಯಕನ ಜೀವನದಲ್ಲಿ ಏನಾಯ್ತೋ ಗೊತ್ತಿಲ್ಲ. ನಾಯಕನ ಹೆಸರು ರಾಮ ನೋಡಲು ರಾವಣ ತರ ಕಾಣುತ್ತಾನೆ. ಚಿತ್ರ ನೋಡಿದರೇ ಎಲ್ಲವೂ ಗೊತ್ತಾಗಲಿದೆ. ಇಡೀ TRP ತಂಡಕ್ಕೆ ಒಳ್ಳೆಯದಾಗಲಿ ಎಂದು ತಿಳಿಸಿದರು.
ನಟಿ ಸ್ಪರ್ಶ ಮಾತನಾಡಿ, ಈ ಸಿನಿಮಾ ಒಪ್ಪಿಕೊಳ್ಳಲು ಮಹಾಲಕ್ಷ್ಮೀ ಮೇಡಂ ಕಾರಣ. ಅವರ ಕಂಬ್ಯಾಕ್ ಚಿತ್ರ. ಅಂತಹ ಲೆಜೆಂಡ್ ಜೊತೆ ಕೆಲಸ ಮಾಡಲು ಎಲ್ಲರಿಗೂ ಅವಕಾಶ ಸಿಗಲ್ಲ. ಪ್ರವೀಣ್ ಸೂಡಾ ಇದಕ್ಕೆ ಸಂಭಾಷಣೆ ಬರೆದಿದ್ದಾರೆ. ಅವರು ಕಥೆ ಹೇಳಿದಾಗ ತುಂಬಾ ಚೆನ್ನಾಗಿದೆ ಅನಿಸಿತು. ತುಂಬಾ ಫಾಸ್ಟ್ ಯುಗದಲ್ಲಿ ಚಿಕ್ಕಪುಟ್ಟ ತಪ್ಪುಗಳಿಂದ ಎಷ್ಟು ದೊಡ್ಡ ಪ್ರಮಾದವಾಗುತ್ತದೆ ಅನ್ನೋದು ಚಿತ್ರದ ಒಂದು ಎಳೆ. ಅದನ್ನು ತುಂಬಾ ಅದ್ಭುತವಾಗಿ ಚಿತ್ರೀಕರಿಸಿದ್ದಾರೆ ಎಂದರು. ಅಶುತೋಶ್ ಪಿಕ್ಚರ್ಸ್ ಬ್ಯಾನರ್ ನಡಿ ನಿರ್ಮಾಣವಾಗಿರುವ TRP ರಾಮ ಸಿನಿಮಾದಲ್ಲಿ ರವಿಪ್ರಸಾದ್ ನಟಿಸಿ, ಆಕ್ಷನ್ ಕಟ್ ಹೇಳಿದ್ದು, ಇದು ಇವರ ಚೊಚ್ಚಲ ಪ್ರಯತ್ನ. ಮಹಾಲಕ್ಷ್ಮೀ ತಾಯಿ ಪಾತ್ರದಲ್ಲಿ, ಪತ್ರಕರ್ತೆಯಾಗಿ ಸ್ಪರ್ಶಯಾಗಿ ನಟಿಸಿದ್ದಾರೆ. ರಾಜ್ ಗುರು ಹೊಸಕೋಟೆ ಸಂಗೀತ, ಸುನಿಲ್ ಕಶ್ಯಪ್ ಸಂಕಲನ, ಗುರುಪ್ರಸಾದ್ ಛಾಯಾಗ್ರಹಣ, ರಾಕೇಶ್ ಆಚಾರ್ಯ ಬಿಜಿಎಂ ಸಿನಿಮಾಕ್ಕಿದೆ. ಸೆನ್ಸಾರ್ ಗಾಗಿ ಕಾಯ್ತಿರುವ TRP ರಾಮ ಆದಷ್ಟು ಬೇಗ ನಿಮ್ಮ ಮುಂದೆ ಬರಲಿದ್ದಾನೆ.
Web Stories