ದೊಡ್ಮನೆಯಲ್ಲಿ (Bigg Boss Kannada 11) ಪ್ರೇಮ ಪಕ್ಷಿಗಳಾಗಿದ್ದ ತ್ರಿವಿಕ್ರಮ್ ಮತ್ತು ಭವ್ಯಾ ನಡುವೆ ಬಿರುಕಾಗಿದೆ. ಇದೀಗ ಭವ್ಯಾ (Bhavya Gowda) ವಿರುದ್ಧ ತ್ರಿವಿಕ್ರಮ್ ತಿರುಗಿ ಬಿದ್ದಿದ್ದಾರೆ. ನಿನ್ನ ಬಂಡವಾಳ ಬಯಲಾಯ್ತು ಪುಂಗಬೇಡ ಅಂತ ಭವ್ಯಾ ವಿರುದ್ಧ ತ್ರಿವಿಕ್ರಮ್ (Trivikram) ಗುಡುಗಿದ್ದಾರೆ. ಇದನ್ನೂ ಓದಿ:ಶ್ರೇಯಸ್ ಜೊತೆ ದಿಲ್ ದಾರ್ ಅಖಾಡಕ್ಕಿಳಿದ ಕೀರ್ತಿ ಕೃಷ್ಣ!
Advertisement
ದೊಡ್ಮನೆ ಆಟಕ್ಕೆ ಬ್ರೇಕ್ ಬೀಳಲು ಇನ್ನೇನು ಕೆಲವೇ ದಿನಗಳು ಬಾಕಿಯಿದೆ. ಸ್ಪರ್ಧಿಗಳು ತಮ್ಮನ್ನು ತಾವು ಕಾಪಾಡಿಕೊಳ್ಳಲು ಬಿಗ್ ಬಾಸ್‌ನಲ್ಲಿ ಇನ್ನೊಬ್ಬರ ಮೇಲೆ ದೂರಬೇಕಾದ ಅನಿವಾರ್ಯತೆ ಎದುರಾಗಿದೆ. ಇಷ್ಟು ದಿನ ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದ ತ್ರಿವಿಕ್ರಮ್ ಹಾಗೂ ಭವ್ಯಾ ನಡುವೆ ಬಿರುಕು ಮೂಡಿದೆ. ಯಾರು ಯಾರನ್ನ ಹಿಂದಿಕ್ಕಿ ಮುಂದೆ ಹೋಗಲು ಪ್ರಯತ್ನ ಮಾಡುತ್ತಿದ್ದಾರೆ ಎಂಬುದರ ಕುರಿತು ಇಬ್ಬರ ನಡುವೆ ಬಿರುಸಿನ ಚರ್ಚೆ ನಡೆದಿದೆ.
Advertisement
Advertisement
105 ದಿನಗಳಿಂದ ಇರದಿದ್ದ ಬಾಂಡಿಂಗ್ ಈಗ ಇನ್ನೊಬ್ಬರ ಜೊತೆ ಸೇರಿಕೊಂಡು ಆಚೆ ಇಡುತ್ತಿದ್ದೀಯ. ತುಂಬಾ ಬಂಡವಾಳಗಳು ಗೊತ್ತಾದಾಗ ಯಾರು ಏನು ಮಾಡೋಕೆ ಆಗಲ್ಲ ಎಂದು ತ್ರಿವಿಕ್ರಮ್ ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಭವ್ಯಾ ನೀನು ಏನೇನೋ ತಲೆಗೆ ಹಾಕ್ಕೊಂಡು ಮಾತನಾಡಬೇಡ. ನೀವೇ ಹಾಳಾಗುತ್ತಿದ್ದೀರಾ ಅಷ್ಟೇ ಎಂದು ಭವ್ಯಾ ಉತ್ತರಿಸಿದ್ದಾರೆ. ಈ ವೇಳೆ ತ್ರಿವಿಕ್ರಮ್, ನೀನೇನು ನನಗೆ ಹೇಳುವುದು. ಇಷ್ಟೆಲ್ಲಾ ಪುಂಗೋ ಅವಶ್ಯಕತೆ ಇಲ್ಲ ಎಂದ ತ್ರಿವಿಕ್ರಮ್‌ಗೆ ನಿನ್ನ ಫ್ರೆಂಡ್‌ಶಿಪ್ ಅನ್ನು ಎಲ್ಲೂ ನಾನು ಬಳಸಿಕೊಂಡಿಲ್ಲ ಎಂದಿದ್ದಾರೆ. ಮೊದಲ ದಿನ ಇದ್ದ ಹಾಗೇ ಈಗ ನೀನಿಲ್ಲ ಎಂದು ಭವ್ಯಾಗೆ ನೇರವಾಗಿಯೇ ಹೇಳಿದ್ದಾರೆ.
Advertisement
View this post on Instagram
ತ್ರಿವಿಕ್ರಮ್ ಹಾಗೂ ಭವ್ಯಾ ಇಬ್ಬರು ಸೋಫಾ ಮೇಲೆ ಕುಳಿತು ಈ ರೀತಿಯಾಗಿ ಮಾತನಾಡಿದ್ದಾರೆ. ಇದರಿಂದ ಬೇಸರ ಮಾಡಿಕೊಂಡ ಭವ್ಯಾ ಎದ್ದು ಹೋಗಿದ್ದಾರೆ. ಸದ್ಯ ನೋಡುಗರಿಗೆ ಇಬ್ಬರ ನಡುವಿನ ಸ್ನೇಹ, ಪ್ರೀತಿ ಈಗ ಇಲ್ಲ ಎಂದು ಅನಿಸುತ್ತಿದೆ. ಟ್ರೋಫಿ ಗೆಲ್ಲುವ ಉದ್ದೇಶದಿಂದ ಹೀಗೆ ಒಬ್ಬರನೊಬ್ಬರು ದೂರ ಮಾಡಿಕೊಳ್ಳುತ್ತಿದ್ದಾರಾ? ಎನ್ನುವ ಪ್ರಶ್ನೆ ಮೂಡಿದೆ. ಇಬ್ಬರೂ ದೂರವಾಗೋ ಸೂಚನೆ ಸಿಕ್ಕಿದೆ.