ತುಮಕೂರು: ಆಂಜನೇಯನ ಹೃದಯದಲ್ಲಿ ಶ್ರೀರಾಮ ನೆಲೆಸಿದ್ದಾನೆ ಅನ್ನುವ ಬಗ್ಗೆ ಎಲ್ಲರಿಗೂ ತಿಳಿದಿದೆ. ಆದರೆ ತುಮಕೂರಿನಲ್ಲಿ ಆಂಜನೇಯ ದೇವರ ಹೃದಯ ಕಮಲದಲ್ಲಿ ತ್ರಿವರ್ಣ ಧ್ವಜ ರಾರಾಜಿಸಿದೆ.
ಕೇವಲ ಹೃದಯದಲ್ಲಿ ಮಾತ್ರವಲ್ಲ ಆಂಜನೇಯ ಸ್ವಾಮಿಯ ಬಲಗೈಯಲ್ಲೂ ತಿರಂಗ ಹಾರಾಡಿದೆ. ತುಮಕೂರು ನಗರದ ಹನುಮಂತಪುರದ ಬಯಲು ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಇಂದು ಶ್ರಾವಣ ಶನಿವಾರದ ವಿಶೇಷ ಪೂಜೆ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಆಂಜನೇಯಸ್ವಾಮಿಗೆ ಬೆಣ್ಣೆ ಅಲಂಕಾರ ಮಾಡಿ ವಿವಿಧ ಫಲಪುಷ್ಪಗಳಿಂದ ಸಿಂಗರಿಸಲಾಗಿದೆ.
Advertisement
Advertisement
ಬೆಣ್ಣೆ ಅಲಂಕಾರದ ನಡುವೆ ಆಂಜನೇಯ ಸ್ವಾಮಿಯ ವೃಕ್ಷಸ್ಥಳದಲ್ಲಿ ಕಾಗದದ ತ್ರಿವರ್ಣ ಧ್ವಜ ಅಂಟಿಸಲಾಗಿದೆ. ಅದೇ ರೀತಿ ಬಲಗೈಯಲ್ಲೂ ತ್ರಿವರ್ಣ ಧ್ವಜ ಹಾರಾಡಿದೆ. ಗಣಪತಿ ಅಷ್ಟೋತ್ರ, ಆಂಜನೇಯ ಅಷ್ಟೋತ್ರ ಏಕಾರ್ತಿ, ಪಂಚಾರ್ತಿ ಮಾಡಿ ಬಳಿಕ ಮಹಾ ಮಂಗಳಾರತಿ ಮಾಡಲಾಯಿತು. ಈ ಮೂಲಕ ದೈವ ಭಕ್ತಿಯ ಜತೆಗೆ ದೇಶಭಕ್ತಿಯೂ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಮೊಳಗಿದೆ.
Advertisement
ಈ ಅಪರೂಪದ ದೃಶ್ಯವನ್ನು ಕಂಡು ಭಕ್ತಾದಿಗಳು ಪುಳಕಿತರಾಗಿದ್ದು, ದೇವಸ್ಥಾನ ಸಿಬ್ಬಂದಿಯ ದೇವರ ಮೇಲಿನ ಭಕ್ತಿ ಹಾಗೂ ದೇಶಭಕ್ತಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.