ಭುವನೇಶ್ವರ: 17ನೇ ಲೋಕಸಭಾ ಚುನಾವಣೆ ಮುಗಿದು ದೇಶದ ಅತ್ಯಂತ ಕಿರಿಯ ಮಹಿಳಾ ಸಂಸದೆಯಾಗಿ ಒಡಿಶಾದ ಎಂಜಿನಿಯರಿಂಗ್ ಪದವೀಧರೆ ಚಂದ್ರನಿ ಮುರ್ಮು ಅವರು ಆಯ್ಕೆಯಾಗಿದ್ದಾರೆ.
ಈಗ ತಾನೇ ಬಿಟೆಕ್ ಪದವಿ ಮುಗಿಸಿದ್ದ ಕೆಯೊಂಜ್ಹಾರ್ ಜಿಲ್ಲೆಯ ತಿಕಾರ್ಗುಮು ಗ್ರಾಮದ ಮುರ್ಮು ಅವರು ಕೆಲಸಕ್ಕೆ ಸೇರಲು ಸಿದ್ಧರಾಗಿದ್ದರು. ಆದರೆ ಅದೃಷ್ಟ ಎಂಬುದು ಇಂದು ತನ್ನ 25 ವರ್ಷ ವಯಸ್ಸಿಗೆ ದೇಶದ ಕಿರಿಯ ಮಹಿಳಾ ಸಂಸದೆಯನ್ನಾಗಿ ಮಾಡಿದೆ.
Advertisement
ಓಡಿಶಾದ ಮುಖ್ಯಮಂತ್ರಿ ಮತ್ತು ಬಿಜು ಜನತಾ ದಳ (ಬಿಜೆಡಿ) ಮುಖ್ಯಸ್ಥ ನವೀನ್ ಪಟ್ನಾಯಕ್ ಅವರು ಒಡಿಶಾದ ಲೋಕಸಭಾ ಚುನಾವಣೆಯಲ್ಲಿ ಮಹಿಳೆಯರಿಗೆ ಶೇ.33 ರಷ್ಟು ಸ್ಥಾನಗಳನ್ನು ಮೀಸಲು ಇಟ್ಟಿದ್ದರು. ಇದರಂತೆ ಮುರ್ಮು ಅವರ ಕೆಯೊಂಜ್ಹಾರ್ ಕ್ಷೇತ್ರದ ಬಿಜೆಡಿ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದರು. ಇವರು ಎರಡು ಬಾರಿ ಸಂಸದರಾಗಿ ಆಯ್ಕೆಯಾಗಿದ್ದ ಬಿಜೆಪಿ ಅಭ್ಯರ್ಥಿ ಅನಂತ್ ನಾಯಕ್ ಅವರನ್ನು 67,822 ಮತಗಳಿಂದ ಸೋಲಿಸಿ ದೇಶದ ಕಿರಿಯ ಮಹಿಳಾ ಸಂಸದೆಯಾಗಿ ಆಯ್ಕೆಯಾಗಿದ್ದಾರೆ.
Advertisement
Advertisement
ಚಂದ್ರನಿ ಮುರ್ಮು ಅವರ ತಂದೆ ಸಂಜೀವ್ ಮುರ್ಮು ಅವರು ಸರ್ಕಾರಿ ಉದ್ಯೋಗಿಯಾಗಿದ್ದು ತಾಯಿ ಉರ್ಬಶಿ ಸೋರೆನ್ ಗೃಹಣಿ. ಈ ಗೆಲುವಿನ ಬಗ್ಗೆ ಮಾತನಾಡಿರುವ ಮುರ್ಮ ಅವರು,”ನಾನು ಎಂಜಿನಿಯರಿಂಗ್ ಮುಗಿದ ನಂತರ ಕೆಲಸವನ್ನು ಹುಡುಕುತ್ತಿದ್ದೆ. ನಾನು ರಾಜಕೀಯಕ್ಕೆ ಬರುತ್ತೇನೆ ಸಂಸತ್‍ನ ಸದಸ್ಯೆ ಆಗುತ್ತೇನೆ ಎಂದು ನಾನು ಯಾವತ್ತು ಅಂದುಕೊಂಡಿರಲಿಲ್ಲ. ನಾನು ಅನಿರೀಕ್ಷಿತವಾಗಿ ನಾಮಪತ್ರ ಸಲ್ಲಿಸಿದ್ದೆ ಆದರೆ ಗೆದ್ದಿದ್ದೇನೆ ನನಗೆ ತುಂಬ ಸಂತೋಷವಾಗಿದೆ” ಎಂದು ಹೇಳಿದ್ದಾರೆ.
Advertisement
ನಾನು ಪ್ರಚಾರಕ್ಕೆ ಹೋದಾಗ ಕೆಲವರು ನನ್ನ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಿದ್ದರು. ನನ್ನ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿಯನ್ನು ಹಬ್ಬಿಸಿದ್ದರು. ನನ್ನ ರಾಜಕೀಯ ಜೀವನವನ್ನು ಹಾಳು ಮಾಡಲು ಹಲವಾರು ಅಡಚಣೆಗಳನ್ನು ಮಾಡಿದರು. ಈ ಎಲ್ಲಾ ಅಡಚಣೆಗಳನ್ನು ಎದುರಿಸಿ ನಾನು ಇಂದು ಸಂಸದೆಯಾಗಿರುವುದು ನನಗೆ ಖುಷಿಯಾಗಿದೆ ಎಂದು ಹೇಳಿದರು.
ಹಿಂದೆ 16ನೇ ಲೋಕಸಭಾ ಚುನಾವಣೆಯಲ್ಲಿ ಹರಿಯಾಣದ ಹಿಸ್ಸಾರ್ ಕ್ಷೇತ್ರದ ಪ್ರಖ್ಯಾತ ರಾಜಕಾರಣಿ ಓಂ ಪ್ರಕಾಶ್ ಚೌಟಲಾ ಅವರ ಮೊಮ್ಮಗ ದುಷ್ಯಂತ್ ಚೌತಾಲ ಅವರು ಕಿರಿಯ ಸಂಸದರಾಗಿ ಆಯ್ಕೆಯಾಗಿದ್ದರು.