ಅಗರ್ತಲಾ: ತ್ರಿಪುರಾ ರಾಜ್ಯದಲ್ಲಿ ವಿಧಾನಸಭೆ ಚುನಾವಣೆ (Tripura Assembly Elections) ಆರಂಭವಾಗಿದ್ದು, ರಾಜ್ಯದ ಎಲ್ಲ ಕಡೆ ಬಿಗಿ ಭದ್ರತೆ ನಿಯೋಜನೆ ಮಾಡಲಾಗಿದೆ ಎಂದು ಮುಖ್ಯ ಚುನಾವಣಾ ಅಧಿಕಾರಿ ಗಿಟ್ಟೆ ಕಿರಣ್ ಕುಮಾರ್ ದಿನಕರ್ರೋ ತಿಳಿಸಿದ್ದಾರೆ.
ಗುರುವಾರ (ಫೆ.16) ಬೆಳಗ್ಗೆ 7 ಗಂಟೆಯಿಂದ ಮತದಾನ ಆರಂಭವಾಗಿದೆ. ಸಂಜೆ 4 ಗಂಟೆವರೆಗೆ ಮತದಾನ ನಡೆಯಲಿದೆ. ಬೆಳಗ್ಗೆ 9 ಗಂಟೆ ವೇಳೆಗೆಲ್ಲಾ ಶೇ. 13.92 ಮತದಾನ ನಡೆದಿದೆ. ತೃತೀಯ ಲಿಂಗಿಗಳೂ ಇದರಲ್ಲಿ ಮತದಾನ ಮಾಡಿರುವುದು ವಿಶೇಷ. ಚುನಾವಣಾ ಭದ್ರತೆಗಾಗಿ 11 ಸಾವಿರ ಪೊಲೀಸ್ ಸಿಬ್ಬಂದಿ ಹಾಗೂ 400 ಸಿಆರ್ಪಿಎಫ್ (CRPF) ಸಿಬ್ಬಂದಿಯನ್ನ ನಿಯೋಜನೆ ಮಾಡಲಾಗಿದೆ.
Advertisement
Transgender voters casted their vote in 13-Pratapgarh AC, Aralia, West #Tripura District in Tripura Assembly Election -2023.
No voter to be left behind.@ECISVEEP @SpokespersonECI #TripuraElections2023 #TripuraAssemblyElections2023 pic.twitter.com/hFjJqPj91D
— CEO, Tripura (@ceotripura) February 16, 2023
Advertisement
ಚುನಾವಣೆಯಲ್ಲಿ ಸ್ಥಳೀಯ ಪಕ್ಷಗಳು ಸೇರಿದಂತೆ ಬಿಜೆಪಿ (BJP), ಕಾಂಗ್ರೆಸ್ (Congress, ಕಮ್ಯುನಿಸ್ಟ್ ಪಕ್ಷಗಳು ಸ್ಪರ್ಧೆ ಮಾಡಿವೆ. ಬಿಜೆಪಿ 55 ಸ್ಥಾನಗಳಲ್ಲಿ ಸ್ಪರ್ಧೆ ಮಾಡುತ್ತಿದ್ದು 6 ಸ್ಥಾನಗಳನ್ನು ಮಿತ್ರ ಪಕ್ಷಗಳಿಗೆ ಬಿಟ್ಟುಕೊಟ್ಟಿದೆ. ಇದನ್ನೂ ಓದಿ: ಬೊಮ್ಮಾಯಿ ಬಜೆಟ್ – ಯುಪಿ ಮಾದರಿಯಲ್ಲಿ ಮಹಿಳೆಯರ ಮನ ಗೆಲ್ಲೋಕೆ ಪ್ಲಾನ್?
Advertisement
ಕಾಂಗ್ರೆಸ್ ಪಕ್ಷ, ಕಮ್ಯುನಿಸ್ಟ್ ಪಕ್ಷಗಳ ಜೊತೆ ಮೈತ್ರಿ ಮಾಡಿಕೊಂಡಿದ್ದು 13 ಸ್ಥಾನಗಳಲ್ಲಿ ಸ್ಪರ್ಧೆ ಮಾಡಿದೆ. ಎಡ ಪಕ್ಷಗಳಾದ ಸಿಪಿಐ, ಫಾರ್ವರ್ಡ್ ಬ್ಲಾಕ್, CPI(M), ಆರ್ಎಸ್ಪಿ ಪಕ್ಷಗಳು 47 ಸ್ಥಾನಗಳಲ್ಲಿ ಸ್ಪರ್ಧೆ ಮಾಡಿವೆ. ಸ್ಥಳೀಯ ಪಕ್ಷ ತ್ರಿಪುರಾ ಮೊರ್ಚಾ 42 ಸ್ಥಾನಗಳಲ್ಲಿ ಸ್ಪರ್ಧೆ ಮಾಡಿದೆ.
Advertisement
People of Tripura are united for change.
Sincerely urge everyone, especially the youth to come out and participate in the festival of Democracy and vote for peace and progress.
Vote, without fear. #TripuraElection2023
— Mallikarjun Kharge (@kharge) February 16, 2023
ಸುಮಾರು 3,337 ಮತಗಟ್ಟೆಗಳಲ್ಲಿ (Polling Booth) ಮತದಾನ ನಡೆಯುತ್ತಿದೆ. ಒಟ್ಟು ಮತಗಟ್ಟೆಗಳಲ್ಲಿ 1,100 ಮತಗಟ್ಟೆಗಳನ್ನು ಸೂಕ್ಷ್ಮ ಮತ್ತು 28 ಮತಗಟ್ಟೆಗಳನ್ನು ಅತಿಸೂಕ್ಷ್ಮ ಎಂದು ಗುರುತಿಸಲಾಗಿದೆ. ಮತದಾರರು ಸರತೀ ಸಾಲಿನಲ್ಲಿ ನಿಂತು ಮತದಾನ ಮಾಡುತ್ತಿದ್ದಾರೆ. ಇದನ್ನೂ ಓದಿ: ಸೌಹಾರ್ದ ಕ್ರಿಕೆಟ್ ಆಡಲು ಹೋಗಿ ಎಡವಟ್ಟು ಮಾಡಿಕೊಂಡ ಬಿಜೆಪಿ ಕೇಂದ್ರ ಸಚಿವ
ಈ ವೇಳೆ ನಾಯಕರ ಜಟಾಪಟಿಯೂ ನಡೆದಿದೆ. ನರೇಂದ್ರ ಮೋದಿ, ಅಮಿತ್ ಶಾ ಅಭಿವೃದ್ಧಿ ಸರ್ಕಾರಕ್ಕೆ ಮತದಾನ ಮಾಡಿ ಎಂದು ಬಿಜೆಪಿ ಬೆಂಬಲಿಸುವಂತೆ ಕೋರಿದರೆ, ಯಾರ ಒತ್ತಡಕ್ಕೂ ಮಣಿಯದೇ ಪಾರದರ್ಶಕವಾಗಿ ಮತದಾನ ಮಾಡಿ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕಾಂಗ್ರೆಸ್ ಬೆಂಬಲಿಸುವಂತೆ ಮನವಿ ಮಾಡಿದ್ದಾರೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k