ಬೆಂಗಳೂರು: ಬುಲೆಟ್ ಬೈಕ್‌ನಲ್ಲಿ ತ್ರಿಬಲ್ ರೈಡ್ ಹೋಗುತ್ತಿದ್ದಾಗ ಮರಕ್ಕೆ ಡಿಕ್ಕಿಯಾಗಿ ಇಬ್ಬರು ಸಾವನ್ನಪ್ಪಿರುವ ಘಟನೆ ಯಲಹಂಕ (Yelahanka) ನ್ಯೂ ಟೌನ್ ಉನ್ನಿಕೃಷ್ಣನ್ ಜಂಕ್ಷನ್ ಬಳಿ ನಡೆದಿದೆ.
ಕಿರಣ್ (25) ಮತ್ತು ಯಶವಂತ್ (25) ಮೃತರು. ಬೈಕ್‌ನಲ್ಲಿದ್ದ ಹಿಂಬದಿ ಸವಾರ ಗೌತಮ್ ಎಂಬುವವರು ಗಾಯಗೊಂಡಿದ್ದಾರೆ. ಇದನ್ನೂ ಓದಿ: ಸಚಿವೆ ಹೆಬ್ಬಾಳ್ಕರ್ ಕ್ಷೇತ್ರದಲ್ಲೇ ಅಂಗನವಾಡಿ ಮಕ್ಕಳಿಗೆ ಎಕ್ಸ್‌ಪೈರ್ಡ್ ಸಿರಿಧಾನ್ಯ ಲಡ್ಡು ವಿತರಣೆ
ಮಂಗಳವಾರ (ಫೆ.24) ರಾತ್ರಿ 1 ಗಂಟೆ ಸುಮಾರಿಗೆ ಬುಲೆಟ್ ಬೈಕ್‌ನಲ್ಲಿ ಯುವಕರು ಹೆಲ್ಮೆಟ್ ಧರಿಸದೇ ತ್ರಿಬಲ್ ರೈಡಿಂಗ್ ಹೊರಟಿದ್ದರು. ಈ ವೇಳೆ ಮರಕ್ಕೆ ಡಿಕ್ಕಿಯಾಗಿ ಬೈಕ್ ಪಲ್ಟಿಯಾಗಿದೆ. ಪರಿಣಾಮ ಬುಲೆಟ್ ಬೈಕ್ ಓಡಿಸುತ್ತಿದ್ದ ಕಿರಣ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನೋರ್ವ ಯುವಕ ಯಶವಂತ್ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾರೆ.
ಮತ್ತೊಬ್ಬ ಯುವಕ ಗೌತಮ್ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಿದ್ದಾರೆ. ಯಲಹಂಕ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ಯಲಹಂಕ ಸರ್ಕಾರಿ ಆಸ್ಪತ್ರೆಗೆ ಮೃತದೇಹ ರವಾನೆ ಮಾಡಿದ್ದಾರೆ.ಇದನ್ನೂ ಓದಿ: ನಮ್ಮ ಸರ್ಕಾರ ಎಲ್ಲಾ ಹುದ್ದೆಗಳ ಭರ್ತಿಗೆ ಸಿದ್ಧ ಇದೆ, ವಯೋಮಿತಿ ಹೆಚ್ಚಳಕ್ಕೂ ಕ್ರಮವಹಿಸಿದೆ: ಪ್ರಿಯಾಂಕ್ ಖರ್ಗೆ

