ರಶ್ಮಿಕಾ ಮಂದಣ್ಣ ಬಳಿಕ ‘ಸಿಖಂದರ್’ ಚಿತ್ರತಂಡ ಸೇರಿಕೊಂಡ ತ್ರಿಷಾ

Public TV
1 Min Read
TRISHA

ಸೌತ್ ಬೆಡಗಿ ತ್ರಿಷಾ ಕೃಷ್ಣನ್ (Trisha Krishnan) ಇದೀಗ 14 ವರ್ಷಗಳ ನಂತರ ಬಾಲಿವುಡ್‌ನತ್ತ ಮುಖ ಮಾಡಿದ್ದಾರೆ. ತ್ರಿಷಾ ಕೂಡ ಮತ್ತೊಮ್ಮೆ ಬಿಟೌನ್ ಅಡ್ಡಾಗೆ ಎಂಟ್ರಿ ಕೊಟ್ಟಿದ್ದಾರೆ. ಬ್ಯಾಡ್ ಬಾಯ್ ಸಲ್ಮಾನ್ ಖಾನ್‌ಗೆ ತ್ರಿಷಾ ನಾಯಕಿಯಾಗ್ತಿದ್ದಾರೆ ಎಂಬ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

trisha actress 1

2010ರಲ್ಲಿ ತೆರೆಕಂಡ ‘ಕಟ್ಟಾ ಮೀಟಾ’ ಚಿತ್ರದಲ್ಲಿ ಜಿಲ್ಲಾಧಿಕಾರಿಯ ಪಾತ್ರದಲ್ಲಿ ನಟಿಸಿದ್ದರು. ಅಕ್ಷಯ್ ಕುಮಾರ್‌ಗೆ (Akshay Kumar) ನಾಯಕಿ ತ್ರಿಷಾ ಕಾಣಿಸಿಕೊಂಡಿದ್ದರು. ಅದಾದ ನಂತರ ಬಾಲಿವುಡ್‌ಗೆ ಗುಡ್ ಬೈ ಹೇಳಿದ್ದರು. ಈಗ ಹಲವು ವರ್ಷಗಳ ನಂತರ ಸ್ಟಾರ್ ನಟನಿಗೆ ಜೋಡಿಯಾಗುವ ಮೂಲಕ ಸದ್ದು ಮಾಡುತ್ತಿದ್ದಾರೆ.

rashmika mandanna

ಸಲ್ಮಾನ್ ಖಾನ್ (Salman Khan) ನಟನೆಯ ‘ಸಿಖಂದರ್’ (Sikandar Film) ಚಿತ್ರದಲ್ಲಿ ರಶ್ಮಿಕಾ ಮಂದಣ್ಣ (Rashmika Mandanna) ನಾಯಕಿ ಎಂದು ಅಧಿಕೃತ ಘೋಷಣೆ ಮಾಡಿತ್ತು ಚಿತ್ರತಂಡ. ಈ ಬೆನ್ನಲ್ಲೇ ಸಿಖಂದರ್‌ ಸಲ್ಮಾನ್‌ಗೆ ಮತ್ತೋರ್ವ ನಾಯಕಿಯಾಗಿ ತ್ರಿಷಾ ಕೂಡ ಎಂಟ್ರಿ ಕೊಡ್ತಿದ್ದಾರೆ ಎನ್ನಲಾಗಿದೆ. ಸೆಕೆಂಡ್ ಲೀಡ್ ನಾಯಕಿಯಾಗಿ ನಟಿಸುತ್ತಾರೆ ಎಂಬ ಸುದ್ದಿ ಚರ್ಚೆಗೆ ಗ್ರಾಸವಾಗಿದೆ. ಅಧಿಕೃತ ಘೋಷಣೆ ಆಗುವವರೆಗೂ ಕಾದುನೋಡಬೇಕಿದೆ.


ತ್ರಿಷಾಗೆ 41 ವರ್ಷ ವಯಸ್ಸಾಗಿದ್ರೂ ಅವರಿಗೆ ಡಿಮ್ಯಾಂಡ್ ಕಮ್ಮಿಯಾಗಿಲ್ಲ. ಅವರ ಕೈಯಲ್ಲಿ ಸದ್ಯ 5 ಚಿತ್ರಗಳಿವೆ. ತಮಿಳಿನ ವಿಧ ಮುಯರ್ಚಿ, ಮಲಯಾಳಂನ ‘ರಾಮ್’ ಮತ್ತು ‘ಐಡೆಂಟಿಟಿ’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಕಮಲ್ ಹಾಸನ್ ನಟನೆಯ ಥಗ್ ಲೈಫ್, ಮೆಗಾಸ್ಟಾರ್ ಚಿರಂಜೀವಿ ನಟನೆಯ ‘ವಿಶ್ವಾಂಭರ’ ಸಿನಿಮಾದಲ್ಲಿ ತ್ರಿಷಾ ನಾಯಕಿಯಾಗಿದ್ದಾರೆ.

Share This Article