ಮೈಸೂರು: ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿಗೆ (Rohini Sindhuri) ಸಂಕಷ್ಟ ಎದುರಾಗಿದೆ. ಮೈಸೂರು ಜಿಲ್ಲಾಧಿಕಾರಿ (Mysuru DC) ಆಗಿದ್ದ ವೇಳೆ ಡಿಸಿ ನಿವಾಸ ನವೀಕರಣ, ಬಟ್ಟೆ ಬ್ಯಾಗ್ ಖರೀದಿಯಲ್ಲಿ ನಿಯಮ ಉಲ್ಲಂಘನೆ ಆಗಿರುವುದು ಸಾಬೀತಾಗಿದೆ.
ಸರ್ಕಾರದ ಪ್ರಾಥಮಿಕ ತನಿಖಾ ವರದಿ ಪ್ರಕಾರ ರೋಹಿಣಿ ಸಿಂಧೂರಿ ಮೇಲೆ ಶಿಸ್ತು ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಡಿಪಿಎಆರ್ ಅಧೀನ ಕಾರ್ಯದರ್ಶಿ ಜೇಮ್ಸ್ ಥಾರಖನ್ ಪತ್ರ ಬರೆದಿದ್ದಾರೆ. ಇದನ್ನೂ ಓದಿ: ಬಿಜೆಪಿ, ಜೆಡಿಎಸ್ ಮೈತ್ರಿ? – ಶಾ, ಹೆಚ್‌ಡಿಡಿ ಸಭೆಯ ಇನ್‌ಸೈಡ್ ಸ್ಟೋರಿ
Advertisement
ಪತ್ರದಲ್ಲಿ ಪ್ರಾಥಮಿಕ ತನಿಖಾ ವರದಿಯ ಎಲ್ಲಾ ಅಂಶಗಳು ಉಲ್ಲೇಖ ಮಾಡಿದ್ದು, ಡಿಸಿ ನಿವಾಸ ನವೀಕರಣಕ್ಕೆ ಯಾವ ಅನುಮತಿ ಪಡೆದಿಲ್ಲ. ನವೀಕರಣಕ್ಕೆ ಬಳಸಿದ ಹಣಕ್ಕೂ ಆರ್ಥಿಕ ಇಲಾಖೆ ಅನುಮತಿ ಪಡೆದಿಲ್ಲ. ನಿಯಮ ಉಲ್ಲಂಘನೆ ಮಾಡಿದ್ದಾರೆ. ಬಟ್ಟೆ ಬ್ಯಾಗ್ ಖರೀದಿಯಲ್ಲೂ ಯಾವ ನಿಯಮಾವಳಿ ಪಾಲನೆ ಆಗಿಲ್ಲ ಎಂದು ನಮೂದು ಮಾಡಿದ್ದಾರೆ.
Advertisement
Advertisement
Web Stories