ಅಗರ್ತಲಾ: ಕಳೆದ ವರ್ಷ ನಾಲ್ಕೂವರೆ ವರ್ಷದ ಮಗುವಿನ ಮೇಲೆ ಅತ್ಯಾಚಾರ ಎಸಗಿ ಹತ್ಯೆಗೈದ ಪ್ರಕರಣದಲ್ಲಿ ತಪ್ಪಿತಸ್ಥನೆಂದು ಸಾಬೀತಾದ ಆರೋಪಿಗೆ ತ್ರಿಪುರಾದ ಖೋವೈ ಜಿಲ್ಲಾ ನ್ಯಾಯಾಲಯವು ಗಲ್ಲುಶಿಕ್ಷೆ ವಿಧಿಸಿದೆ.
ಖೋವೈ ಜಿಲ್ಲೆಯಲ್ಲಿ ಅತ್ಯಾಚಾರ ಪ್ರಕರಣದಲ್ಲಿ ಮರಣದಂಡನೆ ವಿಧಿಸಿದ ಮೊದಲ ನಿದರ್ಶನ ಇದಾಗಿದ್ದು, ಅಪರಾಧಿ ಕಾಳಿಚರಣ್‌ಗೆ ಮರಣದಂಡನೆ ವಿಧಿಸಲಾಗಿದೆ. ಈ ಹಿಂದೆ ಆರೋಪಿ ಸಾಕ್ಷ್ಯಾಧಾರಗಳಿಂದ ತಪ್ಪಿಸಿಕೊಂಡಿದ್ದನು. ಸತತ ವಿಚಾರಣೆಯ ಬಳಿಕ ಸುಳ್ಳು ಮಾಹಿತಿ ಹಂಚಿಕೊಂಡಿರುವುದು ಸಾಬೀತಾಗಿದ್ದು ಅಪರಾಧಿಗೆ ಗಲ್ಲು ಶಿಕ್ಷೆಗೆ ಗುರಿಪಡಿಸಲಾಗಿದೆ. ಇದನ್ನೂ ಓದಿ: ಟೈಲರ್ ಹತ್ಯೆಗೆ ಮುಸ್ಲಿಂ ಯುವಕರು ಬಳಸಿದ ಆಯುಧ ತಯಾರಾಗಿದ್ದೆಲ್ಲಿ? – ರಿಹರ್ಸಲ್ ಹೇಗಿತ್ತು ಗೊತ್ತಾ?
Advertisement
Advertisement
ತ್ರಿಪುರಾದ ಖೋವೈ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶ ಶಕರಿ ದಾಸ್ ಅವರು ತನಿಖಾಧಿಕಾರಿ ಬಿದೀಶ್ವರ್ ಸಿನ್ಹಾರ ವರದಿಯನ್ನು ಪರಿಶೀಲನೆ ನಡೆಸಿದ ಬಳಿಕ ಮರಣದಂಡನೆಗೆ ಆದೇಶಿಸಿದ್ದಾರೆ. ಪ್ರಕರಣದಲ್ಲಿ ಒಟ್ಟು 35 ಸಾಕ್ಷಿಗಳನ್ನು ದಾಖಲಿಸಲಾಗಿದೆ.
Advertisement
Advertisement
ಏನಿದು ಘಟನೆ?: 2021ರ ಫೆಬ್ರವರಿ 22ರಂದು ಖೋವೈ ಜಿಲ್ಲೆಯ ಟೆಲಿಯಮುರಾದ ಡಸ್ಕಿ ಪ್ರದೇಶದಿಂದ 4 ವರ್ಷದ ಬಾಲಕಿ ನಾಪತ್ತೆಯಾಗಿದ್ದಳು. ಅದಾದ 6 ದಿನಗಳ ಬಳಿಕ ಗಾಯಗೊಂಡ ಸ್ಥಿತಿಯಲ್ಲಿ ಕಾಡಿನಲ್ಲಿ ಬಿದ್ದಿದ್ದ ಆಕೆಯ ಮೃತದೇಹವನ್ನು ಹೊರತೆಗೆಯಲಾಗಿತ್ತು.