ಮಾಜಿ ಸಿಎಂ ಬಿಪ್ಲಬ್ ದೇಬ್‌ರನ್ನು ಸ್ವಾಮಿ ವಿವೇಕಾನಂದ, ಗಾಂಧೀಜಿಗೆ ಹೋಲಿಸಿದ ಸಚಿವ ರತನ್ ಲಾಲ್ ನಾಥ್

Advertisements

ಅಗರ್ತಲಾ: ತ್ರಿಪುರಾದ ಮಾಜಿ ಮುಖ್ಯಮಂತ್ರಿ ಬಿಪ್ಲಬ್ ಕುಮಾರ್ ದೇವ್, ಸ್ವಾಮಿ ವಿವೇಕಾನಂದ, ಮಹಾತ್ಮ ಗಾಂಧಿ, ರವೀಂದ್ರನಾಥ ಠಾಗೋರ್‌ರಂತಹ ಮಹನ್ ನಾಯಕ ಎಂದು ತ್ರಿಪುರಾದ ಶಿಕ್ಷಣ ಸಚಿವ ರತನ್ ಲಾಲ್ ನಾಥ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

Advertisements

ತ್ರಿಪುರಾದ ಧೈಲೆ ಜಿಲ್ಲೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಬಿಪ್ಲಬ್ ಕುಮಾರ್ ದೇವ್ ತ್ರಿಪುರಾದ ಮಹನ್ ನಾಯಕರಾಗಿದ್ದರು. ಇಲ್ಲಿನ ಪ್ರಜೆಗಳು ಇಂತಹ ನಾಯಕರನ್ನು ಪಡೆಯಲು ತುಂಬಾ ಅದೃಷ್ಟ ಮಾಡಿದ್ದರು ಎಂದು ಹಾಡಿ ಹೊಗಳಿದ್ದಾರೆ. ಇದನ್ನೂ ಓದಿ: ತ್ರಿಪುರಾ ಮುಖ್ಯಮಂತ್ರಿ ಬಿಪ್ಲಬ್ ಕುಮಾರ್ ದೇವ್ ರಾಜೀನಾಮೆ

Advertisements

ತ್ರಿಪುರಾದ ಜನ ಸರ್ಕಾರದ ಮೇಲೆ ಇಟ್ಟಿದ್ದಂತ ನಿರೀಕ್ಷೆಗಳಲ್ಲಿ ಕೆಲವನ್ನು ಬಿಪ್ಲಬ್ ದೇವ್ ಈಡೇರಿಸಿದ್ದಾರೆ. ಇಂತಹ ಮಹನ್ ನಾಯಕ ನಮ್ಮ ರಾಜ್ಯದಲ್ಲಿ ಹುಟ್ಟಿರುವುದು ನಮ್ಮ ಪುಣ್ಯ. ಸುಭಾಶ್ ಚಂದ್ರ ಬೋಸ್, ರವೀಂದ್ರನಾಥ್ ಠಾಕೂರ್, ಮಹಾತ್ಮ ಗಾಂಧಿ, ವಿವೇಕಾನಂದರಂತೆ ಬಿಪ್ಲಬ್ ದೇವ್ ನಮ್ಮ ರಾಜ್ಯದ ಮಹನ್ ನಾಯಕ ಎಂದು ನುಡಿದಿದ್ದಾರೆ. ಇದನ್ನೂ ಓದಿ: ಕಪಾಳಕ್ಕೆ ಹೊಡೆದು ಮಾನಸಿಕ ಅಸ್ವಸ್ಥ ವೃದ್ಧನ ಹತ್ಯೆ – ಬಿಜೆಪಿ ಮುಖಂಡನಿಂದ ಕೃತ್ಯ

Advertisements

ಬಿಪ್ಲಬ್ ಕುಮಾರ್ ದೇವ್ ಕೆಲದಿನಗಳ ಹಿಂದೆ ತ್ರಿಪುರಾ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಆ ಬಳಿಕ ಇದೀಗ ಸಿಎಂ ಆಗಿ ಡಾ. ಮಾಣಿಕ್ ಸಹಾ ಅಧಿಕಾರ ವಹಿಸಿಕೊಂಡಿದ್ದಾರೆ.

Advertisements
Exit mobile version