ಮಂಗಳೂರು: ನಗರದಲ್ಲಿ ಮತ್ತೆ ನೈತಿಕ ಪೊಲೀಸ್ ಗಿರಿ ನಡೆದಿದೆ. ಸುಳ್ಯದಲ್ಲಿ ಮುಸ್ಲಿಂ (Muslim) ಜೋಡಿಗೆ ಮುಸ್ಲಿಂ ಯುವಕರೇ ಹಲ್ಲೆ ನಡೆಸಿದ ಘಟನೆಯ ನೆನಪು ಮಾಸುವ ಮೊದಲೇ ಮತ್ತೆ ಮಂಗಳೂರು (Mangaluru) ನಗರದಲ್ಲಿ ಹಲ್ಲೆಗೆ ಯತ್ನ ನಡೆದಿದೆ. ಮುಸ್ಲಿಂ ಯುವಕರೊಂದಿಗೆ ಹಿಂದೂ (Hindu) ಯುವತಿಯರು ತಡ ರಾತ್ರಿ ಸುತ್ತಾಡುತ್ತಿದ್ದುದನ್ನು ನೋಡಿದ್ದ ಬಜರಂಗದಳದ (Bajrang Dal) ಕಾರ್ಯಕರ್ತರು ಹಲ್ಲೆಗೆ ಯತ್ನಿಸಿದ್ದಾರೆ.
ಚುನಾವಣೆ ಹತ್ತಿರ ಬರುತ್ತಿದ್ದಂತೆ ರಾಜ್ಯದ ಕರಾವಳಿಯಲ್ಲಿ ನೈತಿಕ ಪೊಲೀಸ್‌ಗಿರಿ ಪ್ರಕರಣಗಳು ಹೆಚ್ಚಾಗುತ್ತಲೇ ಇದೆ. ಈ ಬಾರಿಯೂ ಆಗ್ಗಾಗ್ಗೆ ನೈತಿಕ ಪೊಲೀಸ್ ಗಿರಿ ಬೆಳಕಿಗೆ ಬರುತ್ತಿದೆ. ಕಳೆದ 2 ದಿನದ ಹಿಂದೆ ಸುಳ್ಯದ ಸಂತೋಷ್ ಚಿತ್ರ ಮಂದಿರಕ್ಕೆ ಕಾಂತಾರ ಚಿತ್ರ ನೋಡಲು ಬಂದ ಮುಸ್ಲಿಂ ಜೋಡಿಗೆ ಹಿಗ್ಗಾಮುಗ್ಗ ಥಳಿಸಲಾಗಿತ್ತು. ಹಿಂದೂ ಧರ್ಮದ ದೈವಾರಾಧನೆಗೆ ಸಂಬಂಧಿಸಿದ ಕಾಂತಾರ ಚಿತ್ರವನ್ನು ನೋಡಲು ಬಂದಿದ್ದ ಮುಸ್ಲಿಂ ವಿದ್ಯಾರ್ಥಿ ಜೋಡಿಗೆ ಮುಸ್ಲಿಂ ಯುವಕರೇ ಹಲ್ಲೆ ನಡೆಸಿದ್ದರು. ಕಾಂತಾರ ಚಿತ್ರವನ್ನು ನೋಡದಂತೆ ತಾಕೀತು ಮಾಡಿದ್ದರು.
Advertisement
Advertisement
ಸುಳ್ಯದ ಹಲ್ಲೆಯ ಘಟನೆಯ ನೆನಪು ಮಾಸುವ ಮೊದಲೇ ನಿನ್ನೆ ತಡ ರಾತ್ರಿ ಬಜರಂಗದಳದ ಕಾರ್ಯಕರ್ತರು ನೈತಿಕ ಪೊಲೀಸ್ ಗಿರಿಗೆ ಯತ್ನಿಸಿದ್ದರು. ನಗರದ ಕೊಟ್ಟಾರ ಎಂಬಲ್ಲಿ ಹಿಂದೂ ಯುವತಿಯರೊಂದಿಗೆ ಮುಸ್ಲಿಂ ಯುವಕರು ತಡ ರಾತ್ರಿ 12 ಗಂಟೆಗೆ ಸುತ್ತಾಡುತ್ತಿದ್ದರು. ಈ ಬಗ್ಗೆ ಮಾಹಿತಿ ಪಡೆದ ಬಜರಂಗದಳದ ಕಾರ್ಯಕರ್ತರು ತಡೆದು ಪ್ರಶ್ನಿಸಿ ಹಲ್ಲೆಗೆ ಮುಂದಾಗಿದ್ದರು. ಇದನ್ನೂ ಓದಿ: ರಾಜ್ಯಪಾಲರ ಕಾರು ಚಾಲಕ ಹೃದಯಾಘಾತದಿಂದ ಸಾವು
Advertisement
ಯುವಕರ ತಂಡ ಊಟಕ್ಕೆ ಹೋಗಿದ್ದಾಗಿ ಹೇಳಿದೆ. ಇಷ್ಟೊಂದು ರಾತ್ರಿ ವೇಳೆ ಎಲ್ಲಿ ಹೋಟೆಲ್ ಇರುತ್ತೆ ಎಂದು ಬಜರಂಗದಳದ ಕಾರ್ಯಕರ್ತರು ಪ್ರಶ್ನಿಸಿ ಹಲ್ಲೆಗೆ ಯತ್ನಿಸಿದ್ದರು. ತಕ್ಷಣ ಸ್ಥಳದಲ್ಲೇ ಇದ್ದ ನೈಟ್ ಬೀಟ್ ಪೊಲೀಸರು ಇದನ್ನು ತಡೆದಿದ್ದು, ಹಲ್ಲೆಗೆ ಆಸ್ಪದ ನೀಡಿಲ್ಲ. ಬಳಿಕ ಉರ್ವಾ ಪೊಲೀಸ್ ಠಾಣೆಗೆ ಯುವಕರನ್ನು ಕರೆತಂದು ಎಚ್ಚರಿಕೆ ನೀಡಿ ಕಳುಹಿಸಲಾಗಿದೆ.
Advertisement
ಸುಳ್ಯದ ಪ್ರಕರಣದಲ್ಲಿ ಐವರು ಆರೋಪಿಗಳು ಜೈಲು ಕಂಬಿ ಎಣಿಸುತ್ತಿದ್ದಾರೆ. ಒಟ್ಟಿನಲ್ಲಿ ಕರಾವಳಿಯಲ್ಲಿ ಈ ರೀತಿಯ ನೈತಿಕ ಪೊಲೀಸ್ ಗಿರಿ ನಡೆಯುತ್ತಿದ್ದರೂ ಅನ್ಯಕೋಮಿನ ಜೋಡಿಗಳು ಮತ್ತೆ ಮತ್ತೆ ಸುತ್ತಾಟ ನಡೆಸುತ್ತಿರುವುದು ಆಗಾಗ ಬೆಳಕಿಗೆ ಬರುತ್ತಲೇ ಇವೆ. ಇದನ್ನೂ ಓದಿ: ರಾತ್ರಿ 11 ಗಂಟೆ ನಂತ್ರ ಓಡಾಡಿದ್ದಕ್ಕೆ ದಂಪತಿಗೆ ದಂಡ ಹಾಕಿದ್ದ ಪೊಲೀಸರು ಸಸ್ಪೆಂಡ್