ಬಾಲಿವುಡ್ ನಟಿ ತೃಪ್ತಿ ದಿಮ್ರಿ (Triptii Dimri) ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ‘ಅನಿಮಲ್’ ಚಿತ್ರದ ನಂತರ ಬೇಡಿಕೆಯ ನಟಿಯಾಗಿರುವ ತೃಪ್ತಿ ಮದುವೆ (Wedding) ಬಗ್ಗೆ ಮಾತನಾಡಿದ್ದಾರೆ. ನಿಮ್ಮ ಮಗಳು ಮದುವೆ ಆಗಲ್ಲ ಎಂದು ಕೊಂಕು ಮಾತನಾಡಿದ ಸಂಬಂಧಿಕರ ನಡೆಯ ನಟಿ ಮೌನ ಮುರಿದಿದ್ದಾರೆ. ಇದನ್ನೂ ಓದಿ:ಮತ್ತೊಂದು ಬಾಲಿವುಡ್ ಪ್ರಾಜೆಕ್ಟ್ ಒಪ್ಪಿಕೊಂಡ ನಟಿ- ‘ಆಶಿಕಿ 2’ ಹೀರೋಗೆ ಸಮಂತಾ ಜೋಡಿ
ಸಿನಿಮಾವೊಂದರ ಪ್ರಚಾರ ಕಾರ್ಯದ ವೇಳೆ, ವೈಯಕ್ತಿಕ ವಿಚಾರದ ಬಗ್ಗೆ ಮಾತನಾಡಿದ್ದಾರೆ. ನಿಮ್ಮ ಮಗಳು ಸಿನಿಮಾರಂಗಕ್ಕೆ ಕಾಲಿಟ್ಟಿದ್ದಾರೆ. ಮುಂದೊಂದು ದಿನ ನಿಮ್ಮ ಮಗಳಿಗೆ ಮದುವೆ ಆಗೋದಿಲ್ಲ ನೋಡಿ ಎಂದು ಸಂಬಂಧಿಕರು ಪೋಷಕರಿಗೆ ಹೇಳಿದನ್ನು ನಟಿ ಸ್ಮರಿಸಿದ್ದಾರೆ. ಆದರೆ ಇಂದು ಯಾರ ಟೀಕೆಗೂ ಮಣಿಯದೆ ನಾಯಕಿಯಾಗಿ ತೃಪ್ತಿ ಸೈ ಎನಿಸಿಕೊಂಡಿದ್ದಾರೆ. ಯಶಸ್ಸಿನ ಮೂಲಕ ಕೊಂಕು ಮಾತುಗಳಿಗೆ ಉತ್ತರ ನೀಡಿದ್ದಾರೆ.
ಇನ್ನೂ 2017ರಲ್ಲಿ ‘ಮೋಮ್’ ಸಿನಿಮಾದಲ್ಲಿ ಹಿರಿಯ ನಟಿ ಶ್ರೀದೇವಿ ಜೊತೆ ತೃಪ್ತಿ ನಟಿಸಿದರು. ಪೋಷಕ ಪಾತ್ರಕ್ಕೆ ಜೀವ ತುಂಬಿದ್ದರು. 2018ರಲ್ಲಿ ‘ಲೈಲಾ ಮಜ್ನು’ ಸಿನಿಮಾದಲ್ಲಿ ನಾಯಕಿಯಾಗಿ ಗಮನ ಸೆಳೆದರು. ಅಲ್ಲಿಂದ ನಟಿ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದರೂ ಕೂಡ ಅವರಿಗೆ ‘ಅನಿಮಲ್’ ಸಿನಿಮಾದ ನಟನೆಗಾಗಿ ಯಶಸ್ಸು ಸಿಕ್ಕಿತು. ರಣ್‌ಬೀರ್ ಕಪೂರ್‌ಗೆ ಮತ್ತೋರ್ವ ನಾಯಕಿಯಾಗಿ ನಟಿಸಿದರು.
ಪ್ರಸ್ತುತ ರಾಜ್‌ಕುಮಾರ್ ರಾವ್ ಜೊತೆಗಿನ ಸಿನಿಮಾ, ಕಾರ್ತಿಕ್ ಆರ್ಯನ್ ಜೊತೆಗಿ ಚಿತ್ರ ಸೇರಿದಂತೆ ಹಲವು ಸಿನಿಮಾಗಳಿವೆ. ತೆಲುಗಿನಲ್ಲಿ ನಟಿಸಲು ಕೂಡ ಆಫರ್ಸ್ ಅರಸಿ ಬರುತ್ತಿವೆ.