ಕೋಲ್ಕತ್ತಾ: ಪಶ್ಚಿಮ ಬಂಗಾಳದ ಶಿಕ್ಷಕರ ನೇಮಕಾತಿ ಹಗರಣದಲ್ಲಿ ತೃಣಮೂಲ ಕಾಂಗ್ರೆಸ್ (Trinamool Congress) ಶಾಸಕ ಮಾಣಿಕ್ ಭಟ್ಟಾಚಾರ್ಯ (Manik Bhattacharya) ಅವರನ್ನು ಜಾರಿ ನಿರ್ದೇಶನಾಲಯ (ED) ರಾತ್ರೋ ರಾತ್ರಿ ವಿಚಾರಣೆ ನಡೆಸಿತ್ತು. ಈ ಬೆನ್ನಲ್ಲೇ ಇಂದು ಮುಂಜಾನೆ ಅವರನ್ನು ಬಂಧಿಸಿದೆ.
ಶಿಕ್ಷಕರ ನೇಮಕಾತಿ ಹಗರಣಕ್ಕೆ (Teachers Recruitment Scam) ಸಂಬಂಧಿಸಿ ತನಿಖೆ ನಡೆಸುತ್ತಿರುವ ಇಡಿ, ಪಾರ್ಥ ಚಟರ್ಜಿ ಅವರ ವಾಟ್ಸಪ್ ಹಿಸ್ಟರಿಯನ್ನು ತೆಗೆದಿದೆ. ಈ ಸಂದರ್ಭದಲ್ಲಿ ಭಟ್ಟಾಚಾರ್ಯರೊಂದಿಗೆ ಲಂಚ ವಸೂಲಿಯಲ್ಲಿ ತೊಡಗಿರುವ ಕುರಿತು ಸಂಭಾಷಣೆ ನಡೆಸಿರುವ ಆಡಿಯೋ ಬೆಳಕಿಗೆ ಬಂದಿದೆ.
Advertisement
Advertisement
ಈ ಹಿನ್ನೆಲೆಯಲ್ಲಿ ನಿನ್ನೆ ತೀವ್ರ ವಿಚಾರಣೆ ನಡೆಸಿ ಇಂದು ಬಂಧಿಸಿದೆ. ಘಟನೆಗೆ ಸಂಬಂಧಿಸಿ ಭಟ್ಟಾಚಾರ್ಯ ಅವರನ್ನು ಇಂದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ನಂತರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಪುಟಿನ್ ಕನಸಿನ ಸೇತುವೆ ಧ್ವಂಸಗೊಳಿಸಿದ್ದಕ್ಕೆ ಕೆರಳಿದ ರಷ್ಯಾ – ಉಕ್ರೇನ್ ಮೇಲೆ ಮತ್ತಷ್ಟು ತೀವ್ರ ದಾಳಿ
Advertisement
Advertisement
ಈ ಮೂಲಕ ಹಗರಣದಲ್ಲಿ ಬಂಧಿತರಾದ ಎರಡನೇ ತೃಣಮೂಲ ನಾಯಕರಾಗಿದ್ದಾರೆ. ಜುಲೈನಲ್ಲಿ ಪಶ್ಚಿಮ ಬಂಗಾಳದ ಮಾಜಿ ಸಚಿವ ಪಾರ್ಥ ಚಟರ್ಜಿ ಅವರನ್ನು ಬಂಧಿಸಲಾಗಿತ್ತು. ಅಷ್ಟೇ ಅಲ್ಲದೇ ಅವರ ಸಹಾಯಕಿ ಅರ್ಪಿತಾ ಮುಖರ್ಜಿಗೆ ಸಂಬಂಧಿಸಿದ ಆಸ್ತಿಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಇದನ್ನೂ ಓದಿ: ಡಿಸಿ ಕಚೇರಿಗೆ ಬೀಗ ಹಾಕಿ ರೈತರಿಂದ ಪ್ರತಿಭಟನೆ