ಹೈದರಾಬಾದ್: ತ್ರಿವಳಿ ತಲಾಕ್ ನಿಷೇಧದ ಬಗ್ಗೆ ದೇಶದಲ್ಲಿ ಚರ್ಚೆ ನಡೆಯುತ್ತಿರುವ ಹೊತ್ತಲ್ಲೇ ವಾಟ್ಸಪ್‍ನಲ್ಲಿ ಪತಿಯಿಂದ ವಿಚ್ಚೇಧನ ಪಡೆದ ಮಹಿಳೆಯೊಬ್ಬರು ಗಂಡನ ಮನೆಯವರ ಕಿರುಕುಳದ ಬಗ್ಗೆ ಹೇಳಿಕೆ ನೀಡಿದ್ದಾರೆ.
ಕಳೆದ ವರ್ಷ ನವೆಂಬರ್‍ನಲ್ಲಿ ಸುಮೈನಾ ಎಂಬ ಮಹಿಳೆಗೆ ಆಕೆಯ ಹುಟ್ಟುಹಬ್ಬದ ದಿನದಂದೇ ದುಬೈನಲ್ಲಿ ವಾಸವಿರುವ ಪತಿ ವಾಟ್ಸಪ್‍ನಲ್ಲೇ ಮೂರು ಬಾರಿ ತಲಾಕ್ ಎಂದು ಹೇಳಿ, ಇಲ್ಲಿಗೆ ನಮ್ಮ ಸಂಬಂಧ ಮುಗಿಯಿತು ಎಂದಿದ್ದ. ಈ ಬಗ್ಗೆ ಮಾರ್ಚ್ 16ರಂದು ಸನತ್‍ನಗರ್ ಪೊಲೀಸ್ ಠಾಣೆಯಲ್ಲಿ ಸುಮೈನಾ ದೂರು ನೀಡಿದ್ದರು. ಮಹಿಳೆಯ ದೂರಿನನ್ವಯ ಪೊಲೀಸರು ಐಪಿಸಿ ಸೆಕ್ಷನ್ 420 ಹಾಗೂ 406 ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
Advertisement
ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ ಹೇಳಿಕೆ ನೀಡಿರೋ ಸುಮೈನಾ, ಅತ್ತೆಯ ಎರಡನೇ ಗಂಡನೊಂದಿಗೆ ಲೈಂಗಿಕ ಸಂಪರ್ಕ ಹೊಂದುವ ಮೂಲಕ ಆಕೆಗೆ ಬಾಡಿಗೆ ತಾಯಿಯಾಗುವಂತೆ ನನಗೆ ಒತ್ತಾಯಿಸಿದ್ದರು. ಇದಕ್ಕೆ ನನ್ನ ಪತಿ ಕೂಡ ವಿರೋಧ ವ್ಯಕ್ತಪಡಿಸಲಿಲ್ಲ. ನಾನು ನಿರಾಕರಿಸಿದಾಗ ನನಗೆ ಕಿರುಕುಳ ನೀಡಿ 6 ದಿನಗಳವರೆಗೆ ರೂಮಿನಲ್ಲಿ ಕೂಡಿಹಾಕಿದ್ದರು. ನಂತರ ನನ್ನ ತಂದೆ ಬಂದು ಮನೆಗೆ ಕರೆದುಕೊಂಡು ಹೋದ್ರು ಎಂದು ಹೇಳಿದ್ದಾರೆ.
Advertisement
ಇದಾದ ಬಳಿಕ ನನ್ನ ಪತಿಯೊಂದಿಗೆ ಮಾತನಾಡಲು ಹಲವು ಬಾರಿ ಪ್ರಯತ್ನಿಸಿದೆ. ಆದ್ರೆ ಅವರು ನನ್ನ ಕರೆ ಸ್ವೀಕರಿಸುತ್ತಿರಲಿಲ್ಲ. ಅನಂತರ ವಾಟ್ಸಪ್‍ನಲ್ಲಿ ಮೂರು ಬಾರಿ ತಲಾಕ್ ಎಂದು ಬರೆದು ಸಂದೇಶ ಕಳಿಸಿದ್ರು ಎಂದು ಸುಮೈನಾ ಹೇಳಿದ್ದಾರೆ.
Advertisement
ನಾನು ನನ್ನ ಪತಿ 1 ತಿಂಗಳವರೆಗೆ ದುಬೈನಲ್ಲಿದ್ದೆವು. ಅಲ್ಲಿಂದ ಬಂದ ನಂತರ ಮನೆಕಲಸದವಳಂತೆ ನನ್ನಿಂದ ಕೆಲಸ ಮಾಡಿಸುತ್ತಿದ್ದರು. ಸರಿಯಾಗಿ ಊಟ ಕೊಡ್ತಿರ್ಲಿಲ್ಲ. ಅತ್ತೆ ಮಾಟ ಮಂತ್ರ ಮಾಡುತ್ತಿದ್ದರು. ನನಗೆ ಕಿರುಕುಳ ನೀಡುತ್ತಿದ್ದರು ಎಂದು ಸುಮೈನಾ ಆರೋಪಿಸಿದ್ದಾರೆ. ಪ್ರಕರಣದ ಬಗ್ಗೆ ತನಿಖೆ ಮುಂದುವರೆದಿದೆ.