ಭೋಪಾಲ್: ಮುಂಜಾನೆ ಕೋಳಿಯ (Rooster) ಕೂಗು ಕೇಳಿ ಗ್ರಾಮೀಣ ಭಾಗದಲ್ಲಿ ಜನರು ಎಚ್ಚರಗೊಳ್ಳುವುದು ಸಾಮಾನ್ಯ. ಆದರೆ ಮಧ್ಯಪ್ರದೇಶದ ವೈದ್ಯನೊಬ್ಬ (Doctor) ಮುಂಜಾನೆ ಕೋಳಿ ಕೂಗುತ್ತದೆ ಎಂದು ನೆರೆ ಮನೆಯವರ ವಿರುದ್ಧವೇ ದೂರು ದಾಖಲಿಸಿದ್ದಾರೆ.
ಮಧ್ಯಪ್ರದೇಶದ ಇಂದೋರ್‌ನ ಪಲಾಸೊಯಾ ಪ್ರದೇಶದಲ್ಲಿ ಅಲೋಕ್ ಮೋದಿ ಎಂಬವರು ವಾಸವಿದ್ದರು. ಇವರು ವೃತ್ತಿಯಲ್ಲಿ ವೈದ್ಯರಾಗಿದ್ದು, ಪ್ರತಿದಿನ ಕೆಲಸ ಮುಗಿಸಿ ಬರುವುದು ತಡರಾತ್ರಿ ಆಗುತ್ತಿತ್ತು. ಆದರೆ ಇವರು ನೆರೆ ಮನೆಯಲ್ಲಿದ್ದ ಕೋಳಿಯೊಂದು ಮುಂಜಾನೆ 5 ಗಂಟೆ ಆದ ತಕ್ಷಣ ಕೂಗುತ್ತಿತ್ತು. ಇದರಿಂದ ಕೋಪಗೊಂಡ ಅಲೋಕ್ ಮೋದಿ ಪೊಲೀಸ್ (Police) ಠಾಣೆಗೆ ಹೋಗಿ ಕೋಳಿ ಸಾಕಿದ್ದ ತನ್ನ ನೆರೆಮನೆಯ ಮಹಿಳೆ ವಿರುದ್ಧ ದೂರು ದಾಖಲಿಸಿದ್ದಾರೆ.
Advertisement
Advertisement
ದೂರಿನಲ್ಲಿ ಏನಿದೆ?: ತನ್ನ ಮನೆಯ ಸಮೀಪ ಮಹಿಳೆಯೊಬ್ಬರು ಕೋಳಿ ಮತ್ತು ನಾಯಿಯನ್ನು ಸಾಕಿದ್ದಾರೆ. ಆದರೆ ಆ ಕೋಳಿಯು ಪ್ರತಿದಿನ ಬೆಳಗ್ಗೆ 5 ಗಂಟೆಗೆ ಕೂಗುತ್ತಿದೆ. ಇದರಿಂದಾಗಿ ತೊಂದರೆ ಆಗುತ್ತಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಗಡಿ ವಿವಾದ – ರಾಜ್ಯದ ನಿಲುವು ಸಂವಿಧಾನಬದ್ಧ: ಬೊಮ್ಮಾಯಿ
Advertisement
Advertisement
ಈ ವೇಳೆ ಪಾಲಾಸಿಯಾ ಪೊಲೀಸ್ ಠಾಣೆಯ ಉಸ್ತುವಾರಿ ಸಂಜಯ್ ಸಿಂಗ್ ಬೈನ್ಸ್ ಮಾತನಾಡಿ, ಮೊದಲು ಎರಡು ಕಡೆಯವರೊಂದಿಗೆ ಮಾತುಕತೆ ನಡೆಸಿ. ಆ ವೇಳೆಯೂ ಸಮಸ್ಯೆ ಬಗೆಹರಿಯದಿದ್ದರೇ ಕ್ರಮ ಕೈಗೊಳ್ಳಬಹುದು ಎಂದಿದ್ದಾರೆ. ಇದನ್ನೂ ಓದಿ: ವಿಧಾನಸಭೆ ಚುನಾವಣೆ: ಮೋದಿ ಜನಪ್ರಿಯತೆಗೆ ಕಾರಣ ಏನು? – ಜನಮನ ಗೆದ್ದ ಗುಜರಾತ್ ಮಾಡೆಲ್ ಯೋಜನೆಗಳೇನು?