ಚಿತ್ರದುರ್ಗ: ಮುರುಘಾಶ್ರೀ (Murugha Shree) ವಿರುದ್ಧ ಫೋಕ್ಸೋ ಕೇಸ್ ಅಷ್ಟು ಬೇಗ ಮುಗಿಯೋ ಲಕ್ಷಣಗಳು ಕಾಣ್ತಿಲ್ಲ. ಮುರುಘಾಶ್ರೀ ವಿರುದ್ಧ ಮತ್ತೊಂದು ಕೇಸ್ ದಾಖಲಾಗಿ ನಾಲ್ಕು ದಿನ ಕಳೆದ್ರೂ ಈವರೆಗೆ ಸಂತ್ರಸ್ತ ಬಾಲಕಿಯರ ಹೇಳಿಕೆ ದಾಖಲಿಸಲು ಸಾಧ್ಯವಾಗಿಲ್ಲ. ಹೀಗಾಗಿ ಇಂದು ದೂರುದಾರರ ಹೇಳಿಕೆ ಪಡೆಯಲು ಚಿತ್ರದುರ್ಗ (Chitradurga Police) ಪೊಲೀಸರೇ ಮೈಸೂರಿಗೆ ತೆರಳಿದ್ದಾರೆ.
ಹೌದು. ಪೋಕ್ಸೋ ಕೇಸ್‍ನಡಿ ನ್ಯಾಯಾಂಗ ಬಂಧನದಲ್ಲಿರುವ ಚಿತ್ರದುರ್ಗದ ಮುರುಘಾ ಶ್ರೀಗಳಿಗೆ ಮತ್ತೊಂದು ಸಂಕಷ್ಟ ಶುರುವಾಗಿದೆ. ತನ್ನಿಬ್ಬರು ಮಕ್ಕಳ ಜೊತೆ ಇನ್ನಿಬ್ಬರು ಮಕ್ಕಳ ಮೇಲೂ ಲೈಂಗಿಕ ದೌರ್ಜನ್ಯ ನಡೆದಿದೆ ಅಂತ ಮೈಸೂರಿನಲ್ಲಿ (Mysuru) ಪ್ರಕರಣ ದಾಖಲಿಸಿದ್ದರು. ಈಗ ತನಿಖೆಯನ್ನು ಚುರುಕುಗೊಳಿಸಿರೋ ಚಿತ್ರದುರ್ಗ ಪೊಲೀಸರು, ಸಂತ್ರಸ್ತ ಮಕ್ಕಳಿಂದ ಹೇಳಿಕೆ ದಾಖಲಿಸಿಕೊಂಡಿದ್ದಾರೆ.
ಸಂತ್ರಸ್ತ ಮಕ್ಕಳು ಅನಾರೋಗ್ಯಕ್ಕೆ ಒಳಗಾಗಿದ್ದರಿಂದ ಮೈಸೂರಿಗೆ ಖುದ್ದು ತೆರಳಿದ್ದ ಚಿತ್ರದುರ್ಗದ ಪೊಲೀಸರು, ಮಕ್ಕಳ ರಕ್ಷಣಾ ಸಮಿತಿಯ ಸಮ್ಮುಖದಲ್ಲಿ ಸಿಆರ್‍ಪಿಸಿ 161 ಅಡಿ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ. 3-4 ದಿನಗಳಲ್ಲಿ ಆರೋಪ ಮಾಡಿದ ಮಕ್ಕಳ ವೈದ್ಯಕೀಯ ಪರೀಕ್ಷೆ ಕೂಡ ನಡೆಯಲಿದೆ. ಇದನ್ನೂ ಓದಿ: ಡೇಟಿಂಗ್ ಬಗ್ಗೆ ಯುವತಿಗೆ ಅಡ್ವೈಸ್ ಕೊಟ್ಟ ಜೋ ಬೈಡೆನ್ – ವೀಡಿಯೋ ವೈರಲ್
ಇನ್ನೊಂದೆಡೆ ಬಾಲರೋಪಿ ಆಗಿದ್ದ 3ನೇ ಆರೋಪಿ ಬಸವಾದಿತ್ಯಗೆ ಮೊನ್ನೆಯಷ್ಟೇ ಜಾಮೀನು ಸಿಕ್ಕ ಬೆನ್ನಲ್ಲೇ, ಇದೀಗ ಉಳಿದ ಆರೋಪಿಗಳೂ ಕೂಡ ಬೇಲ್ ಸಲ್ಲಿಸಿದ್ದಾರೆ. 2ನೇ ಆರೋಪಿ ಹಾಗೂ ಲೇಡಿ ವಾರ್ಡನ್ ರಶ್ಮಿ, 4ನೇ ಆರೋಪಿ ಹಾಗೂ ಶ್ರೀಗಳ ಸಹಾಯಕ ಪರಮಶಿವಯ್ಯ, 5ನೇ ಆರೋಪಿ ಗಂಗಾಧರಯ್ಯ ಕೂಡ ಚಿತ್ರದುರ್ಗ ಕೋರ್ಟ್‍ನಲ್ಲಿ ಜಾಮೀನು ಅರ್ಜಿ ಸಲ್ಲಿಸಿದ್ದಾರೆ.
ಒಟ್ಟಿನಲ್ಲಿ ಮೊದಲ ಪೋಕ್ಸೋ ಕೇಸಲ್ಲೇ ಪರಿತಪಿಸುತ್ತಿರುವ ಮುರುಘಾ ಶ್ರೀಗಳಿಗೆ ಈಗ ಎರಡನೇ ಕೇಸ್ ಕೂಡ ಉರುಳಾಗಿದೆ. ಈ ಕೇಸ್‍ನಿಂದ ಸಿದ್ದು ಹೇಗೆ ಹೊರಬರುತ್ತಾರೋ ಕಾದು ನೋಡಬೇಕಿದೆ. ಇದನ್ನೂ ಓದಿ: ಯತ್ನಾಳಷ್ಟು ದೊಡ್ಡ ವ್ಯಕ್ತಿಯೂ ನಾನಲ್ಲ, ಅವರಷ್ಟು ಬುದ್ಧಿವಂತಿಕೆಯೂ ನನಗಿಲ್ಲ: ಸವದಿ