ದೇಶದ ಸಮಸ್ತ ಜನತೆಗೆ 77ನೇ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳನ್ನು ಕೋರುತ್ತಾ ಇಂದಿನ ಈ ವಿಶೇಷ ಸಂದರ್ಭದಲ್ಲಿ ನಿಮಗಾಗಿ ವಿಶೇಷ ರೆಸಿಪಿಯನ್ನು ತಿಳಿಸಿಕೊಡುತ್ತಿದ್ದೇವೆ. ಈ ರೆಸಿಪಿ ಮಾಡಲು ತುಂಬಾ ಸುಲಭವಾಗಿದ್ದು, ಆರೋಗ್ಯಕರವೂ ಹೌದು. ಇವತ್ತಿನ ನಮ್ಮ ರೆಸಿಪಿಯಲ್ಲಿ ಟ್ರೈ ಕಲರ್ ಸ್ಮೂದಿಯನ್ನು ಯಾವ ರೀತಿಯಾಗಿ ಮಾಡುವುದು ಎಂಬುದನ್ನು ತಿಳಿಸುತ್ತಿದ್ದೇವೆ. ಹೆಸರೇ ಸೂಚಿಸುವಂತೆ ಈ ಸ್ಮೂದಿ ಮೂರು ಬಣ್ಣವನ್ನು ಹೊಂದಿರುತ್ತದೆ. ಹಾಗಿದ್ರೆ ಇದನ್ನು ಯಾವ ರೀತಿ ತಯಾರಿಸುವುದು ಎಂಬುದನ್ನು ತಿಳಿದುಕೊಳ್ಳೋಣ. ಇದನ್ನೂ ಓದಿ: ಹೀಗೆ ಮಾಡಿ ಸಿಂಪಲ್ ಪೀನಟ್ ಬಟರ್‌ನ ಮಿಠಾಯಿ
Advertisement
ಬೇಕಾಗುವ ಸಾಮಗ್ರಿಗಳು:
ಹೆಚ್ಚಿದ ಕ್ಯಾರೆಟ್ – ಒಂದು
ಜೇನು ತುಪ್ಪ – ಅಗತ್ಯಕ್ಕೆ ತಕ್ಕಷ್ಟು
ಪಾಲಕ್ ಸೊಪ್ಪು – ಸ್ವಲ್ಪ
ಹಸಿರು ದ್ರಾಕ್ಷಿ – ಸ್ವಲ್ಪ
ಹೆಚ್ಚಿದ ಹಸಿರು ಸೇಬು – ಒಂದು
ನೀರು – ಅಗತ್ಯಕ್ಕೆ ತಕ್ಕಷ್ಟು
ಹೆಚ್ಚಿದ ಬಾಳೆಹಣ್ಣು – ಒಂದು
ಕುದಿಸಿದ ಹಾಲು – ಒಂದು ಕಪ್
Advertisement
Advertisement
ಮಾಡುವ ವಿಧಾನ:
* ಮೊದಲಿಗೆ ಒಂದು ಮಿಕ್ಸಿ ಜಾರಿನಲ್ಲಿ ಹೆಚ್ಚಿದ ಕ್ಯಾರೆಟ್ ಅನ್ನು ಹಾಕಿ ಅದಕ್ಕೆ ಸ್ವಲ್ಪ ನೀರು ಮತ್ತು ಸ್ವಲ್ಪ ಜೇನುತುಪ್ಪವನ್ನು ಹಾಕಿ ಚೆನ್ನಾಗಿ ರುಬ್ಬಿಕೊಂಡು ಒಂದು ಗ್ಲಾಸ್‌ನಲ್ಲಿ ಹಾಕಿ ಬದಿಗಿಡಿ.
* ಬಳಿಕ ಅದೇ ಮಿಕ್ಸಿ ಜಾರಿಗೆ ಪಾಲಕ್ ಎಲೆ, ಹಸಿರು ದ್ರಾಕ್ಷಿ ಹಾಗೂ ಹಸಿರು ಸೇಬನ್ನು ಹಾಕಿ ಅದಕ್ಕೆ ಸ್ವಲ್ಪ ನೀರು ಮತ್ತು ಜೇನುತುಪ್ಪವನ್ನು ಸೇರಿಸಿಕೊಂಡು ರುಬ್ಬಿಕೊಳ್ಳಿ. ಈಗ ಇದನ್ನು ಬೇರೊಂದು ಗ್ಲಾಸ್‌ನಲ್ಲಿ ತೆಗೆದಿಡಿ.
* ನಂತರ ಮತ್ತೊಮ್ಮೆ ಮಿಕ್ಸಿ ಜಾರಿಗೆ ಹೆಚ್ಚಿದ ಬಾಳೆಹಣ್ಣು ಹಾಕಿ ಅದಕ್ಕೆ ಸ್ವಲ್ಪ ಹಾಲು ಮತ್ತು ಜೇನುತುಪ್ಪವನ್ನು ಹಾಕಿಕೊಂಡು ಚೆನ್ನಾಗಿ ರುಬ್ಬಿಕೊಳ್ಳಿ.
* ಈಗ ಒಂದು ದೊಡ್ಡ ಗ್ಲಾಸ್ ತೆಗೆದುಕೊಂಡು ಅದಕ್ಕೆ ಮೊದಲಿಗೆ ಪಾಲಕ್, ದ್ರಾಕ್ಷಿ ಹಾಗೂ ಸೇಬು ಹಣ್ಣಿನ ರಸವನ್ನು ಹಾಕಿಕೊಳ್ಳಿ.
* ಬಳಿಕ ಒಂದು ಚಮಚದ ಸಹಾಯದಿಂದ ಬಾಳೆಹಣ್ಣಿನ ರಸವನ್ನು ಅದರ ಮೇಲೆ ನಿಧಾನವಾಗಿ ಹಾಕಿಕೊಳ್ಳಿ. ಹಾಕುವ ವೇಳೆ ಒಂದು ಬಣ್ಣ ಇನ್ನೊಂದು ಬಣ್ಣದೊಂದಿಗೆ ಮಿಕ್ಸ್ ಆಗದಂತೆ ನೋಡಿಕೊಳ್ಳಿ. ಅದಕ್ಕಾಗಿ ಮಿಶ್ರಣಗಳನ್ನು ಸ್ವಲ್ಪ ದಪ್ಪವಾಗಿ ರುಬ್ಬಿಕೊಳ್ಳಿ.
* ಕೊನೆಯಲ್ಲಿ ಅದರ ಮೇಲೆ ಕ್ಯಾರೆಟ್ ಮಿಶ್ರಣವನ್ನು ನಿಧಾನವಾಗಿ ಹಾಕಿ. ಟ್ರೈ ಕಲರ್ ಸ್ಮೂದಿ ಕುಡಿಯಲು ರೆಡಿ. ಇದನ್ನೂ ಓದಿ: ರುಚಿರುಚಿಯಾಗಿ ಮಾಡಿ ಚಿಲ್ಲಿ ಗಾರ್ಲಿಕ್ ಪರೋಟ
Advertisement
Web Stories