ಲಕ್ನೋ: ಅಂಬೇಡ್ಕರ್ ನಗರದಲ್ಲಿ (Ambedkar Nagar) ನಡೆಯುತ್ತಿದ್ದ ಪೂರ್ವಭಾವಿ ಅರ್ಹತಾ ಪರೀಕ್ಷೆ (Preliminary Eligibility Test)(ಪಿಇಟಿ)ಗೆ ತೆರಳುತ್ತಿದ್ದ ವೇಳೆ ಸಂಭವಿಸಿದ ಅಪಘಾತದಲ್ಲಿ ವಿದ್ಯಾರ್ಥಿನಿಯೊಬ್ಬರು ಕಾಲು ಕಳೆದುಕೊಂಡಿರುವ ಘಟನೆ ಉತ್ತರ ಪ್ರದೇಶದ (Uttar Pradesh) ಗೋರಖ್‍ಪುರದಲ್ಲಿ (Gorakhpur) ನಡೆದಿದೆ.
ಭಾನುವಾರ ಬೆಳಗ್ಗೆ ಕಾಲೇಸರ್ ಪ್ರದೇಶದಲ್ಲಿ (Kaalesar area) ಬೆಳಗ್ಗೆ 9:30ಕ್ಕೆ ಈ ಅಪಘಾತ ಸಂಭವಿಸಿದೆ. ವಿದ್ಯಾರ್ಥಿನಿ ಮತ್ತು ಆಕೆಯ ತಂದೆ ಹೋಗುತ್ತಿದ್ದ ಬೈಕ್‍ಗೆ ಹಿಂದಿನಿಂದ ಬಂದು ಸಿಎನ್‍ಜಿ ಟ್ರಕ್ ಡಿಕ್ಕಿ ಹೊಡೆದಿದೆ. ಇದರಿಂದ ಯುವತಿಯ ಬಲಗಾಲಿಗೆ ಗಂಭೀರವಾಗಿ ಗಾಯವಾಗಿತ್ತು. ಇದನ್ನೂ ಓದಿ: ನಾಪತ್ತೆಯಾಗಿರೋ ಸಂತ್ರಸ್ತೆಯೊಂದಿಗೆ ವರ್ಷದೊಳಗೆ ಮದ್ವೆಯಾಗ್ಬೇಕು- ರೇಪ್ ಆರೋಪಿಗೆ ಬಾಂಬೆ ಹೈಕೋರ್ಟ್ ಆದೇಶ
ಕೂಡಲೇ ಆಕೆಯನ್ನು ಜಿಲ್ಲಾಸ್ಪತ್ರೆಗೆ ಕರೆದೊಯ್ದು ಅಲ್ಲಿಂದ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಯಿತು. ಆದರೆ ಯುವತಿಯ ಕಾಲಿಗೆ ತೀವ್ರವಾಗಿ ಹಾನಿಯಾಗಿದ್ದರಿಂದ ವೈದ್ಯರು ಕಾಲನ್ನೇ ಕತ್ತರಿಸಬೇಕಾಯಿತು ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ದೀಪಾವಳಿಗೆ ಸಿಹಿ ಸುದ್ದಿ- ರೈತರ ಖಾತೆಗೆ 2 ಸಾವಿರ ಹಣ ಬಿಡುಗಡೆ ಮಾಡಿದ ಪ್ರಧಾನಿ