ಟೈಟಲ್ ಹಾಗೂ ಟ್ರೇಲರ್ ಮೂಲಕ ಸುದ್ದಿಯಲ್ಲಿರುವ ‘ತ್ರಿಕೋನ’ ಚಿತ್ರ ಬಿಡುಗಡೆಯ ಹೊಸ್ತಿಲಿಗೆ ಬಂದು ನಿಂತಿದೆ. ಏಪ್ರಿಲ್ 8 ರಂದು ಚಿತ್ರವನ್ನು ತೆರೆಗೆ ತರಲು ಚಿತ್ರತಂಡ ಸಕಲ ತಯಾರಿ ಮಾಡಿಕೊಂಡಿದೆ. ಬಹಳ ವರ್ಷಗಳ ನಂತರ ಮತ್ತೆ ನಿರ್ದೇಶನದ ಟ್ರ್ಯಾಕ್ ಮರಳಿರುವ ಚಂದ್ರಕಾಂತ್ ಈ ಚಿತ್ರದ ಗೆಲುವಿಗೆ ಎದುರು ನೋಡುತ್ತಿದ್ದು ಸಿನಿಮಾ ಬಗ್ಗೆ ಸಾಕಷ್ಟು ಹೋಪ್ ಇಟ್ಟುಕೊಂಡಿದ್ದಾರೆ.
Advertisement
‘ತ್ರಿಕೋನ’ ಆಕ್ಷನ್ ಥ್ರಿಲ್ಲರ್, ಸಸ್ಪೆನ್ಸ್ ಕಹಾನಿ ಒಳಗೊಂಡ ಸಿನಿಮಾ. 2014ರಲ್ಲಿ ತೆರೆಕಂಡ 143 ಸಿನಿಮಾ ಮುಲಕ ನಿರ್ದೇಶಕನಾಗಿ ಗುರುತಿಸಿಕೊಂಡಿದ್ದ ಚಂದ್ರಕಾಂತ್ ಎರಡನೇ ಸಿನಿಮಾವಿದು. ಸಿನಿಮಾದ ಕಟೆಂಟ್ ಬಗ್ಗೆ ಅಪಾರ ನಂಬಿಕೆ ಇಟ್ಟು ನಿರ್ದೇಶನಕ್ಕೆ ಮರಳಿರುವ ಇವರು ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಜವಾಬ್ದಾರಿಯನ್ನು ಅಚ್ಚಕಟ್ಟಾಗಿ ನಿಭಾಯಿಸಿ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದಾರೆ. ಚಿತ್ರಕಥೆಯ ರೂವಾರಿ ನಿರ್ಮಾಪಕರಾದ ರಾಜ್ ಶೇಖರ್, ಅಷ್ಟೇ ಅಲ್ಲ ‘ತ್ರಿಕೋನ’ ಸಿನಿಮಾ ನಿರ್ಮಾಣ ಕೂಡ ಇವರೇ ಮಾಡಿದ್ದಾರೆ. ಇದನ್ನೂ ಓದಿ: ಮಸೀದಿಗಳಲ್ಲಿ ಧ್ವನಿವರ್ಧಕ ನಿಷೇಧ: ವಕ್ಫ್ ಮಂಡಳಿಯ ಸುತ್ತೋಲೆಯಲ್ಲಿ ಏನಿದೆ? ಸುಪ್ರೀಂ ಕೋರ್ಟ್ ಹೇಳಿದ್ದೇನು?
Advertisement
Advertisement
ಕಷ್ಟಗಳು ಎದುರಾದಾಗ ಆಯಾ ವಯೋಮನಾದ ಜನರು ಶಕ್ತಿ, ಅಹಂ, ತಾಳ್ಮೆ ಅಸ್ತ್ರ ಉಪಯೋಗಿಸಿ ಹೇಗೆ ಅದನ್ನು ಬಗೆಹರಿಸಿಕೊಳ್ಳುತ್ತಾರೆ. ‘ತಾಳ್ಮೆ’ ಜೀವನದಲ್ಲಿ ಎಷ್ಟು ಮುಖ್ಯ ಅನ್ನೋದನ್ನು ಮೂರು ಜನರೇಷನ್ ಇಟ್ಟುಕೊಂಡು ಕಥೆ ಹೆಣೆದು ಕಮರ್ಶಿಯಲ್ ಎಳೆಯಲ್ಲಿ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕರು. ಚಿತ್ರದಲ್ಲಿ ಜೂಲಿ ಲಕ್ಷ್ಮಿ, ಸುರೇಶ್ ಹೆಬ್ಳಿಕರ್ ಅಪರೂಪದ ಜೋಡಿಯನ್ನು ಕಣ್ತುಂಬಿಕೊಳ್ಳಬಹುದು. ಹಾಗೆಯೇ ಅಚ್ಯುತ್ ಕುಮಾರ್, ಸುಧಾರಾಣಿ ಜುಗಲ್ಬಂದಿ, ಸಾಧು ಕೋಕಿಲ, ಮನದೀಪ ರಾಯ್, ರಾಜ್ ವೀರ್, ಮಾರುತೇಶ್ ಹೀಗೆ ಹಲವು ಕಲಾವಿದರು ತ್ರಿಕೋನದಲ್ಲಿ ಜೊತೆಯಾಗಿ ಭರಪೂರ ಮನರಂಜನೆ ನೀಡಲು ಸಜ್ಜಾಗಿದ್ದಾರೆ.
Advertisement
ಕಟೆಂಟ್ ಎಷ್ಟು ಗಟ್ಟಿತನ ಹೊಂದಿದೆಯೋ ತಾಂತ್ರಿಕವಾಗಿಯೂ ಸಿನಿಮಾ ಅಷ್ಟೇ ಸ್ಟ್ರಾಂಗ್ ಆಗಿದೆ ಅನ್ನೋದು ಚಿತ್ರತಂಡದ ಮಾತು. ಸುರೇಂದ್ರನಾಥ್ ಸಂಗೀತ ಹಾಗೂ ಹಿನ್ನೆಲೆ ಸಂಗೀತ, ಶ್ರೀನಿವಾಸ್ ವಿನ್ನಕೋಟ ಛಾಯಾಗ್ರಾಹಣ, ಜೀವನ್ ಪ್ರಕಾಶ್ ಸಂಕಲನ ಚಿತ್ರಕ್ಕಿದೆ. ಪೊಲೀಸ್ ಪ್ರಕಿ ಪ್ರೋಡಕ್ಷನ್ ಬ್ಯಾನರ್ ನಿರ್ಮಾಣದಲ್ಲಿ ಬರ್ತಿರುವ ಈ ಚಿತ್ರಕ್ಕೆ ರಾಜ್ ಶೇಖರ್ ನಿರ್ಮಾಪಕರು. ಇದನ್ನೂ ಓದಿ: ತಲೆಕೂದಲು ಬೋಳಿಸಿಕೊಂಡ ಫೋಟೋ ಶೇರ್ ಮಾಡಿದ ಗರ್ಭಿಣಿ ಸಂಜನಾ