ನವದೆಹಲಿ: ಕಳೆದ 6 ದಿನಗಳಿಂದ ತ್ರಿಪುರದ (Tripura) 19 ವರ್ಷದ ಯುವತಿಯೊಬ್ಬಳು ದೆಹಲಿಯಲ್ಲಿ ನಾಪತ್ತೆಯಾಗಿದ್ದಾಳೆ. ಈ ಪ್ರಕರಣ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ದೆಹಲಿಯ (Delhi) ಆತ್ಮ ರಾಮ ಸನಾತನ ಧರ್ಮ ಕಾಲೇಜಿನ ವಿದ್ಯಾರ್ಥಿನಿ ಸ್ನೇಹಾ ದೇಬ್ನಾಥ್ (19) ಕಳೆದ 6 ದಿನಗಳಿಂದ ನಿಗೂಢವಾಗಿ ನಾಪತ್ತೆಯಾಗಿದ್ದಾಳೆ. ಜು.7ರಂದು ಕೊನೆಯ ಬಾರಿ ಪೋಷಕರಿಗೆ ಕರೆ ಮಾಡಿ ಮಾತನಾಡಿದ್ದಳು. ಬೆಳಗ್ಗೆ 5:56ಕ್ಕೆ ತನ್ನ ಸ್ನೇಹಿತೆ ಪಿಟುನಿಯಾ ಜೊತೆ ಸರೈ ರೋಹಿಲ್ಲಾ ನಿಲ್ದಾಣಕ್ಕೆ ಹೋಗುವುದಾಗಿ ತಿಳಿಸಿದ್ದಳು. ಇದನ್ನೂ ಓದಿ: ಪತ್ನಿಯಿಂದ ವಿಚ್ಛೇದನ – 40 ಲೀಟರ್ ಹಾಲಲ್ಲಿ ಸ್ನಾನ ಮಾಡಿ ಸಂಭ್ರಮಿಸಿದ ಪತಿ!
ಇದಾದ ನಂತರ ಪೋಷಕರು 8 ಗಂಟೆಗೆ ಕರೆ ಮಾಡಿದಾಗ ಸ್ನೇಹಾ ಫೋನ್ ಸ್ವಿಚ್ ಆಫ್ ಆಗಿತ್ತು. ಗಾಬರಿಗೊಂಡಿದ್ದ ಪೋಷಕರು ಆಕೆಯ ಸ್ನೇಹಿತೆ ಪಿಟುನಿಯಾಳನ್ನು ಸಂಪರ್ಕಿಸಿದ್ದರು. ಸ್ನೇಹಾಳನ್ನು ಭೇಟಿಯಾಗಲು ಸಾಧ್ಯವಾಗಲಿಲ್ಲ ಎಂದು ತಿಳಿಸಿದ್ದಳು ಎನ್ನಲಾಗಿದೆ. ಇದನ್ನೂ ಓದಿ: ಮಕ್ಕಳ ಆರೋಗ್ಯ ರಕ್ಷಣೆಯಲ್ಲಿ ವಿಶ್ವಕ್ಕೇ ಮಾದರಿಯಾದ ಭಾರತ – ಮಿಷನ್ ಇಂದ್ರಧನುಷ್ ಯಶಸ್ಸಿಗೆ ವಿಶ್ವಸಂಸ್ಥೆ ಶ್ಲಾಘನೆ
ಬಳಿಕ ಸ್ನೇಹಾ ಪೋಷಕರು, ಕ್ಯಾಬ್ ಚಾಲಕನನ್ನು ಪತ್ತೆಹಚ್ಚಿ, ಮಗಳ ಚಲನವಲನದ ಮಾಹಿತಿ ಪಡೆದಿದ್ದರು. ಈ ವೇಳೆ ಸ್ನೇಹಾಳನ್ನು ದೆಹಲಿಯ ಸಿಗ್ನೇಚರ್ ಸೇತುವೆಯ ಬಳಿ ಬಿಟ್ಟಿರುವುದಾಗಿ ಮಾಹಿತಿ ನೀಡಿದ್ದ. ಬಳಿಕ ದೆಹಲಿ ಪೊಲೀಸರು ಪಕ್ಕದಲ್ಲೇ ಇದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಪರಿಶೀಲಿಸಿದಾಗ ಆಕೆಯ ದೃಶ್ಯ ಸರಿಯಾಗಿ ಗೋಚರವಾಗಿಲ್ಲ. ಇದನ್ನೂ ಓದಿ: J&K | ಮೂರು ಬಸ್‌ಗಳ ನಡುವೆ ಅಪಘಾತ – 10ಕ್ಕೂ ಹೆಚ್ಚು ಅಮರನಾಥ ಯಾತ್ರಿಕರಿಗೆ ಗಾಯ
The report of Miss Sneha Debnath, a resident of Sabroom, who has reportedly gone missing in New Delhi, has come to the notice of the Chief Minister’s Office.
Following this, necessary instructions have been promptly issued to the police to take immediate and appropriate action.
— CMO Tripura (@tripura_cmo) July 12, 2025
ಇದರಿಂದ ಸಂಶಯಗೊಂಡ ಪೊಲೀಸರು ಸೇತುವೆಯ ಬಳಿ ಶೋಧ ಕಾರ್ಯ ನಡೆಸಿದ್ದರು. ಸತತ ಒಂದು ವಾರಗಳ ಕಾಲ ಹುಡುಕಾಡಿದರೂ ಸ್ನೇಹಾ ಪತ್ತೆಯಾಗಿಲಿಲ್ಲ.
ಘಟನೆ ಕುರಿತು ಯುವತಿ ಪೋಷಕರು ತ್ರಿಪುರ ಸಿಎಂ ಮಾಣಿಕ್ ಸಹಾ (Manik Saha) ಅವರಿಗೆ ಮಾಹಿತಿ ನೀಡಿದ್ದಾರೆ. ಮಾಣಿಕ್ ಸಹಾ ಅವರು ಸ್ನೇಹಾ ಪತ್ತೆಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ದೆಹಲಿ ಪೊಲೀಸರಿಗೆ ನಿರ್ದೇಶನ ನೀಡಿದ್ದಾರೆ.