PFI Ban: ಬೆಂಗಳೂರಿಗೆ ಟ್ರಿಬ್ಯೂನಲ್ ಟೀಂ – ಪಿಎಫ್‍ಐ ಪರ-ವಿರೋಧ ದೂರು ನೀಡಲು ಅವಕಾಶ
- ಕೇರಳ, ತಮಿಳುನಾಡಿನ ಬಳಿಕ ಬೆಂಗಳೂರಿಗೆ ಟ್ರಿಬ್ಯೂನಲ್ ಟೀಂ

ಬೆಂಗಳೂರು: 2047ಕ್ಕೆ ಭಾರತವನ್ನು (India) ಮುಸ್ಲಿಂ ದೇಶವನ್ನಾಗಿ ಮಾಡ್ಬೇಕು ಅಂತ ಹಗಲು ಕನಸುಕಂಡಿದ್ದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (PFI) ಈಗ ಬ್ಯಾನ್ (Ban) ಆಗಿದೆ. ಆದ್ರೆ, ಕೇಂದ್ರ ಸರ್ಕಾರದ ಈ ಆದೇಶಕ್ಕೆ ನ್ಯಾಯಾಲಯದ ಟ್ರಿಬ್ಯೂನಲ್ (Tribunal) ಇದೆ. ಇದೀಗ ಟ್ರಿಬ್ಯೂನಲ್ ಟೀಂ ಬೆಂಗಳೂರಿಗೆ (Bengaluru) ಆಗಮಿಸಲಿದೆ.
ಪಿಎಫ್‍ಐ ಒಂದು ಉಗ್ರ ಸಂಘಟನೆ ಇದರಿಂದ ಅಮಾಯಕರು ಜೀವ ಕಳೆದು ಕೊಳ್ಳುತ್ತಿದ್ದಾರೆ. ದೇಶದ ಶಾಂತಿಗೆ ಭಂಗ ಆಗುತ್ತಿದೆ ಅಂತ ಕೇಂದ್ರ ಸರ್ಕಾರ ಪಿಎಫ್‍ಐಗೆ ನಿಷೇಧ ಹೇರಿದೆ. ಆದ್ರೆ, ನಿಷೇಧದ ಬಳಿಕ ಸಂಘಟನೆ ನ್ಯಾಯಾಧೀಕರಣದ ಮೊರೆ ಹೋಗಿ ತಮ್ಮದು ಉಗ್ರ ಸಂಘಟನೆ ಅಲ್ಲ ಅನ್ನೋದಕ್ಕೂ ಅವಕಾಶ ಇದೆ. ಇದಕ್ಕಾಗಿಯೇ ಈಗ ದೇಶಾದ್ಯಂತ ಟ್ರಿಬ್ಯೂನಲ್ ಕೆಲಸ ಮಾಡುತ್ತಿದೆ. ಈಗಾಗಲೇ ಕೇರಳ, ತಮಿಳುನಾಡಿನಲ್ಲಿ ಟ್ರಿಬ್ಯೂನಲ್ ಟೀಂ ಕೆಲಸ ಮುಗಿಸಿ ಕರ್ನಾಟಕಕ್ಕೆ ಬರುತ್ತಿದೆ. ಜ.28ರಿಂದ ಮೂರು ದಿನ ಕರ್ನಾಟಕದಲ್ಲಿ ಕೆಲಸ ಮಾಡಲಿದೆ. ಇದನ್ನೂ ಓದಿ: PFI Ban – ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ನ್ಯಾಯಾಧಿಕರಣ ರಚಿಸಿದ ಕೇಂದ್ರ
ಏನಿದು ಟ್ರಿಬ್ಯೂನಲ್ ಟೀಂ:
ಟ್ರಿಬ್ಯೂನಲ್‍ನ ಕೆಲಸ ಅಂದರೆ ಆ ರಾಜ್ಯದಲ್ಲಿ ಪಿಎಫ್‍ಐ ಸಂಘಟನೆ ಕುಮ್ಮಕ್ಕಿನಿಂದ ನಡೆದಿರೋ ಕೊಲೆ ಪ್ರಕರಣಗಳ ಬಗ್ಗೆ ಮಾಹಿತಿ ಕಲೆ ಹಾಕೋದು. ಯಾವ ಉದ್ದೇಶಕ್ಕಾಗಿ ಈ ಕೊಲೆ ನಡೆದಿದೆ. ಕೊಲೆ ಮಾಡಿದ ಆರೋಪಿಗಳ ಹಿನ್ನೆಲೆ, ಕೊಲೆಯ ಹಿಂದೆ ಇದ್ದ ಹುನ್ನಾರ ಪ್ಲಾನ್‍ಗಳ ಬಗ್ಗೆ ತಿಳಿದುಕೊಳ್ಳುವುದಾಗಿದೆ. ಇದಕ್ಕಾಗಿಯೇ ಕರ್ನಾಟಕದಲ್ಲಿ ಪಿಎಫ್‍ಐ ಕುಮ್ಮಕ್ಕಿನಿಂದ ನಡೆದ ಹತ್ಯೆ ಬಗ್ಗೆ ತನಿಖೆ ಮಾಡಿದ ತನಿಖಾಧಿಕಾರಿಗಳಿಗೂ ನೋಟಿಸ್ ನೀಡಿದ್ದು ಇವರು ಟ್ರಿಬ್ಯೂನಲ್ ಮುಂದೆ ಹೇಳಿಕೆ ನೀಡಬೇಕಿದೆ.
ಬೆಂಗಳೂರಿಗೆ ಟ್ರಿಬ್ಯೂನಲ್ ಟೀಂ:
2016ರಲ್ಲಿ ನಡೆದ ರುದ್ರೇಶ್ ಹತ್ಯೆ ಪ್ರಕರಣ., 2019ರಲ್ಲಿ ಸಂಸದರ ಹತ್ಯೆಗೆ ಸ್ಕೆಚ್, ಕಾರ್ಯಕರ್ತನ ಮೇಲೆ ದಾಳಿ., 2021ರಲ್ಲಿ ನಡೆದ ಡಿಜೆಹಳ್ಳಿ – ಕೆಜೆಹಳ್ಳಿ ಗಲಾಟೆ., 2022ರಲ್ಲಿ ನಡೆದ ಪ್ರವೀಣ್ ನೆಟ್ಟಾರು (Praveen Nettar) ಹತ್ಯೆ ಪ್ರಕರಣಗಳ ಬಗ್ಗೆ ಟ್ರಿಬ್ಯೂನಲ್ ಟೀಂ ಮಾಹಿತಿ ಸಂಗ್ರಹಿಸಲಿದೆ. ಇದನ್ನೂ ಓದಿ: ಸಂಪೂರ್ಣ ನಿಷೇಧವಾಗುತ್ತಾ PFI – ಕೇಂದ್ರ ಸರ್ಕಾರದ ಮುಂದಿನ ಪ್ಲ್ಯಾನ್ ಏನು?
ಪಿಎಫ್‍ಐ ಬ್ಯಾನ್ ಆದ ಬಳಿಕ ಟ್ರಿಬ್ಯೂನಲ್ ಮುಂದೆ ಹೋಗಿದೆ. ಹೀಗಾಗಿ ಪರ ವಿರೋಧ ಎರಡಕ್ಕೂ ಅವಕಾಶ ಇದೆ. ಹೀಗಾಗಿ ಪಿಎಫ್‍ಐ ಪರವಾಗಿ ಅರ್ಜಿಯನ್ನು ನೀಡುವವರು ಮಾಹಿತಿಯನ್ನು ನೀಡುವವರು, ನ್ಯಾಯಾಧೀಕರಣ ಮುಂದೆ ಹೋಗಿ ಹೇಳಬಹುದಾಗಿದೆ. ಇದು ಸಾರ್ವಜನಿಕರಿಗೂ ಕೂಡ ಮುಕ್ತವಾಗಲಿದ್ದು ಜನವರಿ 28, 29 ಮತ್ತು 30 ರಂದು ಬೆಂಗಳೂರಿನಲ್ಲಿ ಟ್ರಿಬ್ಯೂನಲ್ ಟೀಂ ಇರಲಿದೆ.
Live Tv
Join our Whatsapp group by clicking the below link
https://chat.whatsapp.com/E6YVEDajTzH06LOh77r25k