ಬಿಗ್ ಬಾಸ್ ಮನೆಯಲ್ಲಿ (BBK 11) ಪ್ರೇಮ ಪಕ್ಷಿಗಳಾಗಿದ್ದ ಭವ್ಯಾ (Bhavya Gowda) ಮತ್ತು ತ್ರಿವಿಕ್ರಮ್ (Trivikram) ದೂರ ದೂರ ಆಗಿದ್ದಾರೆ. ಇದಕ್ಕೆಲ್ಲ ಕಾರಣ ಆಗಿದ್ದು ಸ್ಪರ್ಧಿಗಳ ಫ್ಯಾಮಿಲಿ ಎಂಟ್ರಿ. ತ್ರಿವಿಕ್ರಮ್ ತಾಯಿ ಆಗಮಿಸಿ ಭವ್ಯಾನಿಂದ ದೂರ ಇರುವಂತೆ ಎಚ್ಚರಿಕೆ ನೀಡಿದ್ದಾರೆ. ಇದರಿಂದ ಎಚ್ಚೆತ್ತುಕೊಂಡಿರುವ ತ್ರಿವಿಕ್ರಮ್ ಅವರು ಭವ್ಯಾರಿಂದ ದೂರ ಆಗುವ ಪ್ರಯತ್ನದಲ್ಲಿದ್ದಾರೆ. ಈ ಮಧ್ಯೆ ಅವರು ಆಡಿದ ಮಾತೊಂದು ಸಾಕಷ್ಟು ಚರ್ಚೆಗಳನ್ನು ಹುಟ್ಟುಹಾಕಿದೆ. ಇದನ್ನೂ ಓದಿ:ಮದುವೆ ಯಾವಾಗ? ಎಂದಿದ್ದಕ್ಕೆ ನಾಚಿ ನೀರಾದ ರಮ್ಯಾ
ಭವ್ಯಾ ಹಾಗೂ ತ್ರಿವಿಕ್ರಮ್ ಮಧ್ಯೆ ಉತ್ತಮ ಒಡನಾಟ ಇತ್ತು. ಇಬ್ಬರೂ ಒಟ್ಟಾಗಿ ಸಮಯ ಕಳೆಯುತ್ತಿದ್ದರು. ಒಬ್ಬರ ನೆರಳು ಒಬ್ಬರ ಮೇಲೆ ಇತ್ತು. ಇತ್ತೀಚೆಗೆ ಕುಟುಂಬದವರು ಬಂದಾಗ ತ್ರಿವಿಕ್ರಮ್‌ಗೆ ಅವರ ತಾಯಿ ಬುದ್ಧಿ ಮಾತು ಹೇಳಿ ಹೋಗಿದ್ದರು. ಅಲ್ಲದೆ, ಸುದೀಪ್ ಕಡೆಯಿಂದಲೂ ಈ ವಿಚಾರವಾಗಿ ಸಾಕಷ್ಟು ಸಲಹೆ ನೀಡಿದ್ದರು. ಈಗ ತ್ರಿವಿಕ್ರಮ್ ಅವರು ಅದನ್ನು ಗಂಭೀರವಾಗಿ ಪರಿಗಣಿಸಿದ್ದಾರೆ.
ಭವ್ಯಾಗೆ ಏನೇ ವಿಚಾರ ಇದ್ದರೂ ನೇರವಾಗಿ ಹೇಳುವ ಕೆಲಸವನ್ನೂ ಮಾಡಿದ್ದಾರೆ. ಇದು ಭವ್ಯಾಗೆ ಬೇಸರ ಮೂಡಿಸಿದೆ. ಹಾಗಾದರೆ ಭವ್ಯಾ ಇಲ್ಲಿಯವರೆಗೆ ಬರೋಕೆ ತ್ರಿವಿಕ್ರಮ್ ಅವರು ಕಾರಣವಾ? ಹೀಗೊಂದು ಪ್ರಶ್ನೆ ಹುಟ್ಟುಹಾಕುವಂಥ ಮಾತು ಅವರ ಕಡೆಯಿಂದ ಬಂದಿದೆ. ನಿನ್ನೆಯ (ಜ.6) ಸಂಚಿಕೆಯಲ್ಲಿ ತ್ರಿವಿಕ್ರಮ್ ಹಾಗೂ ರಜತ್ ಅವರು ಕುಳಿತು ಮಾತನಾಡುತ್ತಿದ್ದರು. ಮನೆಗೆ ಬಂದು ಕಾಂಪಿಟೇಟರ್‌ನ ರೆಡಿ ಮಾಡಿ ನನಗೆ ಎದುರಾಳಿಯಾಗಿ ಬಿಟ್ಟುಕೊಂಡಂತೆ ಆಯಿತು ಎಂದರು ತ್ರಿವಿಕ್ರಮ್. ಅಂದರೆ, ಭವ್ಯಾನ ಒಳ್ಳೆಯ ಎದುರಾಳಿಯನ್ನಾಗಿ ಮಾಡಿ ಈಗ ಅವರ ಎದುರೇ ನಿಲ್ಲುವಂತೆ ಮಾಡಿಕೊಂಡಿದ್ದಾರೆ ಎಂಬರ್ಥದಲ್ಲಿ ತ್ರಿವಿಕ್ರಮ್ ಮಾತನಾಡಿದ್ದಾರೆ ಎಂದು ಫ್ಯಾನ್ಸ್ ಊಹಿಸಿದ್ದಾರೆ. ಒಟ್ನಲ್ಲಿ ಚೆನ್ನಾಗಿದ್ದ ಜೋಡಿಗಳ ನಡುವೆ ಬಿರುಕು ಮೂಡಿದೆ.