ಶಿವಮೊಗ್ಗ: ಇಂದು ಮಾಧ್ಯಮಗಳ ಸಮ್ಮುಖದಲ್ಲಿ ನಾಗಬಿಂಬ ಇರುವ ಸ್ಥಳವನ್ನು ಹೇಳಿ, ಅವರ ಮುಂದೆಯೇ ತೆಗೆಸುತ್ತೇನೆ ಎಂದು ಜಿಲ್ಲೆಯ ತೀರ್ಥಹಳ್ಳಿ ನಾಗಪಾತ್ರಿ ನಾಗರಾಜಭಟ್ಟರು ಸವಾಲು ಹಾಕಿದ್ದು, ಈಗ ಅವರು ಹಾಕಿದ್ದ ಸವಾಲಿನಲ್ಲಿ ಗೆದ್ದಿದ್ದಾರೆ.
ಗುಡ್ಡೆಕೊಪ್ಪ ಗ್ರಾಮ ಪಂಚಾಯ್ತಿಯ ಮರಗಳಲೆ ವೆಂಕಟಪೂಜಾರಿ ಎಂಬವರ ಹಿತ್ತಲಿನಲ್ಲಿ ಒಂದು ಮರದ ಕೆಳಗೆ ನಾಗಬಿಂಬ, ತ್ರಿಶೂಲ ಇದೆ ಎಂದು ಹೇಳಿದ್ದರು. ಅವರು ಹೇಳಿದ ಬಳಿಕ ಪಾತ್ರಿಗಳು ಪತ್ತೆ ಹಚ್ಚಿದ್ದಾರೆ. ಈಗ ನಾಗಪಾತ್ರಿ ನಾಗರಾಜಭಟ್ಟರು ಗುರುತಿಸಿದ ಸ್ಥಳದಲ್ಲೇ ತ್ರಿಶೂಲ ಮತ್ತು ನಾಗ ಬಿಂಬ ಪತ್ತೆಯಾಗಿದೆ.
ಬುಧವಾರ ನಾನು ನಾಗರಾಜಭಟ್ಟರು ಮನೆಗೆ ಹೋಗಿ ಸಮಸ್ಯೆ ಇದೆ ಎಂದು ಹೇಳಿಕೊಂಡಿದ್ದೆ. ಆಗ ಒಂದು ತ್ರಿಶೂಲ, ಕಲ್ಲು ಇದೆ ಎಂದು ಹೇಳಿದ್ದರು. ಇದಕ್ಕೂ ಮೊದಲು ಅವರು ಇಲ್ಲಿಗೆ ಬಂದು ನೋಡಿಲ್ಲ. ಇಂದು ಬೆಳಗ್ಗೆ ಎಲ್ಲರೂ ಬಂದು ಮಾಧ್ಯಮಗಳು ಮತ್ತು ಗ್ರಾಮಸ್ಥರ ಮುಂದೆಯೇ ತೆಗೆಸಿದ್ದಾರೆ ಎಂದು ಮನೆ ಮಾಲೀಕ ನಾಗಪ್ಪ ಅವರು ಹೇಳಿದರು.
ಕಳೆದ ಶನಿವಾರ ಉಡುಪಿ ಜಿಲ್ಲೆಯ ಹೆಬ್ರಿ ಸಮೀಪದ ಮುದ್ರಾಡಿಯಲ್ಲಿ ಮನೆಯ ವರಾಂಡ್ ದಲ್ಲಿ ಆರು ಅಡಿ ಒಳಗೆ ಇದ್ದ ನಾಗ ದೇವರ ವಿಗ್ರಹ ತೆಗೆದಿದ್ದರು. ದಿವ್ಯಶಕ್ತಿಯಿಂದ ಆ ವಿಗ್ರಹವನ್ನು ತೆಗೆದಿದ್ದಾಗಿ ಇದನ್ನು ವರ್ಣಿಸಲಾಗಿತ್ತು. ಆದರೆ ಈ ಘಟನೆ ಬಗ್ಗೆ ನಾಗಪಾತ್ರಿ ನಾಗರಾಜ ಭಟ್ಟರ ದೈವಿಶಕ್ತಿ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪರ ಮತ್ತು ವಿರೋಧ ಚರ್ಚೆಗೆ ಕಾರಣವಾಗಿತ್ತು. ಅದಕ್ಕೆ ನಾಗಪಾತ್ರಿ ಅವರು ಸತ್ಯವನ್ನು ಸಾಬೀತುಪಡಿಸುವುದಾಗಿ ಸವಾಲು ಹಾಕಿದ್ದರು.
ಇಂದು ಮುಂಜಾನೆ ಮಾಧ್ಯಮಗಳ ಮುಂದೆಯೇ ನಾಗಶಕ್ತಿಯ ಪವಾಡ ಬಯಲು ಮಾಡಲು ಪ್ರಸಿದ್ಧ ನಾಗಪಾತ್ರಿ ನಾಗರಾಜಭಟ್ಟರು ಮುಂದಾಗಿದ್ದು, ತೀರ್ಥಹಳ್ಳಿ ತಾಲೂಕಿನ ಆರಗ ಗ್ರಾಮದ ಸಮೀಪದ ಸ್ಥಳವೊಂದರಲ್ಲಿ ನಾಗಶಕ್ತಿ ಇದೆ. ಆ ಜಾಗದ ಬಗ್ಗೆ ಮಾಧ್ಯಮಗಳಿಗೆ ಮೊದಲು ಮಾಹಿತಿ ನೀಡುತ್ತೇನೆ. ನಿಮ್ಮ ಸಮ್ಮುಖದಲ್ಲೇ ಉತ್ಖನನ ನಡೆಯಲಿ. ನನಗಿರುವ ದೈವ ಬಲದ ಸುಳ್ಳೋ- ಸತ್ಯವೋ ಎಂಬುದು ನಿರ್ಧಾರ ಆಗಲಿ ಎಂದು ಸ್ವಯಂ ಪರೀಕ್ಷೆಗೆ ಸಜ್ಜಾಗಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv