ಎಲ್ಲರ ಕಾಲೆಳೆಯುತ್ತೆ ಕಾಲ ಅಂದಿದ್ದ ಉಪ್ಪಿ (Upendra) ನನ್ನ ಕಾಲು ಎಳೆಯುತ್ತೆ ಕಾಲ ಅಂತ ಕೆಲವರನ್ನ ಸಮಾಧಾನ ಮಾಡಿದ್ರು. ಈಗ ಯುಐ (UI) ಮೂಲಕ ಮತ್ತೊಂದು ಕಂಟೆಂಟ್ ಕೊಟ್ಟು ಸೌಂಡ್ ಮಾಡ್ತಿದ್ದಾರೆ. ಟ್ರೋಲ್‌ಗಳನ್ನ (Troll Song) ಇಟ್ಕೊಂಡು ಈ ರೀತಿ ಒಂದು ಹಾಡು ಮಾಡಬಹುದು ಅಂತ ಹೊಸ ಎಕ್ಸಾಂಪಲ್ ಸೆಟ್ ಮಾಡಿದ್ದಾರೆ. ಸ್ಯಾಂಡಲ್‌ವುಡ್ ಬಡಾ ಸ್ಟಾರ್‌ಗಳಿಂದ ಹಿಡಿದು ಲೆಟೆಸ್ಟ್ ಟ್ರೋಲ್ ಕಂಟೆಂಟ್ಟ್ ಬೆಳ್ಳುಳ್ಳಿವರೆಗೂ ಉಪ್ಪಿ ಹಾಡಿಗಾಗಿ ಟ್ರೆಂಡ್ ಮಾಡಿದ್ದಾರೆ. ಹಾಡು ಅದರೊಳಗಿರುವ ಕಮಾಲು ಎಲ್ಲವೂ ನಿಮ್ಮ ಮುಂದೆ ಹಾಜರಾಗ್ತಿದೆ ನೋಡಿ.
Advertisement
ರಿಯಲ್ ಸ್ಟಾರ್ ಉಪೇಂದ್ರ ಮತ್ತೊಮ್ಮೆ ಬಜಾರ್ ನಲ್ಲಿ ಹಲ್‌ಚಲ್ ಎಬ್ಬಿಸಿದ್ದಾರೆ. ಟ್ರೋಲ್ ಹಾಡಿನ ಮೂಲಕ ಹೊಸದೊಂದು ಕಂಟೆಂಟ್ ಕ್ರಿಯೇಷನ್‌ಗೆ ನಾಂದಿ ಹಾಡಿದ್ದಾರೆ. ಯುಐ ಸಿನಿಮಾ ಹಾಡು ಒಳ್ಳೆ ವ್ಯೂವ್ಸ್ ಆಗ್ತಿದೆ. ಜನರಿಗೆ ಕಿಕ್ ಕೊಡ್ತಿದೆ. ಒಂದೊಂದು ಸಾರಿ ನೋಡಿದಾಗ ಕೂಡ ಒಂದೊಂದು ಅರ್ಥ ಅನ್‌ರಿವಿಲ್ ಆಗ್ತಿದೆ. ಸ್ಯಾಂಡಲ್‌ವುಡ್‌ನಲ್ಲಿ ನಡೆದಿರುವ ಟ್ರೋಲ್ ಕಂಟೆಂಟ್ ಗೆ ಈಗ ಹಾಡಿನ ರೂಪ ಸಿಕ್ಕಿದೆ. ಹೊಸ ಪ್ರಯತ್ನಕ್ಕೆ ಸಿನಿ ಅಭಿಮಾನಿ ನಕ್ಕು ಎಂಜಾಯ್ ಮಾಡ್ತಿದ್ದಾನೆ. ಟ್ರೋಲ್ ಆಗುತ್ತೆ ಇದು ಟ್ರೋಲ್ ಆಗುತ್ತೆ ಅನ್ನೊ ಓಪನಿಂಗ್ ಸಾಲುಗಳಲ್ಲಿ ಯುವಕ-ಯುವತಿಯರ ಮನಸ್ಥಿತಿಯನ್ನ ಹೇಳಿದೆ ಯುಐ ಟೀಮ್. ಟ್ರೋಲ್ ಆದ್ರೆ ಹೈಪ್ ಆಗುತ್ತೆ ಹೈಪ್, ಆದ್ರೆ ಲೈಕ್ಸ್-ವ್ಯೂವ್ಸ್, ಕಾಮೆಂಟ್ಸ್ ಬರುತ್ತೆ ಅನ್ನೊ ಯೂತ್ ಮೈಂಡ್‌ಸೆಟ್ ಮೂಲಕ ಹಾಡು ಓಪನ್ ಆಗುತ್ತೆ. ಟ್ರೋಲ್ ಆದ್ರೂ ಪರವಾಗಿಲ್ಲ ಅನ್ನೊ ಬಹಳಷ್ಟು ಜನರ ಮನಸ್ಥಿತಿಯನ್ನ ಈ ಸಾಲುಗಳು ಪ್ರತಿನಿಧಿಸುತ್ತೆ. ಖಾಲಿ ಬಿಂದಿಗೆ, ಪ್ಲಾಸ್ಟಿಕ್ ಪೇಪರ್‌ಗಳು ರೋಡ್ನಲ್ಲಿ ಕೂತ ಜನ ಸದ್ಯದ ನಮ್ಮ ಸಮಾಜದ ಪರಿಸ್ಥಿತಿಗೆ ಪ್ರತಿರೂಪವಾಗಿದೆ.
Advertisement
Advertisement
ಜೋಗಿ ಪ್ರೇಮ್ ಕಳೆದ ಕೆಲವು ವರ್ಷಗಳ ಹಿಂದೆ 6 ಜನ ಇಂಡಿಯನ್ ಸ್ಟಾರ್ ಹೀರೋಗಳ ಜೊತೆ ಸಿನಿಮಾ ಮಾಡ್ತಿನಿ ಅಂತ ಹೇಳಿದ್ರು. ಆ ಕಂಟೆಂಟ್ ನ ಈ ಹಾಡಿನಲ್ಲಿ ಬಳಸಿಕೊಳ್ಳಲಾಗಿದೆ. ರಿಸೆಂಟ್ ಡೇಸ್‌ನಲ್ಲಿ ಸಖತ್ ಟ್ರೇಂಡ್ ಆದ ಕರಿಮಣಿ ಮಾಲಿಕ ಮತ್ತು ಬೆಳ್ಳುಳ್ಳಿ ಕಬಾಬ್ ಜೊತೆಗೆ ಓನ್‌ಮೋರ್ ಓನ್‌ಮೋರ್ ಸೇರಿಸಿ ರಾಹುಲ್ಲ ಕೂಡ ನೆನಪು ಬರುವಂತೆ ಸಾಹಿತ್ಯ ಪೋಣಿಸಲಾಗಿದೆ. ಸದ್ಯಕ್ಕೆ ಲೋಕಸಭಾ ಎಲೆಕ್ಷನ್ ಬರ್ತಿದೆ. ಈ ಟೈಮ್‌ನಲ್ಲಿ ಕಳೆದ ಬಾರಿ ಮಂಡ್ಯದಲ್ಲಿ ರೌಂಡ್ ಹಾಕಿದ ಜೋಡೆತ್ತುಗಳನ್ನ ನೆನಪು ಮಾಡಿ ಕೊಟ್ಟಿದೆ ಯುಐ ಸಾಂಗ್. ಸುಮಕ್ಕನ ಗೆಲುವುಗೆ ಕಾರಣವಾದ ಈ ಜೋಡೆತ್ತುಗಳ ಜೋಡಿ ಬಗ್ಗೆ ಸಖತ್ ವಿಡಿಯೋಗಳು ವೈರಲ್ ಆಗಿತ್ತು. ಐದು ವರ್ಷದ ಹಿಂದಿನ ಕಂಟೆಂಟ್ ನ ಇಲ್ಲಿ ಕ್ಯಾರಿ ಮಾಡಲಾಗಿದೆ.
Advertisement
ನಮ್ಮ ಮನಸ್ಸು ಒಳ್ಳೆದು ಮಾಡಿದ್ರೆ ದೇವರು ಏನಂತಿರಾ ಅನ್ನೊ ಒಂದು ವಿಡಿಯೋ ರಾತ್ರೋ ರಾತ್ರಿ ಒಬ್ಬ ವ್ಯಕ್ತಿನ ಫೇಮಸ್ ಮಾಡಿ ಬಿಟ್ಟಿತ್ತು. ನಾ ಡ್ರೈವರಾ ನನ್ನ ಲವ್ವರ ಅನ್ನೊ ಹಾಡು ಕೂಡ ಸಿಕ್ಕಾಪಟ್ಟೆ ಲೈಕ್ಸ್ ಪಡೆದುಕೊಂಡಿತ್ತು ಇದರ ಜೊತೆಗೆ ಗ್ಯಾಪ್‌ನಲ್ಲಿ ದರ್ಶನ್ ಮತ್ತು ಉಮಾಪತಿ ಮಾತಿನ ಸಮರವನ್ನ ಸೇರಿಸಲಾಗಿದೆ. ಆದ್ರೆ ಯಾರ ಹೆಸರೂ ಬಳಸಿಲ್ಲ ಯಾರನ್ನೂ ನೋಯಿಸುವ ಕೆಲಸಕ್ಕೆ ಹೋಗಿಲ್ಲ ಅನ್ನೊದು ಪಕ್ಕಾ. ಇನ್ನು ಜಮೀರ್ ಅಹ್ಮದ್ ಅವರ ಒಂದು ಡೈಲಾಗ್ ಕೂಡ ಒಳ್ಳೆ ಕಿಕ್ ಕೊಡ್ತಿದೆ. ನಿಖಿಲ್ ಎಲ್ಲಿದ್ಯಪ್ಪ ಅನ್ನೊ ಒಂದು ಕಂಟೆಂಟ್ ಸಖತ್ ಟ್ರೋಲ್ ಆಗಿತ್ತು. ಮಂಡ್ಯ ಎಲೆಕ್ಷನ್ ಟೈಮ್‌ನಲ್ಲಿ ಈ ಸಾಲುಗಳು ಗಲ್ಲಿ ಗಲ್ಲಿಯಲ್ಲಿ ಕೇಳಿಸ್ತಿತ್ತು. ಇದನ್ನ ಬಿಡದೆ ಬಳಸಿಕೊಂದೆ ಯುಐ ಟೀಮ್. ನಾನು ನಂದಿನಿ ಪಿಜಿಯಲ್ಲಿ ಇರ್ತಿನಿ ಅನ್ನೋದನ್ನೂ ಬಿಟ್ಟಿಲ್ಲ ಉಪ್ಪಿಗಾರು.
ಮದಗಜ ಸಿನಿಮಾ ಟೈಮ್‌ನಲ್ಲಿ ನಿರ್ದೇಶಕ ಮಹೇಶ್ ಹೇಳಿದ ಒಂದು ಪದವನ್ನ ಜೋಡಿಸಿದ್ದಾರೆ. ಮದಗಜ ರಿಲೀಸ್ ಹೊತ್ತಿನಲ್ಲಿ ಬಹಳಷ್ಟು ಜನರ ಕಿವಿಗೆ ಈ ಪದ ತಟ್ಟಿತ್ತು. ಮಹೇಶ್ ಮಾತು ಹಲವರನ್ನ ನಗಿಸ್ತು, ಟ್ರೋಲಿಗರಿಗೆ ಆಹಾರವಾಗಿತ್ತು. ಡಾಲಿ ಧನಂಜಯ್ ಅವರ ಬಡವರ ಮಕ್ಕಳು ಬೆಳಿ ಬೇಕು ಅನ್ನೊದನ್ನ ಕೂಡ ಸೇರಿಸಿಕೊಂಡಿದ್ದಾರೆ. ಇದ್ರ ಜೊತೆಗೆ ಆರ್ ಚಂದ್ರು. ಸರ್ಕಾರದ ಪ್ರೀ ಯೋಜನೆಗಳನ್ನ ಕೂಡ ಬಿಡದಂತೆ ಗಂಟು ಹಾಕಿದ್ದಾರೆ.
ಟ್ರೋಲ್ ಮಾಡಿದವರು ಹಾಡು ನೋಡಿ ಕಂಗಾಲಾಗಿದ್ದಾರೆ. ಉಪ್ಪಿ ನಮ್ಮನ್ನ ಹೊಗಳಿದ್ದಾರಾ ಅಥವಾ ಚುಡಾಯಿಸ್ತಿದ್ದಾರಾ..? ಅನ್ನೊ ಕ್ಲಾರಿಟಿ ಇಲ್ಲದೆ ಖಾಲಿ ಗೋಡೆ ನೋಡಿಕೊಂಡು ಕೂತಿದ್ದಾರೆ. ನರೇಶ್ ಕುಮಾರ್ ಹೆಚ್‌ಎನ್ ಈ ಹಾಡಿಗೆ ಸಾಲುಗಳನ್ನ ಬರೆದಿದ್ದಾರೆ. ಉಪ್ಪಿ ನಿರ್ದೇಶದ ಸಿನಿಮಾ ಹಾಡು ಅನ್ನೊ ಕಾರಣಕ್ಕೆ ಸಖತ್ ಹೈಪ್ ಪಡೆದು ಕೊಳ್ತಿದೆ. ಹಾಡು ನೋಡಿ ವರ್ಷಗಳ ಹಿಂದೆ ಮಜಾ ಕೊಟ್ಟ ಟ್ರೋಲ್‌ಗಳನ್ನ ನೆನಪು ಮಾಡಿಕೊಂಡು ಮುಗುಳು ನಗೆ ಕೊಡ್ತಿದ್ದಾರೆ ಜನ. ಉಪೇಂದ್ರ ಮಾತ್ರ ನನಗೆನೂ ಗೊತ್ತಿಲ್ಲ ಅಂತ ಸ್ಮೈಲ್ ಕೊಡ್ತಿದ್ದಾರೆ.