– ಬಿಜೆಪಿಗೆ ಮುಸ್ಲಿಂ ಮಹಿಳೆಯರ ಮೇಲೆ ಎಷ್ಟು ಪ್ರೀತಿಯಿದೆ: ಓವೈಸಿ ವ್ಯಂಗ್ಯ
ನವದೆಹಲಿ: ಸಂಸತ್‍ನ ಕಲಾಪದಲ್ಲಿ ತ್ರಿವಳಿ ತಲಾಖ್ ಮತ್ತು ಶಬರಿಮಲೆ ಪ್ರಕರಣಗಳು ಭಾರೀ ಸದ್ದು ಮಾಡಿವೆ. ಈ ವಿಚಾರವಾಗಿ ಪರ ಹಾಗೂ ವಿರೋಧ ವ್ಯಕ್ತವಾಗಿದೆ.
ವಿಪಕ್ಷಗಳ ವಿರೋಧದ ನಡುವೆಯೂ ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಅವರು, ತ್ರಿವಳಿ ತಲಾಖ್ ನಿಷೇಧಿಸುವ ತಿದ್ದುಪಡಿ ವಿಧೇಯಕ ಮಂಡಿಸಿದರು. ಲಿಂಗ ಸಮಾನತೆ ಹಾಗೂ ನ್ಯಾಯದ ದೃಷ್ಟಿಯಿಂದ ಈ ಶಾಸನವು ಅತ್ಯಗತ್ಯ. ಇದು ಧರ್ಮದ ಪ್ರಶ್ನೆಯಲ್ಲ. ಮಹಿಳೆಯರ ಹಕ್ಕಿನ ಪ್ರಶ್ನೆ ಎಂದು ಹೇಳಿದರು.
Advertisement
“Triple Talaq is not an issue of politics, prayer or religion; it is an issue of justice, dignity and empowerment of women.”
Law Minister Shri @rsprasad introduces #TripleTalaqBill in Lok Sabha, 21.06.2019 pic.twitter.com/xNSMgqUAnq
— BJP (@BJP4India) June 21, 2019
Advertisement
ದೇಶದಲ್ಲಿ ತ್ರಿವಳಿ ತಲಾಖ್‍ನ 543 ಕೇಸುಗಳು ಈಗಾಗಲೇ ವರದಿಯಾಗಿವೆ. ತ್ರಿವಳಿ ತಲಾಖ್ ಅನ್ನು ಸುಪ್ರೀಂ ಕೋರ್ಟ್ ನಿಷೇಧಿಸಿದ ಬಳಿಕವೂ 200ರಷ್ಟು ಕೇಸುಗಳು ದಾಖಲಾಗಿವೆ. ಇದು ಮಹಿಳೆಯರ ಘನತೆಯ ಪ್ರಶ್ನೆ ಮತ್ತು ಅವರ ರಕ್ಷಣೆಗೆ ನಾವು ಬದ್ಧರಾಗಿದ್ದೇವೆ ಎಂದು ರವಿಶಂಕರ್ ತಿಳಿಸಿದರು.
Advertisement
ವಿಧೇಯಕ ಮಂಡಿಸುವಂತೆ ಸ್ಪೀಕರ್ ಓಂ ಬಿರ್ಲಾ ಹೇಳಿದ ತಕ್ಷಣ ಪ್ರತಿಪಕ್ಷದವರು ಗದ್ದಲ ಆರಂಭಿಸಿದರು. ವಿಧೇಯಕವನ್ನು ನಾನು ವಿರೋಧಿಸುತ್ತೇನೆ ಎಂದ ಕಾಂಗ್ರೆಸ್ ಮುಖಂಡ ಶಶಿ ತರೂರ್, ಇದು ಮುಸ್ಲಿಮರಿಗೆ ಮಾತ್ರವೇ ಅಲ್ಲ, ಪತ್ನಿಯರನ್ನು ತೊರೆಯುವ ಎಲ್ಲ ಪ್ರಕರಣಗಳಿಗೂ ಅನ್ವಯವಾಗಬೇಕು ಎಂದು ಆಗ್ರಹಿಸಿದರು.
Advertisement
That’s the point. We aren’t defending triple talaq. We are opposing a law that does nothing to protect Muslim women but punishes Muslim men. It criminalizes their divorces, but exempts other men who desert their families w’out taking responsibility. That’s discriminatory. https://t.co/4NpjaUIl02
— Shashi Tharoor (@ShashiTharoor) June 21, 2019
ಬಿಜೆಪಿಗೆ ಮುಸ್ಲಿಂ ಮಹಿಳೆಯರ ಮೇಲೆ ಎಷ್ಟು ಪ್ರೀತಿಯಿದೆ ಎಂದು ವ್ಯಂಗ್ಯವಾಡಿದ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ, ಕೇರಳದ ಶಬರಿಮಲೆ ಪ್ರವೇಶಿಸುವ ಹಿಂದೂ ಮಹಿಳೆಯರ ಹಕ್ಕನ್ನು ವಿರೋಧಿಸಿತು ಎಂದು ಟೀಕಿಸಿದರು.
A Owaisi, AIMIM: Triple Talaq bill is unconstitutional. It's a violation of Constitution's Article 14 & 15. We already have Domestic Violence Act 2005, CrPC Section 125, Muslim Women Marriage Act. If Triple Talaq Bill becomes a law it will be even greater injustice against women. pic.twitter.com/khvMLGDnHG
— ANI (@ANI) June 21, 2019
ತಪ್ಪಿತಸ್ಥ ಮುಸ್ಲಿಂ ಪುರುಷರಿಗೆ 3 ವರ್ಷ ಜೈಲು ಶಿಕ್ಷೆ ತ್ರಿವಳಿ ತಲಾಖ್ ವಿಧೇಯಕದಲ್ಲಿದೆ. ಆದರೆ ಮುಸಲ್ಮಾನೇತರರು ಇದೇ ತಪ್ಪು ಮಾಡಿದರೆ ಕೇವಲ ಒಂದು ವರ್ಷ ಜೈಲು ಶಿಕ್ಷೆ. ಇದು ಸಂವಿಧಾನಿಕ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಅಸಾದುದ್ದೀನ್ ಓವೈಸಿ ಕಿಡಿಕಾರಿದರು.
[wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.biskuht.com/wp-content/plugins/wonderplugin-video-embed/engine/playvideo-64-64-0.png”]