‘ಬಿಗ್ ಬಾಸ್ ಕನ್ನಡ 11’ರ (Bigg Boss Kannada 11) ಆಟಕ್ಕೆ ಕೊನೆಗೂ ತೆರೆಬಿದ್ದಿದೆ. ಹನುಮಂತ ವಿನ್ನರ್ ಆಗಿ ಹೊರಹೊಮ್ಮಿದ್ರೆ, ತ್ರಿವಿಕ್ರಮ್ (Trivikram) ರನ್ನರ್ ಅಪ್ (Runner Up) ಆಗಿದ್ದಾರೆ. ಇದನ್ನೂ ಓದಿ:ದಾನ-ಧರ್ಮ ಬೇಕು.. ದಡ್ಡತನ ಬೇಡ: ಲಕ್ಷ ಲಕ್ಷ ಹಣವನ್ನ ದಾನ ಮಾಡ್ತೀನಿ ಎಂದ ಮಂಜು ಕಿವಿ ಹಿಂಡಿದ ಸುದೀಪ್
ಬಿಗ್ ಬಾಸ್ ಮನೆಯಲ್ಲಿ ಸ್ಟ್ರಾಂಗ್ ಸ್ಪರ್ಧಿಯಾಗಿ ಗುರುತಿಸಿಕೊಳ್ಳುತ್ತಿದ್ದರು. ಆದರೆ ಫಿನಾಲೆಯಲ್ಲಿ ತ್ರಿವಿಕ್ರಮ್ ಮುಗ್ಗರಿಸಿರೋದು ಫ್ಯಾನ್ಸ್‌ಗೆ ನಿರಾಸೆಯುಂಟು ಮಾಡಿದೆ.
ಇನ್ನೂ ಭವ್ಯಾ ಜೊತೆಗಿನ ಲವ್ವಿ ಡವ್ವಿ ವಿಚಾರವಾಗಿ ಅವರು ಹೈಲೆಟ್ ಆಗಿದ್ದರು. ಅದಷ್ಟೇ ಅಲ್ಲ, ನಮ್ಮೀಬ್ಬರ ನಡುವೆ ಸ್ನೇಹ ಮಾತ್ರ ಎಂದಿದ್ದ ತ್ರಿವಿಕ್ರಮ್ ಇತ್ತೀಚೆಗೆ ಭವ್ಯಾಗೆ ಪ್ರಪೋಸ್ ಕೂಡ ಮಾಡಿದ್ದರು. ಇದು ಅವರ ಆಟಕ್ಕೆ ಅಡ್ಡಿ ಆಯ್ತು ಎಂಬುದು ಅಭಿಮಾನಿಗಳ ಅನಿಸಿಕೆ.
‘ಬಿಗ್ ಬಾಸ್’ ಆಟ ಮುಗಿದಿದೆ. ಜೋಡಿ ಹಕ್ಕಿಗಳಾಗಿದ್ದ ಭವ್ಯಾ ಮತ್ತು ತ್ರಿವಿಕ್ರಮ್ ಮುಂದಿನ ದಿನಗಳಲ್ಲಿ ಗುಡ್ ನ್ಯೂಸ್ ಕೊಡುತ್ತಾರಾ? ಏನಾಗಲಿದೆ ಎಂಬುದನ್ನು ಕಾದುನೋಡಬೇಕಿದೆ.