ಬೆಂಗಳೂರು: ಖಾತೆ ಹಂಚಿಕೆ ವಿಚಾರದಲ್ಲಿ ಕಾಂಗ್ರೆಸ್‍ಗೆ ಬಿಗ್‍ಶಾಕ್ ಎದುರಾಗಿದ್ದು, `ಕೈ’ಕಮಾಂಡ್‍ಗೆ ಟ್ರಬಲ್ ಶೂಟರ್ ಡಿಕೆ ಶಿವಕುಮಾರ್ ಅವರು ಟ್ರಬಲ್ ಆಗಿದ್ದಾರೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಡಿಕೆಶಿ ನೇರ ಸಮರ ಸಾರಿದ್ದಾರೆ ಅನ್ನೋ ಮಾಹಿತಿಯೊಂದು ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.
ಹೊಸ ಮಂತ್ರಿಗಳಿಗೆ ಖಾತೆ ಹಂಚಿಕೆ ಮಾಡಬೇಕೆಂದು ಬುಧವಾರ ಸಭೆ ನಡೆದಿತ್ತು. ಅದರಲ್ಲಿ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಪರಮೇಶ್ವರ್ ಹಾಗೂ ಜಲಸಂಪನ್ಮೂಲ ಹಾಗೂ ವೈದ್ಯಕೀಯ ಸಚಿವ ಡಿಕೆ ಶಿವಕುಮಾರ್ ಅವರು ಕೂಡ ಹಾಜರಿದ್ದರು. ಈ ಸಭೆಯಲ್ಲಿ ಮಾತುಕತೆಯ ಸಂದರ್ಭದಲ್ಲಿ 2 ಖಾತೆಯಲ್ಲಿ ಒಂದು ಕೊಡಪ್ಪ ಅಂತಾ ಕೇಳಿದ್ದಕ್ಕೆ ಡಿಕೆ ಶಿವಕುಮಾರ್ ಅವರು ಫುಲ್ ಗರಂ ಆಗಿದ್ದಾರಂತೆ. ಇದನ್ನೂ ಓದಿ: ಸಭೆಯಿಂದ ಗರಂ ಆಗಿ ಹೊರಬಂದ ಕೈ ಉಸ್ತುವಾರಿ ವೇಣುಗೋಪಾಲ್!
Advertisement
Advertisement
ಎಲ್ಲಾ ನಿರ್ಧಾರ ಸಿದ್ದರಾಮಯ್ಯ ಅಭಿಪ್ರಾಯದಂತೆ ತೆಗೆದುಕೊಳ್ಳೋದ್ರೇ ಇನ್ನು ನಾವ್ಯಾಕೆ ಬೇಕು?. ಸುಮ್ಮನೆ ನಮ್ಮನ್ನೇಕೆ ಕೇಳ್ತೀರಿ.. ಟೈಂ ವೇಸ್ಟ್ ಯಾಕೆ ಮಾಡ್ಕೋತೀರಿ. ನಂಗೆ ಯಾವ ಖಾತೆನೂ ಬೇಡ.. ನಾನು ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಬಿಡ್ತೀನಿ. ನನಗೆ ಮಂತ್ರಿಗಿರಿಯೂ ಬೇಡ.. ಪಕ್ಷದಲ್ಲಿ ಅಧಿಕಾರವೇ ಬೇಡ.. ಕನಕಪುರದಲ್ಲೇ ಇದ್ದು ಬಿಡ್ತೀನಿ. ನಾನು, ನಮ್ಮ ಬ್ರದರ್(ಸಂಸದ ಡಿಕೆ ಸುರೇಶ್) ನಮ್ಮ ನಮ್ಮ ಕ್ಷೇತ್ರಗಳ ಬಗ್ಗೆ ಮಾತ್ರ ತಲೆ ಕೆಡಿಸಿಕೊಳ್ತೀವಿ. ನಿಮ್ಮಿಷ್ಟ ಏನ್ ಬೇಕೋ ಅದನ್ನು ಮಾಡಿಕೊಳ್ಳಿ ಅಂತ ವೇಣುಗೋಪಾಲ್ ಮುಂದೆಯೇ ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಗುಡುಗಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಸಿದ್ದರಾಮಯ್ಯ ವಿರುದ್ಧ ಕುಮಾರಸ್ವಾಮಿ ಗರಂ!
Advertisement
Advertisement
ವೈದ್ಯಕೀಯ ಶಿಕ್ಷಣ ಖಾತೆ ತುಕಾರಾಂಗೆ ಬಿಟ್ಟು ಕೊಡು ಎಂದ ಕೂಡಲೇ ರಾಜೀನಾಮೆ ಅಸ್ತ್ರ ಪ್ರಯೋಗ ಮಾಡಿದ್ದಾರೆ. ಡಿಕೆಶಿ ಗರಂ ಆದ ರೀತಿ ಕಂಡು ಎರಡು ನಿಮಿಷ ಸುಮ್ಮನಾದ ಕೈ ಉಸ್ತುವಾರಿ ವೇಣುಗೋಪಾಲ್, ಮಿಸ್ಟರ್ ಡಿಕೆ ಶಿವಕುಮಾರ್ ಅವರೇ ಸಮಾಧಾನ ಮಾಡಿಕೊಳ್ಳಿ. ಹೀಗೆ ಮಾತಾಡಿದ್ರೆ ಹೇಗೆ ಅಂತ ಪ್ರಶ್ನಿಸಿದ್ದಾರೆ. ಅಲ್ಲ ಕಣಯ್ಯ ಡಿಕೆಶಿ, ಪಕ್ಷದ ಹಿತದೃಷ್ಟಿಯಿಂದ ಈ ನಿರ್ಧಾರ ತಗೋ. ಸುಮ್ನೆ ಕೋಪ ಮಾಡ್ಕೊಂಡ್ರೆ ಹೆಂಗೇ ಅಂತ ಸಿದ್ದರಾಮಯ್ಯ ಅವರು ಕೂಡ ಪ್ರಶ್ನಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಡಿಕೆಶಿ, ಪಕ್ಷದ ಹಿತದೃಷ್ಟಿ ನಮ್ಗೂ ಗೊತ್ತು. ಪಕ್ಷಕ್ಕಾಗಿ ದುಡಿದವರಿಗೆ ಇದೇನಾ ಪ್ರಶಸ್ತಿ ಅಂತ ಮರು ಪ್ರಶ್ನೆ ಹಾಕಿದ್ದಾರೆ ಎಂಬುದಾಗಿ ತಿಳಿದುಬಂದಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv